
ವಿಜಯಪುರ : 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಅಕ್ಟೋಬರ 28 ರಂದು ವಿಜಯಪುರ ಜಿಲ್ಲೆಯಾದ್ಯಂತ ಕೋಟಿ ಕಂಠ ಗಾಯನ `ನನ್ನ ನಾಡು -ನನ್ನ ಹಾಡು’ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದ್ದು, ಈ ಅರ್ಥಪೂರ್ಣ ಕಾರ್ಯಕ್ರಮದ ಯಶಸ್ವಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗುತ್ತಿರುವ `ಕೋಟಿ ಕಂಠ ಗಾಯನ ಕಾರ್ಯಕ್ರಮ ಕುರಿತು ಪೂರ್ವ ಸಿದ್ದತಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೆ 5 ಲಕ್ಷ ಜನರಿಂದ ಸಮೂಹ ಗೀತೆ ಗಾಯನವನ್ನು ಏರ್ಪಡಿಸಲು ಸಂಖ್ಯೆ ನಿಗದಿಪಡಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ‘ ಕೋಟಿ ಕಂಠ ಗಾಯನ’ ಕಾರ್ಯಕ್ರಮ ಸರ್ಕಾರದಿಂದ ನಡೆಸಲಾಗುತ್ತದೆ.
ಕಾರ್ಯಕ್ರಮ ಯಶಸ್ವಿಗೆ ಎಲ್ಲ ರೀತಿಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ತಾಲೂಕಿನ ತಹಶೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗೋಲ್ ಗುಂಬಜನಲ್ಲಿ ವಿಶೇಷ ಕಾರ್ಯಕ್ರಮ :
ಅಕ್ಟೋಬರ್ 28ರಂದು ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ೧೧ಗಂಟೆಗೆ ಗೋಲ್ ಗುಂಬಜ್‌ನ ಮೂಸಿಯಂ ಮುಂಭಾಗದಲ್ಲಿ ವೇದಿಕೆ ನಿರ್ಮಾಣ ಮಾಡಿ ಸುಮಾರು ೩೦೦೦ ಜನರಿಂದ ಕೋಟಿ ಕಂಠ ಸಮೂಹ ಗೀತೆ ಗಾಯನ ಏರ್ಪಡಿಸಬಹುದಾಗಿದೆ ಎಂದರು.
ಜಿಲ್ಲೆಯ ಐತಿಹಾಸಿಕ ಸ್ಮಾರಕ ಗೋಲ್ ಗುಂಬಜ್ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಅಕ್ಟೋಬರ್ 28ರ ಬೆಳಗ್ಗೆ 11ಗಂಟೆಗೆ ಏಕಕಾಲದಲ್ಲಿ ಕೋಟಿ ಕಂಠ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ.
ಇದು ರಾಜ್ಯಾದ್ಯಂತ ಏಕ ಕಾಲದಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಸಲು ಎಲ್ಲ ರೀತಿಯ ಸಕಲ ಸಿದ್ದತೆಗಳನ್ನು ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ರಾಹುಲ್ ಶಿಂಧೆ ತಿಳಿಸಿದರು.
ಅಕ್ಟೋಬರ್ -೨೮ರಂದು ನಡೆಯುವ ಕೋಟಿ ಕಂಠ ಗಾಯನದಲ್ಲಿ *ನನ್ನ ನಾಡು – ನನ್ನ ಹಾಡು* ಸಮೂಹ ಗೀತ ಗಾಯನದಲ್ಲಿ ಕುವೆಂಪು ವಿರಚಿತ ನಾಡಗೀತೆ, ಹುಯಿಲಗೋಳ ನಾರಾಯಣರಾಯರ “ಉದವಾಗಲಿ ನಮ್ಮ ಚೆಲುವ ಕನ್ನಡನಾಡು“, ರಾಷ್ಟ್ರ ಕವಿ ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಮವ‘, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ.ಚೆನ್ನವೀರ ಕಣವಿಯವರ ‘ವಿಶ್ವವಿನೂತ ವಿದ್ಯಾಚೇತನ’ ಹಾಗೂ ಡಾ.ಹಂಸಲೇಖರವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಗುತ್ತಿದೆ ಎಂದರು.
