ಸಿಂದಗಿ: ಪಟ್ಣಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು, ಭಾ.ಜ.ಪ ಪಕ್ಷವೇ ರಾಜ್ಯದ ಜನರ ನಿಜವಾದ ಪಕ್ಷ. ಅಭಿವೃದ್ಧಿಗೆ ಬಿಜೆಪಿ ಬಿಟ್ಟೆರ ಬೇರೆ ಪರ್ಯಾಯ ಯಾವುದಿಲ್ಲ ಎಂಬುದು ಜನರಿಗೆ ಮನವರಿಕೆ ಮಾಡುತ್ತಿದ್ದೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಣಣದ 12 ನೇ ವಾಡನಲ್ಲಿ ಮನೆ ಮನೆ ಸಂಪರ್ಕದ ಎರಡನೇ ದಿನದ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜ.21 ರಂದು ವಿಜಯ ಸಂಕಲ್ಪ ಅಭಿಯಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದ ಅನ್ವಯದಂತೆ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಮತಕ್ಷೇತ್ರದ ಸಾವಿರಾರು ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ಕರಪತ್ರ ಮತ್ತು ಸ್ಟಿಕ್ಕರ್ ಹೆಚ್ಚುವುದು. ಪ್ರತಿ ಭೂತಗಳಲ್ಲಿ ಗೋಡೆ ಬರಹ ಸದಸ್ಟತ್ವ ಅಭಿಯಾನ ಮಾಡಲಾಗುತ್ತಿದೆ. ಮತಕ್ಷೇತ್ರದ 271 ಭೂತಗಳಲ್ಲಿ ಬಿಜೆಪಿ ಪಕ್ಷದ ಸಾಧನೆ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ಪಕ್ಷದ ಸಾವಿರಾರು ಕಾರ್ಯಕರ್ತರು, ಪಕ್ಷದ ಮುಖಂಡರು, ಹಿರಿಯರು ಭಾಗವಹಿಸಿದ್ದಾರೆ.
ಇದೇ ವೇಳೆ ಮನೆ ಮನೆ ಸಂಪರ್ಕ ಅಭಿಯಾನದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಮಾತನಾಡಿ, ಸಿಂದಗಿ ಪಟ್ಣಣದಲ್ಲಿ ರಸ್ತೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ ಕಾಮಗಾರಿ ಆರಂಭ ಮಾಡಿತು. ವಿಶೇಷ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರಾಜಕುಮಾರ ಗೌಂಡಿ, ಶಿವಕುಮಾರ ಬಿರಾದಾರ, ಚಂದ್ರಶೇಖರ ಅಮಲ್ಯಾಳ, ಸಿದ್ದಲಿಂಗಯ್ಯ ಹಿರೇಮಠ, ಮಹಿಳಾ ಮೋರ್ಚಾ ತಾಲೂಕಾಧ್ಯೆಕ್ಷೆ ಸುನಂದಾ ಯಂಪುರೆ, ಪ್ರಕಾಶ ನಂದಿಕೂಲ, ಶಿವು ಹಳಿಮನಿ, ಶಿವರಾಜ ಗಿರಿಗೌಡರ, ಅನುಸುಯ ಪರಗೂಂಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು…