Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಸಿಡಿಲ ಹೊಡೆತಕ್ಕೆ ಬಲಿಯಾದ ಯುವಕನ ಮನೆಗೆ ಶಾಸಕ ಅಶೋಕ ಭೇಟಿ.

ಸಿಂದಗಿ : ಮತಕ್ಷೇತ್ರದ ಕನ್ನೋಳ್ಳಿ ಗ್ರಾಮದಲ್ಲಿ ಮೇ ತಿಂಗಳಿನಲ್ಲಿ ಸಿಡಿಲು ಹೊಡೆತಕ್ಕೆ ಬಲಿಯಾದ ಘಟನೆ ಜರುಗಿತ್ತು. ನಿಮಿತ್ತವಾಗಿ ಸರ್ಕಾರದಿಂದ ನೊಂದ ಕುಟುಂಬಕ್ಕೆ ಪರಿಹಾರ ನೀಡಿ  ಸಾಂತ್ವನ ಹೇಳಲು ತಾಲೂಕಾ ಆಡಳಿತದೊಂದಿಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದರು. ಸಾಂತ್ವಾನ ಹೇಳಿ ಮಾತನಾಡಿದ…

ಸಿಂದಗಿ : ಮತಕ್ಷೇತ್ರದ ಕನ್ನೋಳ್ಳಿ ಗ್ರಾಮದಲ್ಲಿ ಮೇ ತಿಂಗಳಿನಲ್ಲಿ ಸಿಡಿಲು ಹೊಡೆತಕ್ಕೆ ಬಲಿಯಾದ ಘಟನೆ ಜರುಗಿತ್ತು. ನಿಮಿತ್ತವಾಗಿ ಸರ್ಕಾರದಿಂದ ನೊಂದ ಕುಟುಂಬಕ್ಕೆ ಪರಿಹಾರ ನೀಡಿ  ಸಾಂತ್ವನ ಹೇಳಲು ತಾಲೂಕಾ ಆಡಳಿತದೊಂದಿಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದರು.

ಸಾಂತ್ವಾನ ಹೇಳಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಪ್ರಕೃತಿಯ ವಿಕೋಪಕ್ಕೆ ಇಂದು ನಮ್ಮೊಂದಿಗೆ ದಿ.ಸಿದ್ದು‌ ಚನ್ನಪ್ಪ  ಯಂಕಂಚಿ ಅಗಲಿದ್ದು ಅತೀವ ನೋವು ತಂದಿದೆ. ಅವರು ಕುಟುಂಬಸ್ಥರು ದಿಗ್ಭ್ರಮೆ ಆಗಿದ್ದು  ನೋವಿನಲ್ಲಿದ್ದಾರೆ.  ನಾವು ಎನೇ ಮಾಡಿದರು ಅವರು ಕಳೆದು ಕೊಂಡವರನ್ನು ತಂದು ಕೊಡಲು ಆಗುವುದಿಲ್ಲ  ಆದರೆ ಸರಕಾರದ ಪರವಾಗಿ ನಾವು ಕುಟುಂಬಸ್ಥರ ಪರ ನಿಲ್ಲಬೇಕಾದದ್ದು ನಮ್ಮ ಮಾನವೀಯತೆ, ಮತ್ತು ಕರ್ತವ್ಯ ಆದರಿಂದ ಈಗಾಗಲೇ  ಆಡಳಿತ ಅಧಿಕಾರಿಗಳಿಂದ 5 ಲಕ್ಷರೂ ಅವರ ತಂದೆ ಚನ್ನಪ್ಪ ಸಾಯಬಣ್ಣ ಯಂಕಂಚಿ ಇವರ ಖಾತೆಗೆ ಜಮೆಯಾಗಿದ್ದು  ಕ್ಷೇತ್ರಾದ್ಯಂತ  ಮಾನವಹಾನಿ ಹಾಗೂ ಪ್ರಾಣಿಹಾನಿ ಸೇರಿ  ಒಟ್ಟು 7ಲಕ್ಷ 58ಸಾವಿರ ರೂ ಜಮೆಯಾಗಿದ್ದು  ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಸರ್ಕಲ್ ಕಾಸಿಂ ಮಕಾಂನದಾರ, ಶಿವಪುತ್ರ ಕರನಳ , ಪ್ರವೀಣ ಕಂಟಿಗೊಂಡ, ಜಿಲಾನಿ ನಾಟೀಕಾರ, ವಿಜುಗೌಡ ಪಾಟೀಲ, ರಾಮು ಖೇಡಗಿ, ರಾಚಪ್ಪ ತಂಬಾಕೆ, ಸಿದ್ದಣ್ಣ ಯಾಳಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

vegadhut@gmail.com.

Leave a comment