ವಕ್ಫ್ ನೋಟಿಸ್ ಕುರಿತು ತೊಂದರೆಗೊಳಗಾದವರ ಅರ್ಜಿ ಸ್ವೀಕರಿಸಿದ ರಾಜ್ಯ ಬಿಜೆಪಿಯ ಸಮಿತಿಯು ತಂಡ.
ಸಿಂದಗಿ: ಪಟ್ಟಣದ ಹನ್ನೇರಡನೆ ಶತಮಾನದ ಅಣ್ಣ ಬಸವಣ್ಣನವರ ಕಾಲದಿಂದ ಇರುವ ಸಿಂದಗಿಯ ವಿರಕ್ತಮಠದ ಆಸ್ತಿ ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿ ಮಾಡಲಾಗಿದೆ. ವಕ್ಫ್ ನೋಟಿಸ್ ಕುರಿತು ಗೋವಿಂದ ಕಾರಜೋಳ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಸಮಿತಿಯು ವಿರಕ್ತಮಠಕ್ಕೆ ಬೇಟಿ ನೀಡಿದರು.
ಕಾಂಗ್ರೆಸ್ ಪಕ್ಷ ವಕ್ಫ್ ಆಸ್ತಿ ನೋಟಿಸ್ ನೀಡಿ ಧರ್ಮ ಧರ್ಮಗಳ ಮದ್ಯೆ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಹುನ್ನಾರ ಮಾಡುತ್ತಿದೆ. ಸಾವಿರಾರು ವರ್ಷದ ಮಠದ ಆಸ್ತಿ ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿ ಮಾಡಿರುವುದು ದುರಾದೃಷ್ಟ. ಸಿದ್ದರಾಮಯ್ಯ ಅವರ ಕುರ್ಚಿ ಹೋಗುತ್ತದೆ ಎಂಬ ಕಾರಣಕ್ಕೆ ಇಂತಹ ಕೆಲಸಕ್ಕೆ ಕೈ ಹಾಕಿದೆ.
ಇಡಿ ರಾಜ್ಯದಲ್ಲಿ ರೈತರ ಆಸ್ತಿ ಕಬಳಿಸುವ ಹುನ್ನಾರ ವಕ್ಫ್ ಬೋರ್ಡ್ ಮುಖಾಂತರ ರಾಜ್ಯ ಸರ್ಕಾರ ಮಾಡುತ್ತಿದೆ. 2019 ರ ಜನೇವರಿ ಯಲ್ಲಿ ವಕ್ಫ್ ಆಸ್ತಿ ಎಂದು ಮಠದ ಆಸ್ತಿ ಬದಲಾವಣೆ ಮಾಡಲಾಗಿದೆ. ಆ ವಿಷಯ ಇಲ್ಲಿಯವರೆಗೆ ಪೂಜ್ಯರಿಗೆ ತಿಳಿದಿಲ್ಲ ಆದರೆ 1.36 ಗುಂಟೆ ಇರುವ ಜಾಗವನ್ನು ಐದು ಎಕರೆ ಎಂದು ನೋಟಿಸ್ ನೀಡಿದ್ದಾರೆ ಹಾಗಾದರೆ ಸಿಂದಗಿಯ ಬಜಾರ್ ಖಾಲಿ ಮಾಡಬೇಕಾಗುತ್ತದೆ.
ಸರಕಾರದ ಸಚಿವರು ಸಭೆ ನಡೆಸಿ ಹದಿನೈದು ದಿನಗಳಲ್ಲಿ ನೋಟಿಸ್ ನೀಡಿ ಎಂಬ ಮೌಖಿಕ ಆದೇಶದಂತೆ ಅಧಿಕಾರಿಗಳು ನೋಟಿಸ್ ನೀಡಿರುವುದು ದುರಾದೃಷ್ಟ. ಸರ್ಕಾರವೇ ಮೌಖಿಕ ಆದೇಶ ಮಾಡಿದಾಗ ಅಧಿಕಾರಿಗಳು ಮೇಲೆ ಹೇಗೆ ಕ್ರಮ ಜರುಗಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಶಾಸಕರಾದ ಹರೀಶ್ ಪುಂಜಾ, ಮಹೇಶ್ ಟೆಂಗಿನಕಾಯಿ, ಅರುಣ್ ಶಹಾಪುರ, ಕಲ್ಮರುಡಪ್ಪ, ಎಂ.ಬಿ.ಜಿರಲೆ ಸೇರಿದಂತೆ ಮಾಜಿ ಶಾಸಕ ರಮೇಶ ಭೂಸನೂರ ಜಿಲ್ಲಾಧ್ಯಕ್ಷ ರಾಜಶೇಖರ ಕೂಚಬಾಳ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಅಶೋಕ ಅಲ್ಲಾಪುರ ಶ್ರೀಶೈಲಗೌಡ ಬಾರಾದಾರ, ಸಿದ್ದು ಬುಳ್ಳಾ, ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
