ಯಾವ
ಸಿಂದಗಿ: ನಗರದ ಡಾ||ಬಿ.ಆರ್.ಅಂಬೇಡ್ಕರ ಭವನದಲ್ಲಿ ದಲಿತ ಸಮುದಾಯದ ದಲಿತ ಕುಂದು-ಕೊರತೆ ಸಭೆಯನ್ನು ಪೊಲೀಸ ಇಲಾಖೆಯಿಂದ ಜರುಗಿತ್ತು.
ದಲಿತ ಮುಖಂಡ ಅಶೋಕ ಸುಲ್ಪಿ ಮಾತನಾಡಿ ದಲಿತರ ಮೇಲೆ ಹಲವಾರು ರೀತಿಯ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಸಿಂದಗಿ ತಾಲೂಕಿನಲ್ಲಿ ಅಸ್ತಿತ್ವ ಕಳೆದುಕೊಂಡಿದೆ ಆದಕಾರಣ ಪೊಲೀಸ ಇಲಾಖೆ ಚುರುಕಿನಿಂದ ಕಾರ್ಯನಿರ್ವಹಿಸಬೇಕಾಗಿದೆ. ಗಾಂಜಾ ಸೇವನೆ ಹಾಗೂ ಮಾರಟ ಹೇಚ್ಚಾಗಿದ್ದು ಕಡಿವಾಣ ಹಾಕದೆ ಇದ್ದರೆ ಸಮಾಜಕ್ಕೆ ಮಾರಕವಾಗುವ ಸಂಭವ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಡಿ.ಎಸ್.ಎಸ್. ಮುಖಂಡ ವಾಯ್.ಸಿ.ಮಯೂರ ಮಾತನಾಡಿ ದಲಿತ ಕುಂದು-ಕೊರತೆ ಸಭೆಯಲ್ಲಿ ಪೊಲೀಸ ಇಲಾಖೆಗಿಂತಲೂ ಬೇರೆ ಇಲಾಖೆಗಳಲ್ಲಿ ಸಮಸ್ಯೆಗಳಿವೆ ದಲಿತ ಸಭೆಗಳಲ್ಲಿ ಬೇರೆ ಇಲಾಖೆಯವರನ್ನು ಬರಲು ಹೇಳುತ್ತಾ ಬಂದರು ಇದುವರೆಗು ಯಾವುದೆ ಇಲಾಖೆಯವರನ್ನು ಸಭೆಗೆ ಹಾಜರಾಗದೆ ಇರುವುದರಿಂದ ಬೇಸರ ವ್ಯಕ್ತ ಪಡಿಸಿದರು. ಅಬಕಾರಿ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಕಿರಾಣಿ ಅಂಗಡಿಗಳಲ್ಲಿ ದಾರು ( ಮಧ್ಯಪಾನ ) ಮಾರಾಟಮಾಡುತ್ತಿದ್ದಾರೆ ಇದರಿಂದ ಬಹುತೇಕ ಜೀವಗಳು ಕಳೆದುಕೊಂಡು ಹಲವಾರು ಕುಟುಂಬಗಳು ಬೀದಿಗೆ ಬಂದಿವೆ ಮುಂದಿನ ದಿನಮಾನಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಂದಿನ ದಿನಮಾನಗಳಲ್ಲಿ ಎಲ್ಲ ಸಮುದಾಯದವರನ್ನು ದಲಿತ ಸಭೆಗೆ ಕರೆಸಬೇಕೆಂದು ಹೇಳಿದರು.

