Home Uncategorized ಕಾನೂನು ಗೌರವಿಸದೆ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ ; ಶಾಂತವೀರ ನಡೆಗೆ ಹಣಮಂತ ಸುಣಗಾರ ಆರೋಪ

ಕಾನೂನು ಗೌರವಿಸದೆ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ ; ಶಾಂತವೀರ ನಡೆಗೆ ಹಣಮಂತ ಸುಣಗಾರ ಆರೋಪ

by vegadhut@gmail.com.
0 comments

ಸಿಂದಗಿ:  ಪುರಸಭೆ ಅಧ್ಯಕ್ಷರು ಕರೆದ ಸಾಮಾನ್ಯ ಸಭೆಗೆ ಹಾಜರಾಗದೆ  ಭಿನಾಬಿಪ್ರಾಯ ಹೊಂದಿದ ಪುರಸಭೆ ಸದಸ್ಯರುಗಳು ಪ್ರವಾಸಿ ಮಂದಿರದಲ್ಲಿ  ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಪುರಸಭೆಯ ಅಧ್ಯಕ್ಷರಾದ  ಶಾಂತವೀರ ಮನಗೂಳಿ  ಸರಕಾರಿ ನಿಯಮಗಳು ಗಾಳಿಗೆ ತೂರಿದ್ದಾರೆ  ಕಾನೂನು ಬಾಹಿರವಾಗಿ ಕಳೆದ ಎಂಟು ತಿಂಗಳು ಗಳಿಂದ  ಅಧ್ಯಕ್ಷರಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ದಿನಾಂಕ 27 ಜನೇವರಿ 2022 ರಂದು ಪುರಸಭೆ ಸದಸ್ಯರು ಮಾಡಿರುವ ಮನವಿಯು ಮುಂದುವರೆದು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭೀವೃದ್ಧಿ ಕೋಶ ವಿಜಯಪುರ 05 ಪೆಬ್ರವರಿ 2022 ರಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಅಂದು ನಡೆದ ವೀಡಿಯೋ ಚಿತ್ರಿಕರಣ ಮಾಡಿದ ಸಿಡಿ ಹಾಗೂ  ಅವಿಶ್ವಾಸ ಗೋತ್ತುವಳಿ ವಿಷಯದ  ಕುರಿತು ಸ್ಪಷ್ಟವಾದ ಅಭಿಪ್ರಾಯದೊಂದಿಗೆ  ತುರ್ತಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಆದರು ವರದಿ ನೀಡದಿರುವುದಕ್ಕೆ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭೀವೃದ್ಧಿ ಕೋಶ ವಿಜಯಪುರ  ದಿನಾಂಕ 04 ಮಾರ್ಚ್ 2022 ರಂದು  ಉಪವವಿಭಾಗಾಧಿಕಾರಿಗಳಿಗೆ ಘಟನೆ ಕುರಿತು ವರದಿ ಸಲ್ಲಿಸಲು ಕೋರುತ್ತಾರೆ.   ಉಪವಿಭಾಗಾಧಿಕಾರಿಗಳ ಕಛೇರಿಯಿಂದ ಮಾರ್ಚ್ ತಿಂಗಳ 14, 2022 ರಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದರು ಸೂಕ್ತ ದಾಖಲೆಗಳು ವದಗಿಸದ ಪುರಸಭೆ ಮುಖ್ಯಾಧಿಕಾರಿಗಳು ಮೇಲಾಧಿಕಾರಿಗಳಿಗು  ಉತ್ತರಿಸದಿರುವುದು ಅಧಿಕಾರಿ ಹಾಗೂ ಆಡಳಿತ ವರ್ಗದ ವೈಪಲ್ಯಕ್ಕೆ ಕಾರಣವಾಗಿದೆ. ಉಪ ವಿಭಾಗಾಧಿಕಾರಿಗಳು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭೀವೃದ್ಧಿ ಕೋಶ ವಿಜಯಪುರ ಇವರಿಗೆ ದಿನಾಂಕ 13 ಎಪ್ರೀಲ್ 2022 ರಂದು ಪತ್ರ ಬರೆದು  ಇದುವರೆಗೆ ಪ್ರತ್ಯಕ  ಎರಡು  ಪತ್ರಗಳನ್ನು ಬರೆಯಲಾಗಿದೆ ಹಾಗೂ ಕಛೇರಿಗೆ ಖುದ್ದು ಹಾಜರಾದ ಸಂಧರ್ಭದಲ್ಲಿಯು,  ದೂರವಾಣಿ ಮುಖಾಂತರ    ತಿಳಿಸಿದರು ಯಾವುದೇ ಮಾಹಿತಿ ನೀಡದೆ ಇರುವ ಕಾರಣದಿಂದ  ಮರು ಪತ್ರ ಬರೆದಿದ್ದಾರೆ.   ಕಾನೂನು ಗೌರವಿಸದ ಅಧ್ಯಕ್ಷರು   ಸರ್ವಾಧಿಕಾರದ ನಡೆಯಿಂದ ಕಾನೂನು ಬಾಹಿರವಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ ಎಂದು ಪುರಸಭೆ ಸದಸ್ಯ ಹಣಮಂತ ಸುಣಗಾರ ಶಾಂತವೀರ ಮನಗೂಳಿ ನಡೆ ವಿರುದ್ದ ಅಸಮಾಧಾನ ಹೊರಹಾಕಿದರು.

