Home Uncategorized ಫೆಬ್ರವರಿ 2 ರಂದು ದಿ.ಶಿವಾನಂದ ಪಾಟೀಲ ಸೋಮಜಾಳ ರವರಿಗೆ ನುಡಿನಮನ ಕಾರ್ಯಕ್ರಮ

ಫೆಬ್ರವರಿ 2 ರಂದು ದಿ.ಶಿವಾನಂದ ಪಾಟೀಲ ಸೋಮಜಾಳ ರವರಿಗೆ ನುಡಿನಮನ ಕಾರ್ಯಕ್ರಮ

by vegadhut@gmail.com.
0 comments

ಸಿಂದಗಿ :   ಜ್ಯಾತ್ಯಾತೀತ ಜನತಾದಳದ ಜಿಲ್ಲೆಯ ಮೊಟ್ಟ  ಮೊದಲ  ಬುನಾದಿ ಸಿಂದಗಿ ಮತಕ್ಷೇತ್ರವಾಗಿತ್ತು. ಅಂದು ದಿ.ಎಂ.ಸಿ.ಮನಗೂಳಿ ಅವರ ಅಗಲಿಕೆಯಿಂದ  ಅನಾಥವಾದರೆ ಇಂದು ಶಿವಾನಂದ ಪಾಟಿಲ ಅವರ  ಅಗಲಿಕೆಯಿಂದ ಕ್ಷೇತ್ರ ಅನಾಥವಾಗಿದೆ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಹೇಳಿದರು.

ದಿ.ಶಿವಾನಂದ ಪಾಟೀಲ ಸೋಮಜಾಳ ರವರ ಮನೆಯಲ್ಲಿ  ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು   ಪಕ್ಷ ಪುನಃ ಸದೃಡವಾಗಿ ಮತ್ತೇ ಅಧಿಕಾರ ಚುಕ್ಕಾಣಿ ಹಿಡಿಯುವ ಭರವಸೆ ಮೂಡಿಸಿದ ಕೆಲವೇ ದಿನಗಳಲ್ಲಿ ನಮ್ಮಗೆ ಹಾಗೂ ಪಕ್ಷಕ್ಕೆ ದೊಡ್ಡ  ಆಘಾಥ ಅಪಳಿಸಿದ್ದು ಶಿವಾನಂದ ಪಾಟೀಲರ ಅಗಲಿಕೆಯಾಗಿದೆ.  ಪಾಟೀಲರ ಸೇವೆ ಕ್ಷೇತ್ರದ ಜನತೆಗೆ ಬಹಳ ಅವಶ್ಯಕವಿತ್ತು ಅವರು ಕೋವೀಡ್ ಸಂಧರ್ಭದಲ್ಲಿ ಹಾಗೂ ಬಡ ಜನತೆ ಅವರ ಮನೆ ಬಾಗಿಲಿಗೆ ಬಂದವರು ಬರಿಗೈಲಿ ಹೋಗುತ್ತಿರಲಿಲ್ಲಾ ಎಂಬ ಮಾತುಗಳು ಕೇಳಿಬರುತ್ತಿದ್ದು ಅಂತಹ ನಾಯಕರು ನಮ್ಮೊಂದಿಗೆ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿ ಬಂದು ಮಧ್ಯೆ ರಾತ್ರಿ ಹೋತ್ತಲ್ಲಿ ಅವರು ಸಾವಿನ ಸುದ್ಧಿ  ತಿಳಿದು ದಿಗ್ಬ್ರಮೆ ಯಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ   ಮತ್ತು ಎಚ್.ಡಿ ದೇವೆಗೌಡರ ಈ ಕ್ಷೇತ್ರಕ್ಕೆ  ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಮತಕ್ಷೇತ್ರಕ್ಕೆ ಹೇಚ್ಚು ಅನುದಾನ ನೀಡಿದ್ದರು. ಅಷ್ಟೇ ಅಲ್ಲದೆ ಮನಗೂಳಿ ಅವರು ಚಪ್ಪಲಿ ಬಿಟ್ಟು ತಿರುಗಾಡುವಾಗ ಅವರ ಬೆನ್ನೀಗೆ ನಿಂತು ಗುತ್ತಿಬಸವಣ್ಣ ಯೋಜನೆಗೆ ಸಹಕಾರ ನೀಡಿದರು  ಅದರ  ಪ್ರತಿಪಲವಾಗಿಯೇ  ಇಂದು ಗೋಲಗೇರಿಯಲ್ಲಿ ಜೋಡಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. 

ಸಿಂದಗಿ ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ಪಾಟೀಲರ ಅಗಲಿಕೆಗೆ  ಪೇಬ್ರವರಿ 02 ರಂದು ಶುಭನುಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜೆಡಿಎಸ್ ಕಾರ್ಯಕರ್ತರು ಹಾಗೂ ದಿ.ಶಿವಾನಂದ  ಪಾಟೀಲರ ಅಭಿಮಾನಿಗಳು  ಸೇರಿ ನಡೆಸುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಗಳಾದ  ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜಾಧ್ಯಕ್ಷರಾದ ಸಿ.ಎಮ್.ಇಬ್ರಾಹಿಂ, ಬಂಢೆಫ‍್ಫ  ಕಾಶೆಂಪುರ, ದೇವಾನಂಸ ಚವಾಣ ಸೇರಿದಂತೆ ಹಲವಾರು  ಮುಖಂಡರು  ನುಡಿ-ನಮನ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ. ಶಹಾಪುರ ಪೇಟ್ರೋಲ್ ಪಂಪ್ ಪಕ್ಕದಲ್ಲಿ ವೇದಿಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

banner

ಪತ್ರಿಕಾಗೋಷ್ಠಿಯಲ್ಲಿ ಆರ್.ಕೆ.ಪಾಟೀಲ, ಪ್ರಕಾಶ ಹಿರೇಕುರಬರ, ಮೋಮ್ಮದಸಾಬ ಉಸ್ತಾದ, ನಿಂಗರಾಜ ಬಗಲಿ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಹಾಗೂ ತಾಲೂಕಾ ಅಧ್ಯಕ್ಷ ದಾನಪ್ಪಗೌಡ ಚನ್ನಗೊಂಡ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news