ಸಿಂದಗಿ: ದಿ.ಎಮ್.ಸಿ.ಮನಗೂಳಿ ಅವರು ಈ ನಾಡು ಕಂಡ ಅಪರೂಪದ ರಾಜಕಾರಣಿ, ಸರಳೆತೆಗೆ, ಮಾನವೀಯತೆಗೆ ಹೊಸ ಭಾಷೆ ಬರೆದ ದಿ.ಮನಗೂಳಿ ಅವರ ಅಭಿವೃದ್ದಿ ಪರವಾದ ಕಾರ್ಯಗಳು ಇನ್ನು ಜನಮಾನಸದಲ್ಲಿ ಉಳಿದಿವೆ ಎಂದು ಕಡಕೋಳದ ಶ್ರೀ ಮಡಿವಾಳೇಶ್ವರ ಮಠದ ಶ್ರೀ ರುದ್ರಮನಿ ಶಿವಾಚಾರ್ಯರು ಹೇಳಿದರು.
ಎಚ್.ಜಿ.ಕಾಲೇಜಿನ ಆವರಣದಲ್ಲಿ ದಿ.ಎಮ್.ಸಿ.ಮನಗೂಳಿ ಅವರ ದ್ವಿತೀಯ ಪುಣ್ಯ ಸ್ಮರಣೆಯ ನಿಮಿತ್ಯ ಸಿಂದಗಿಯ ಮನಗೂಳಿ ಕುಟುಂಬ ಹಮ್ಮಿಕೊಂಡಿರುವ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿ.ಮನಗೂಳಿ ಅವರು ಗೇದ್ದಾಗೊಮ್ಮೆ ಮಂತ್ರಿಯಾಗಿ ಈ ಭಾಗವನ್ನು ಅಭಿವೃದ್ದಿ ಪಡಿಸಿದವರು. ಗುತ್ತಿ ಬಸವಣ್ಣ ಏತಾ ನೀರಾವರಿ ಯೋಜನೆಯನ್ನು ರೂಪಿಸಿ ಸಾವಿರಾರು ಎಕರೆ ಭೂಮಿಗೆ ಗಂಗೆಯನ್ನು ಹರಿಸಿದವರು. ಅವರು ನಮ್ಮನ್ನು ಅಗಲಿ ಎರಡು ವರ್ಷವಾದರು ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವ ಭಾಸವಾಗುತ್ತಿದೆ. ಮನಗೂಳಿ ಕುಟುಂಬ ಧಾರ್ಮಿಕ ಕ್ಷೇತ್ರದಲ್ಲಿಯೂ ಅನೇಕ ಸೇವೆಗೈಯುತ್ತಲೆ ಬಂದಿದ್ದಾರೆ ಅವರ ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ದಿ.ಮನಗೂಳಿ ಅವರ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾದವರು. ಅವರ ಸರಳತೆ, ತಾಳ್ಮೆಯ ಗುಣ ಅವರನ್ನು ಇಂದು ಇಷ್ಟರ ಮಟ್ಟಿಗೆ ಬೆಳೆಸಿದೆ. ಅವರ ಅಧಿಕಾರದ ಅವಧಿಯಲ್ಲಿ ರೂಪಿಸಿದ ಯೋಜನೆಗಳು ಇಂದಿಗು ಜನಮಾನಸದಲ್ಲಿವೆ. ರಾಜಕಾರಣದ ಜೊತೆಗೆ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಬೆಳಸಿ ಅನೇಕ ಬಡ ಮಕ್ಕಳಿಗೆ ಶಿಕ್ಷಣದ ದಾಹವನ್ನು ನಿಗಿಸಿ ಶಿಕ್ಷಣ ಸಂತನಾದವರು.