banner

ಅಧಿಕೃತ್ತ  ಅ ವಿಶ್ವಾಸ ಸಭೆ ಇದುವರೆಗೂ ನಡೆದಿಲ್ಲಾ ನಡೆದಿರುವ ಒಂದು ಅವಿಶ್ವಾಸ ಗೋತ್ತುವಳಿ ಸಭೆ  ನ್ಯಾಯಾಲಯ ರದ್ದುಗೋಳಿಸಿದರೆ ಇನ್ನೊಂದು  ಸಭೆ ಕುರಿತು ವರದಿ ಕೇಳುತ್ತಿರುವ ಮೇಲಾಧಿಕಾರಿಗಳಿಗೆ ಉತ್ತರಿಸಲಾಗದೆ ವೈಪಲ್ಯದ ರಾಜಕಾರಣ ಮಾಡುತ್ತಿದ್ದಾರೆ.  ಅವಿಶ್ವಾಸ ಗೋತ್ತುವಳಿ ಮಾಡಿದ ತಕ್ಷಣ ಸಾಮಾನ್‍ಯ ಸಭೆ ಕರೆಯುವು  ಅಧ್ಯಕ್ಷರು  ಮೊದಲು ವಿಶ್ವಾಸ ಮತ ಯಾಚನೆ ಗಳಿಸಿ ಸಾಮಾನ್ಯ ಸಭೆ ಕರೆಯಲಿ  ಎಂದು ಸದಸ್ಯ ಬಸವರಾಜ  ಯರನಾಳ ಹೇಳಿದರು.

ಸಿಂದಗಿ ಅಭಿವೃದ್ಧಿ ಕುಂಠಿತಗೊಂಡಿವೆ ಎಂದು ವಿರೋಧಿಸಲು ಮಾತ್ರ  ಎಂದಿರುವ ಪುರಸಭೆ ಅಧ್ಯಕ್ಷರ ಮಾತಿಗೆ ನಗರೋತ್ಥಾನ ಶಾಸಕರ ಅನುದಾನವಾಗಿದೆ ಅದು ಪುರಸಭೆಯಲ್ಲಿ ಕ್ರೀಯಾಯೋಜನೆ  ಮಾಡಲಾಗುವುದು ಅಷ್ಟೇ .  173 ಲಕ್ಷಗಳ ಅನುದಾನ ಬಂದು ಎಂಟು ತಿಂಗಳಾದರು ಇದುವರೆಗೂ ಸಾಮಾನ್ಯ ಸಭೆ ಮಾಡದಿರುವ ಅಧ್ಯಕ್ಷರ ನಡೆ ಯಾವಕಡೆ ಎಂಬುದು ಪ್ರಶ್ನೇಯಾಗಿದೆ.  ಕೇವಲ ಲೈಟ್ ಹಾಕುವುದರಿಂದ ಅಭಿವೃದ್ಧಿ ಆಗಲ್ಲ  ಸಿಂದಗಿ ಅಭಿವೃದ್ಧಿ ಕುರಿತು ನಗರದ ಜನತೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿ ಎಂದು ಶರಣಗೌಡ   ಪಾಟೀಲ ಮಾತನಾಡಿದರು.

ಪುರಸಭೆ ಸದಸ್ಯರಾದ ಗೋಲ್ಲಾಳ ಬಂಕಲಗಿ, ಬಾಷಾಸಾಬ ತಾಂಬೋಳಿ,  ರಾಜಣ್ಣ ನಾರಾಯಣಕರ, ಸಂದೀಪ ಚೌರ. ಸದಸ್ಯರ ಪ್ರತಿನಿಧಿಗಳಾಗದ ಶರಣಪ್ಪ ಸುಲ್ಪಿ, ಮಹಾಂತೇಶ ನಾಯ್ಕೋಡಿ, ಆನಂದ ಡೋಣುರ ಉಪಸ್ಥಿತರಿದ್ದರು. ಅವಿಶ್ವಾಸ ಗೋತ್ತುವಳಿಗೆ ಸಹಿ ಹಾಕಿದ ಉಪಾಧ್ಯಕ್ಷ  ಹಾಸೀಂ ಆಳಂದ, ಖೈರೂನಬಿ ನಾಟೀಕಾರ, ತಹಶೀನ ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿರಲಿಲ್ಲ.

ಇಂದು ನಡೆಯಬೇಕಿದ್ದ ಪುರಸಭೆ ಸಾಮಾನ್ಯ ಸಭೆ    ಕೋರಂ ಭರ್ತಿ ಯಾಗದ ಹಿನ್ನಲ್ಲೆ ಸಭೆ ಮುಂದೊಡಲಾಗಿದೆ   ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ತಿಳಿಸಿದರು ಸಾಮಾನ್ಯ ಸಭೆಗೆ ಶ್ರೀಶೈಲ ಭೀರಗೊಂಡ, ಪ್ರತಿಬಾ ಕಲ್ಲೂರ, ವಿಜಯಲಕ್ಷ್ಮೀ ನಾಗೂರ, ಬಸಮ್ಮ ಸಜ್ಜನ ಸಭೆಗೆ ಹಾಜರಾಗಿದ್ದರು ಮುಂದಿನ ಸಭೆಯ ದಿನಾಂಕವನ್ನು ನೋಟಿಸ್ ನೀಡಿ ತಿಳಿಸಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ರಾಜಶ‍್ರೀ ತುಂಗಳ ತಿಳಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news