ಲೊಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೋಳಿ ಅವರು ಸಿಂದಗಿ ಮತಕ್ಷೇತ್ರಕ್ಕೆ ಸಿ.ಸಿರಸ್ತೆ ಮತ್ತು ಡಾಂಬರಿಕರಣಕ್ಕಾಗಿ 27 ಕೋಟಿ ಮಂಜೂರು ಮಾಡಿದ್ದಾರೆ ೆಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ : ಪಟ್ಟಣದ ಬಹುದಿನಗಳ ಬೇಡಿಕೆಯಾದ ಸಿಂದಗಿ ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಬಂದಾಳ ರಸ್ತೆ 0.00 ಕಿ.ಮೀ ನಿಂದ 0.94 ಕಿ.ಮೀ ವರೆಗೆ ಸಿಸಿ ರಸ್ತೆ 2 ಕೋಟಿ ಅನುದಾನದ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಸಿಂದಗಿ ನಗರ 97 ಕಿ.ಮೀ ರಸ್ತೆ ಹೊಂದಿದ್ದು ಕೇವಲ 15 ರಿಂದ 20 ಕಿ.ಮೀ ರಸ್ತೆ ಮಾತ್ರ ಆಗಿದೆ. ಇನ್ನು 70 ಕಿ.ಮೀ ರಸ್ತೆ ಆಗಬೇಕು ಎಂಬುದು ಜನರ ಬೇಡಿಕೆ ಇದೆ. ಜನರ ಹಲವು ಟೀಕೆ ಟಿಪ್ಪಣಿ ಎದುರಿಸಿ ಕೆಲಸ ಮಾಡಬೇಕಿದೆ.
ಇನ್ನು ಮೂರು ವರ್ಷದ ಕಾಲಾ ಅವಧಿಯಲ್ಲಿ ಸಿಂದಗಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.
ಪುರಸಭೆ ನಾಮ ನಿರ್ದೇಶಿತ ಸದಸ್ಯ ಸಾಯಭಣ್ಣ ಪುರದಾಳ ಮಾತನಾಡಿ ಶಾಸಕರ ಅವಧಿಯಲ್ಲಿ ಪೂರ್ಣಗೊಂಡ ಸಂಗಮಾಬಾರ ಎದುರುಗಡೆ ಇರುವ ನೂತನ ಸಿಸಿ ರಸ್ತೆ ಕುರಿತು ಜನರು ಮೇಚ್ಚುಗೆಯ ಮಾತನಾಡುತ್ತಿದ್ದಾರೆ ಈ ರಸ್ತೆ ಅದೇ ರೀತಿಯಲ್ಲಿ ಗುಣಮಟ್ಟದಿಂದ ಕೂಡಿರಲ್ಲಿ ಎಂದು ಗುತ್ತಿಗೆದಾರ ರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಂದೀಪ ಚೌರ ಲೊಕೋಪಯೀಗಿ ಇಲಾಖೆಯ ಎ ಡಬ್ಲೂ ಇ ಅರುಣಕುಮಾರ ವಡಗೇರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ, ಪ್ರವೀಣ ಕಂಟಿಗೊಂಡ , ಅರವಿಂದ ಹಂಗರಗಿ, ಚೇತನಗೌಡ ಪಾಟೀಲ , ರವಿ ಬಮ್ಮಣ್ಣಿ, ಬಸವರಾಜ ಶೀಲವಂತ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಸುನಂದಾ ಯಂಪೂರೆ, ಮಾನಂದಾ ಬಮ್ಮಣ್ಣ, ರಮೇಶ ಹೂಗಾರ, ಪರಸು ಉಪ್ಪಾರ, ರಜತ್ ತಾಂಬೆ, ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
