Home News ಸದಾಶಿವ ಆಯೋಗ ವರದಿ ಜಾರಿಗೆ ತರದಿದ್ದರೆ ವಿಧಾನಸೌಧ ಮುತ್ತಿಗೆ; ಗೋವಿಂದ ಕಾರಜೋಳ ಎಚ್ಚರಿಕೆ

ಸದಾಶಿವ ಆಯೋಗ ವರದಿ ಜಾರಿಗೆ ತರದಿದ್ದರೆ ವಿಧಾನಸೌಧ ಮುತ್ತಿಗೆ; ಗೋವಿಂದ ಕಾರಜೋಳ ಎಚ್ಚರಿಕೆ

by vegadhut@gmail.com.
0 comments

ಕಣ್ಣಿರೋರೆಸುವ ಬದಲು ಕಣ್ಣಲ್ಲಿ ಮಣ್ಣು ಹಾಕುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಸಿಂದಗಿ : ಮಾಜಿ ಶಾಸಕ ರಮೇಶ ಭೂಸನೂರ ಅವರ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ನ್ಯಾಯಮೂರ್ತಿ ಸದಾಶಿವ ವರದಿ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುತ್ತೇವೆ ಎಂದು ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಾ ಸಾಗಿರುವುದು ಶೋಚನೀಯ.

ಇಷ್ಟು ದಿನಗಳ ಕಾಲ ನ್ಯಾಯಾಲಯದ ತೀರ್ಪು ಬರುವವರೆಗೆ ಎನ್ನು ಮಾಡಲು ಆಗದು ಎನ್ನುತ್ತಿದ್ದವರು ತೀರ್ಪು ಬಂದು ಮೂರು ತಿಂಗಳು ಆದರು ಇದುವರೆಗೆ ಜಾರಿಗೆ ತರದೆ ಒನ್ ಮ್ಯಾನ್ ಕಮಿಷನ್ ಆಯೋಗ ಸೃಷ್ಟಿಸಿ ಮೂರು ತಿಂಗಳಲ್ಲಿ ವರದಿ ನೀಡಲು ತಿಳಿಸಿದೆ. ನಾವು ಇನ್ನೊಂದು ಆಯೋಗ ಒಪ್ಪುವುದಿಲ್ಲ. ಎಲ್ಲ ಅಂಕಿ ಅಂಶಗಳು ಹೊಂದಿದ ವರದಿಗಳು ಈಗಾಗಲೆ ಸರಕಾರದಲ್ಲಿದ್ದು ಅದನ್ನು ಪರಿಶೀಲಿಸಿ ನಮ್ಮೊಂದಿಗೆ ಚರ್ಚಿಸಿ ಬದಲಾವಣೆಗಳಿದ್ದರೆ ಮಾಡಿ ಸದಾಶಿವ ವರದಿ ಜಾರಿಗೆ ತರಬೇಕು.

banner

ಒಳ ಮೀಸಲಾತಿ ಜಾರಿಗೆ ತರದೆ ಇದ್ದರೆ ನಿಮ್ಮನ್ನು ಸಿಕ್ಕಲ್ಲಿ ಮುತ್ತಿಗೆ ಹಾಕುವ ಕೆಲಸ‌ ಮಾಡುತ್ತೇವೆ ಉಗ್ರವಾದ ಹೋರಾಟ ನಿಮ್ಮ ಮನೆಗಳಿಗೆ ಮುತ್ತಿಗೆ ಹಾಕಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

https://youtu.be/0WzE80bi7Fc?si=qo7Twpax0xvXYImw

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪುಂಜಾ, ಮಾಜಿ ಶಾಸಕ ರಮೇಶ ಭೂಸನೂರ , ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news