Home State ಕಾಂಗ್ರೇಸ್ ಅಲ್ಪ ಸಂಖ್ಯಾತರ ಬ್ಲಾಕ್ ಅದ್ಯಕ್ಷರಾಗಿ ಸಲೀಂ ಪಟೇಲ್ ಆಯ್ಕೆ.

ಕಾಂಗ್ರೇಸ್ ಅಲ್ಪ ಸಂಖ್ಯಾತರ ಬ್ಲಾಕ್ ಅದ್ಯಕ್ಷರಾಗಿ ಸಲೀಂ ಪಟೇಲ್ ಆಯ್ಕೆ.

by vegadhut@gmail.com.
0 comments

ಸಿಂದಗಿ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪಗರಿ ಅವರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ ಅವರ ಅನುಮೋದನೆ ಹಾಗೂ ಆದೇಶದ ಮೇರೆಗೆ ಪಟ್ಟಣದ ನಿವಾಸಿ ಸಮಾಜ ಸೇವಕ ಸಲೀಮ್ ಪಟೇಲ್ ಮರ್ತೂರ ಅವರನ್ನು ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಿಸಿ ಜಿಲ್ಲಾಧ್ಯಕ್ಷ ಶಕೀಲ್ ಅಹ್ಮದ ಬಾಗಮಾರೆ ಅವರು ಆದೇಶ ಹೊರಡಿಸಿದ್ದಾರೆ.

ಸಮಾಜಮುಖಿ ಕಾರ್ಯ, ಪಕ್ಷ ನಿಷ್ಠೆಯ ಕಾರ್ಯವನ್ನು ಗುರುತಿಸಿ ಸ್ಥಳೀಯ ಶಾಸಕ ಅಶೋಕ ಮನಗೂಳಿ ಅವರ ಆದೇಶದ ಮೇರೆಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಸಮಾಜದ ಹಿರಿಯ ಹಾಗೂ ಯುವಕರನ್ನು ಭೇಟಿ ನೀಡಿ ಪಕ್ಷದ ಹಾಗೂ ಸ್ಥಳೀಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ತಿಳಿಸಿ ಪಕ್ಷದ ಜೊತೆಗೆ ಸಂಘಟನೆಯನ್ನು ಬೆಳೆಸುವ ಕಾರ್ಯ ನಿಮ್ಮಿಂದಾಗಬೇಕು ಎಂದು ತಿಳಿಸಿದ್ದಾರೆ. ತಾವುಗಳು ಹಾಗೂ ಸ್ಥಳೀಯ ಶಾಸಕರು ನನ್ನ ಮೇಲೆ ವಿಶ್ವಾಸವನ್ನಿಟ್ಟು ತಾವು ವಹಿಸಿದ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತ್ತು ಅವಕಾಶ ಕಲ್ಪಿಸಿಕೋಟ್ಟ  ಶಾಸಕರಾದ ಻ಶೋಕ ಮನಗೂಳಿ ಹಾಗೂ ಪಕ್ಷದ ವರಿಷ್ಠರು ಹಾಗೂ ಮುಖಂಡರಿಗೆ ಧನ್ಯವಾದಗಳು ಎಂದು ಅಲ್ಪಸಂಖ್ಯಾತರ ಘಟಕದ ನೂತನ ತಾಲೂಕ  ಅಧ್ಯಕ್ಷ ಸಲೀಮ್‌ಪಟೇಲ್ ಮರ್ತೂರ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news