ಈ ಸಂದರ್ಭದಲ್ಲಿ ಮನಗೂಳಿ ಗ್ರಾಮದ ವಿರಕ್ತಮಠದ ಶ್ರೀ ಸಂಗನಬಸವ ಶಿವಾಚಾರ್ಯರು ಮಾತನಾಡಿ, ದಿ.ಎಮ್.ಸಿ.ಮನಗೂಳಿ ಅವರು ನಡೆ,ನುಡಿ ನಿಜಕ್ಕೂ ಸಾತ್ವಿಕತೆಯಿಂದ ಕೂಡಿದೆ. ಅವರನ್ನು ನಾವು ರಾಜಕಾರಣಿಯಾಗಿ ಕಂಡಿಲ್ಲ ಅವರನ್ನು ಸಾಮಾನ್ಯ ವ್ಯಕ್ತಿಯಾಗಿ ಕಂಡಿದ್ದೇವೆ. ಅವರ ಬದುಕೆ ಒಂದು ಇತಿಹಾಸ. ಬಡತನವನ್ನು ಎದುರಿಸಿ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಧನೆ ಮಾಡಿದಂತವರು. ಹೋರಾಟದ ಬದುಕನ್ನೆ ನಿಲುವಾಗಿಸಿ ಸರಳ ಬದುಕನ್ನು ನಿರ್ವಹಿಸಿದವರು. ಅವರ ರಾಜಕಾರಣದಲ್ಲಿ ಸರಳ ಬದುಕು ಶ್ರೇಷ್ಠ ಚಿಂತನೆಯನ್ನು ರೂಡಿಸಿಕೊಂಡವರು ಎಂದರು.
ಶನಿವಾರ ಬೆಳಗ್ಗೆ 9. ಗಂಟೆಗೆ ದಿ.ಮನಗೂಳಿ ಧರ್ಮಪತ್ನಿ ಸಿದ್ದಮ್ಮಗೌಡತಿ ಅವರ ನೇತೃತ್ವದಲ್ಲಿ ಅವರ ಕುಟುಂಬ ವರ್ಗ ದಿ.ಮನಗೂಳಿ ಅವರ ಗದ್ದುಗೆಗೆ ರುದ್ರಾಭೀಷೆಕ ಮಾಡಿ ಪೂಜೆ ನೆರವೇರಿಸಿದರು.
ಈ ವೇಳೆ ಆಲಮೇಲದ ವಿರಕ್ತ ಮಠದ ಶ್ರೀ ಮಲ್ಲಿಬೋಮ್ಮ ಶ್ರೀಗಳು, ಊರಿನಹಿರಿಯ ಮಠದ ಶ್ರೀ ಶಿವಾನಂದ ಶ್ರೀಗಳು, ಭೀಮಾಶಂಕರ ಮಠದ ಶ್ರೀ ದತ್ತಪ್ಪಯ್ಯ ಮಹಾಸ್ವಾಮಿಗಳು, ಸಿಂದಗಿ ವಿರಕ್ತಮಠದ ಶ್ರೀಗಳು, ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಸ್ವಾಮಿಗಳು, ರಾಂಪೂರದ ಶ್ರೀಗಳು, ಕನ್ನೋಳ್ಳಿ ಶ್ರೀಗಳು, ಆಸಂಗಿಹಾಳದ ಶ್ರಿಗಳು ಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು ಮತ್ತು ಅವರ ಸುಪುತ್ರರಾದ ಡಾ.ಅರವಿಂದ ಮನಗೂಳಿ, ಅಶೋಕ ಮನಗೂಳಿ, ಪುರಸಭೆಯ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಡಾ.ಮುತ್ತು ಮನಗೂಳಿ, ಅಳಿಯಂದಿರು, ಮಮ್ಮೋಕ್ಕಳು, ಅಭಿಮಾನಿ ಬಳಗ ಸೇರಿದಂತೆ ಪಕ್ಷಾತೀತವಾಗಿ ಅನೇಕ ನಾಯಕರು, ಯುವ ಮುಖಂಡರು, ರೈತರು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಶಿಕ್ಷಕ ಬಳಗ ಸೇರಿದಂತೆ ಸುಮಾರು 30 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಿ.ಮನಗೂಳಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
