
ಸಿಂದಗಿ : ನಗರದ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು.
ಸಿಂದಗಿ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೀಡಿರುವ ತಳವಾರ-ಪರಿವಾರ ಸಮುದಾಯವನ್ನು ಎಸ್.ಟಿ. ಸೇರ್ಪಡೆ ಮಾಡಲಾಗುವುದು ಎಂಬ ಭರವಸೆ ನೀಡಿದಂತೆ ಇಂದು ನುಡಿದಂತೆ ನಡೆದು ಸರಕಾರ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರು ದೀಪಾವಳಿ ಉಡುಗರೆ ನೀಡಿದ್ದಾರೆ . ಹಲವು ದಿನಗಳಿಂದ ತಾಂತ್ರಿಕ ಸಮಸ್ಯೆಗಳಿಂದ ಕಾನೂನು ಬದ್ದವಾಗಿ ಮಾಡಲು ಸ್ವಲ್ಪದಿನಗಳು ತೆಗೆದುಕೊಂಡಿದೆ. 2018 ರ ಚುನಾವಣೆ ಸಂರ್ಧಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಸಂವಿಧಾನ ಬದಲಿಸುತ್ತರೆ ಎಂದು ಜನ ಸಾಮಾನ್ಯರಲ್ಲಿ ಅಪಪ್ರಚಾರಿಸುತ್ತಿದ್ದರು 15 ಪ್ರತಿಶತ ಇರುವ ಎಸ್.ಸಿ. ಸಮುದಾಯವನ್ನು 17 ಪ್ರತಿಶತಕ್ಕೆ ಹಾಗೂ 3.5 ಇರುವ ಎಸ್.ಟಿ ಸಮುದಾಯವನ್ನು 7 ಪ್ರತಿಶತಕ್ಕೆ ನೀಡಿ ಸಮುದಾಯಗಳಿಗೆ ನೀಡಲು ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬೇಕಾಯಿತು.
ಇಂದು ಸರ್ಕಾರದ ಅಧೀನ ಕಾರ್ಯದರ್ಶಿ -1 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿ.ಅಕ್ಕಮಹಾದೇವಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ದಿನಾಂಕ 29 ಅಕ್ಟೋಬರ 2022 ರಂದು ಹಲವು ದಿನಗಳಿಂದ ಕಾನೂನು ಇಕ್ಕಟಿಗೆ ಸಿಲುಕಿದ ತಳವಾರ – ಪರಿವಾರ ಸಮುದಾಯವನ್ನು ಪ್ರವರ್ಗ-1 ರಿಂದ ತೆಗೆದುಹಾಕಿ ಅವರಿಗೆ ಕಾನೂನು ಬದ್ದವಾಗಿ ಎಸ್.ಟಿ ಪ್ರಮಾಣಪತ್ರ ಸಿಗುವಂತೆ ಮಾಡಿದ್ದಾರೆ ಇದು ಸಂತೋಷದ ವಿಷಯ ಎಂದರು.
ಸಿಂದಗಿಯಲ್ಲಿ ನೀಡಿರುವ ಭರವಸೆ ನೀಡಿದ ಬಸವರಾಜ ಬೋಮ್ಮಯಿ ಅವರನ್ನು ಸಿಂದಗಿ ನಗರಕ್ಕೆ ಕರೆಸಿ ಬೃಹತ್ತ ಸಮಾವೇಶಮಾಡಿ ಎಸ್.ಟಿ. ಪ್ರಮಾಣಪತ್ರ ನೀಡುತ್ತೆವೆ ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಸಂಪುಟದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ, ಶಶೀಕಲಾ ಜೋಲ್ಲೆ, ಹಾಗೂ ಚುನಾವಣೆ ಉಸ್ತುವಾರಿ ಹೊತ್ತ ಲಕ್ಷ್ಮಣ ಸವದಿ ಅವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು ಸಲ್ಲಿಸುತ್ತೆನೆ. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ತಳವಾರ ಸಮುದಾಯದ ತಮ್ಮಣ್ಣ ಸುಣಗಾರ, ಪೀರು ಕೇರೂರ (ಯರಗಲ್ಲ), ಬಿಜೆಪಿ ಮುಖಂಡರಾದ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ರವಿಕಾಂತ ನಾಯ್ಕೋಡಿ, ಅಶೋಕ ಸುಲ್ಪಿ, ಸಂತೋಷ ಮಣಗಿರಿ ಉಪಸ್ಥಿತರಿದ್ದರು.