ಈ ಗೀತೆಗಳ ಚರಣ ಹಾಗೂ ಸಂಗೀತ ಸಂಯೋಜನೆಯ ಕರೋಕಿ ಲಿಂಕ್ : https://youtube.com/playlist… ಕನ್ನಡ ನಾಡು-ನುಡಿ ಹಿರಿಮೆ ಸಾರುವ ಕನ್ನಡ ಗೀತೆಗಳ ಗಾಯನ ಮೇಲ್ಕಂಡ ಯುಟ್ಯೂಬ್ ಮೂಲಕ ಪಡೆಯಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ಕನ್ನಡ ನಾಡು-ನುಡಿ ಅಭಿಮಾನವನ್ನು ಸಾಕ್ಷಿಕರಿಸುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ನಡೆಯುವ ಕೋಟಿ ಕಂಠ ಗಾಯನಕ್ಕೆ ವಿವಿಧ ಇಲಾಖೆ, ಸಂಘ ಸಂಸ್ಥೆಗಳ, ಶಾಲಾ ಕಾಲೇಜಿನ ಮುಖ್ಯಸ್ಥರಿಗೆ ನಿಗದಿಪಡಿಸಿದೆ ಸಂಖ್ಯೆಗೆ ಅನುಗುಣವಾಗಿ ಗಾಯನಕ್ಕೆ ಜನರನ್ನು ಆಹ್ವಾನಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಅವರು ಕೋರಿದರು.
ಪೂರ್ವ ಸಿದ್ಧತಾ ಸಭೆಯಲ್ಲಿನಗರಾಭಿವೃದ್ಧಿ ಕೋಶದ ರಾಜಶೇಖರ್ ಡಂಬಳ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರನ್ನವರ,ಡಿವೈ ಎಸ್ ಪಿ ಸಿದ್ಧೇಶ್ವರ, ತೋಟಗಾರಿಕಾ ಉಪ ನಿರ್ದೇಶಕ ಬರಗೀಮಠ,ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸಿದ್ಧರಾಮ ಮಾರಿಹಾಳ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಪ್ಪ ಆಶಾಪೂರ, ಕ್ರೀಡಾಧಿಕಾರಿ ಎಸ್.ಜಿ.ಲೋಣಿ, ಸಮಾಜ ಕಲ್ಯಾಣ ಇಲಾಖೆಯ ಟಿ.ವಿ.ಮಂಟೂರು ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ತಹಶಿಲ್ದಾರರು ಸೇರಿದಂತೆ ತಾಲೂಕಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು.
*ಕೋಟಿ ಕಂಠ ಗಾಯನಕ್ಕೆ ನೋಂದಣಿ*
ಜಿಲ್ಲೆಯಾದ್ಯAತ ಹಮ್ಮಿಕೊಂಡ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಬಹುದಾಗಿದ್ದು, ಆಸಕ್ತರು ಈ ಅಭಿಯಾನದಲ್ಲಿ ಆನಲೈನ್ ಲಿಂಕ್ ಬಳಸಿ ಅಕ್ಟೋಬರ್ ೧೧ರಿಂದ ೨೮ರವರೆಗೆ ಹೆಸರು ನೋಂದಣಿ ಮಾಡಿಕೊಳ್ಭಹುದಾಗಿದೆ. https://kannadasiri.karnataka. gov.in/kkg/public/ ಮೂಲಕ ಅಕ್ಟೋಬರ ೨೮ ರೊಳಗಾಗಿ ಹೆಸರು ನೋಂಣಿ ಮಾಡಿಕೊಳ್ಳಬಹುದಾಗಿದೆ. ಸ್ವಯಂ ಚಾಲಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಆನ್‌ಲೈನ್ ಪ್ರಮಾಣ ಪತ್ರ ನೀಡಲಾಗುತ್ತದೆ.

