Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ

ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಅಳವಡಿಸಿದ ಶುದ್ಧ ನೀರಿನ ಘಟಕಕ್ಕೆ ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಚಾಲನೆ ನೀಡಿದರು.   ಸಿಂದಗಿ: ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಅತ್ಯಾಧುನಿಕ ಹಾಗೂ ದೊಡ್ಡ ಪ್ರಮಾಣದ ಶುದ್ಧ ಕುಡಿಯುವ ನೀರಿನ…

ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಅಳವಡಿಸಿದ ಶುದ್ಧ ನೀರಿನ ಘಟಕಕ್ಕೆ ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಚಾಲನೆ ನೀಡಿದರು.

 

ಸಿಂದಗಿ: ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಅತ್ಯಾಧುನಿಕ ಹಾಗೂ ದೊಡ್ಡ ಪ್ರಮಾಣದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಳವಡಿಕೆ ಮಾಡಲಾಯಿತು. ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಚಾಲನೆ ನೀಡಿದರು.

ಈ ಕುರಿತು ಮಾತನಾಡಿದ ಲಿಕ್ವಿ ಕ್ಲಿಯರ್ ವಿತರಕರು ಹಾಗೂ ಸೌಮ್ಯಾ ಎಂಟರ್‌ ಪ್ರೈಸಸ್ ಮಾಲೀಕರಾದ ಸಂದೀಪ ಪಾಟೀಲ ಪ್ರಪ್ರಥಮ ಬಾರಿಗೆ ಸಿಂದಗಿಯಲ್ಲಿ ದೊಡ್ಡ ಪ್ರಮಾಣದ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಲಾಗಿದ್ದು ಈ ಶುದ್ದ ನೀರಿನ ಘಟಕವು ಒಂದು 1000 ಲೀ ಸಾಮರ್ಥ್ಯ ಹೊಂದಿದ್ದು, ಅತೀ ಕಡಿಮೆ ನೀರಿನ ವೆಸ್ಟೇಜ್ ಹೊಂದಿದೆ, ಕಡಿಮೆ ವಿದ್ಯುತ್, ಸುಲಭ ನಿರ್ವಹಣೆ ಹಾಗೂ ದೇಹಕ್ಕೆ ಬೇಕಾದ ಮಿನರಲ್ಸ್ಗಳನ್ನು ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೀರಿನ ಘಟಕವು ಇತರೆ ಪ್ಯೂರಿಫೈಯರ್‌ಗಳಿಗೆ ಹೋಲಿಸಿ ನೋಡಿದರೆ ಉತ್ತಮ ಹಾಗೂ ನೈಸರ್ಗಿಕವಾದ ನೀರನ್ನು ನೀಡುತ್ತದೆ. ಸಾವಿರಾರು ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಠಿಯಿಂದ ದೊಡ್ಡ ಪ್ರಮಾಣದ ನೀರಿನ ಅಳವಡಿಕೆ ಮಾಡಿಸಿದ ಶ್ರೀಗಳಿಗೆ ಹಾಗೂ ಆಡಳಿತ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಪ್ರಾಚಾರ್ಯರಾದ ಜೆ.ಸಿ.ನಂದಿಕೋಲ, ಶರಣು ಜೋಗುರ, ವಿ.ಡಿ.ಪಾಟೀಲ, ಡಿ.ಎಸ್.ಮಠಪತಿ, ಎಸ್.ವಿ.ಚವ್ಹಾಣ, ಕವಿತಾ ರಾಠೋಡ, ಸಿ.ಜಿ.ಕತ್ತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು

 

vegadhut@gmail.com.

Leave a comment