ದೇವಣಗಾಂವ; ಬಯಲಾಟಗಳನ್ನು ಇಂದು ಗ್ರಾಮೀಣ ಭಾಗದಲ್ಲಿ ಮಾತ್ರ ಕಾಣಲು ಸಾದ್ಯವಿದೆ ಅವುಗಳು ಅಲ್ಲಿಯ ಜನರ ಸಂಸ್ಕೃತಿಯ ಪ್ರತೀಕಗಳಾಗಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಶ್ರೀಮದ್ ಗುರುಲಿಂಗೇಶ್ವರ ಬಯಲಾಟ ಮಂಡಳಿಯವರು ಹಮ್ಮಿಕೊಂಡಿದ್ದ ಭೀಮ ವಿಲಾಸ ಎಂಬ ಬಯಲಾಟದ ನೇತೃತ್ವವಹಿಸಿ ಮಾತನಾಡುತ್ತಿದ್ದರು ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಪ್ರದೇಶಗಳು ತನ್ನದೇ ಆದ ವೈಶಿಷ್ಟ್ಯ ಗಳನ್ನು ಹೊಂದಿವೆ ಅವುಗಳು ತಮ್ಮ ಪರಂಪರೆಯನ್ನು ಸಾರುತ್ತಿವೆ ಅವುಗಳನ್ನು ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.
ಬಿಜೆಪಿ ಮುಖಂಡ ಶ್ರೀಮಂತಗೌಡ ನಾಗೂರ ಬಯಲಾಟ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ ವಹಿಸಿದ್ದರು. ರಮೇಶ ಸೊಡ್ಡಿ, ಶಂಕರಲಿಂಗ ನಡುವಿನಕೇರಿ, ರಾಜು ಬಡದಾಳ, ವಿಠ್ಠಲ ಯರಗಲ್, ಪ್ರಭುಗೌಡ ಕಡ್ಲೇವಾಡ, ಸುರೇಶ ಗಂಗನಳ್ಳಿ, ಪ್ರಕಾಶ ಸಿಂಪಿ, ಸಿದ್ದಯ್ಯ ಮಠಪತಿ, ಸಿದ್ದು ಹೀರಾಪುರ, ಅನೀಲ ಸಿಂದಗಿ, ಮುನೀರಸಾಬ ಮುಜಾವರ, ಪುಂಡಲೀಕ ನಡುವಿನಕೇರಿ, ಸಂಗನಬಸು ಸುತಾರ, ಸಿದ್ದಾರ್ಥ ಮೇಲಿನಕೇರಿ, ರಮೇಶ ದೇವಣಗಾಂವ ಇದ್ದರು.
ದತ್ತಾತ್ರೆಯ ಸೊನ್ನ ನಿರೂಪಿಸಿದರು