ಕಸಾಪ ಅಧ್ಯಕ್ಷ ದಲಿತ ಮುಖಂಡ ರಾಜಶೇಖರ ಕೂಚಬಾಳ ಇಲಾಖೆಯವರ ಕುರಿತು ಮಾತನಾಡಿ ನಾನು ಜಿಲ್ಲಾ ಜಾಗೃತ ಸಮತಿ ಸದಸ್ಯನಾಗಿ ಐದು ವರ್ಷ ಕಳೆದರು ಇದುವರೆಗು ದಲಿತ ಸಭೆಗೆ ಒಂದು ಬಾರಿಯು ಆಹ್ವಾನಿಸದೆ ಇರುವುದು ಪೊಲೀಸ ಇಲಾಖೆ ವಿಪಲವಾಗಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಸಿಂದಗಿಯ ದಲಿತರ ಮೇಲೆ ನಡೆಸುತ್ತಿರುವ ಹಲ್ಲೆಗಳಾದರು ಜಾತಿನಿಂದನೆಯ ದೂರುಗಳು ನಾವು ಸ್ವ-ಪ್ರೇರಿತವಾಗಿ ದಾಖಲೆ ಮಾಡುತ್ತಿಲ್ಲ, ನಾವು ಶಾಂತಿಯುತವಾಗಿ ಬಾಳಲು ಎಲ್ಲ ಸಮಾಜದೊಂದಿಗೆ ಬೇರೆಯಲು ಪ್ರಯತ್ನಿಸುತ್ತಿದೇವೆ. ಇದರ ಲಾಭ ತೆಗೆದುಕೊಳ್ಳುತ್ತಿರುವ ಹಲವು ವ್ಯಾಘ್ರ ಮನಸ್ಥಿತಿಯವರು ಅದರ ದುರುಪಯೋಗ ಪಡೆಯುತ್ತಿದ್ದು ಅಂತಹವರನ್ನು ಗುರುತಿಸಿ ಬುಡ ಸಮೇತ ಕಿತ್ತೆಸೆಯಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಮಾನಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಬರುವ ಎಲ್ಲ ಸಮುದಾಯದ ಕೇರಿಗೆ ತೆರಳಿ ಅಥವಾ ಅವರನ್ನೆ ಇಲ್ಲಿಗೆ ಆಹ್ವಾನಿಸಿ ಪ್ರತ್ಯಕ ಅಥವಾ ಎಲ್ಲ ಸಮುದಾಯದವರನ್ನು ಕೂಡಿಸಿ ದಲಿತ ಕುಂದು-ಕೊರತೆ ಸಭೆ ನಡೆಸಬೇಕು. ನಮ್ಮ ಸಮಾಜದಲ್ಲಿರುವ ಹೆಣ್ಣು ಮಕ್ಕಳು ನಿಮ್ಮಗೆ ಪ್ರಶ್ನಿಸಿದಾಗ ಮಾತ್ರ ದಲಿತ ಕುಂದು-ಕೊರತೆ ಸಭೆಗೆ ಗೌರವ ಸಲ್ಲುತ್ತದೆ ಎಂದು ಹೇಳಿದರು. ಹರ್ಷವರ್ದನ ಪೂಜಾರಿ, ಮಹಾವೀರ ಸುಲ್ಪಿ ಮಾತನಾಡಿದರು.
ನೂತನವಾಗಿ ಆರಕ್ಷಕ ಉಪ ನೀರಿಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಬಂದ ಸೋಮೇಶ ಗೇಜ್ಜಿ ದಲಿತ ಕೇರಿಯಲ್ಲಿ ನಮ್ಮ ಇಲಾಖೆಯ ದಲಿತ ಸಭೆ ನಡೆಯುತ್ತಿರುವುದು ಸಂತಸ ತಂದಿದೆ. ಭವನದಲ್ಲಿರುವ ಗ್ರಂಥಾಲಯ ಅದರಲ್ಲಿನ ಗ್ರಂಥಗಳು ನಮ್ಮಗೆ ಪ್ರೇರಣೆದಾಯಕ ವಾಗಬೇಕು ಮತ್ತು ಬಾಬಾಸಾಹೇಬರು ಓದಿದ ಕೆಲವೇ ಕೆಲವು ತುಣುಕುಗಳು ನಾವುಗಳು ಓದಿದರೆ ಆಯ್.ಎ.ಎಸ್. ಕೆ.ಎ.ಎಸ್ ಅಧಿಕಾರಿಗಳಾಗಬಹುದು ಇಲ್ಲಿನ ಸಮಾಜದ ಹಿರಿಯರು ಹಾಗೂ ಮುಖಂಡರು ಯುವಕರನ್ನು ಓದಿನ ಕಡೆಗೆ ಕರೆದುಕೊಂಡು ಹೋಗುವಲ್ಲಿ. ಪ್ರೇರಣೆ ದಾಯಕರಾಗಬೇಕೆಂದು ವಿನಂತಿಸಿದರು. ಹಲವಾರು ಸಮಸ್ಯೆಗಳ ಬಗ್ಗೆ ಹೇಳಿದ್ದಿರಿ ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಗೆಹರಿಸುವ ಭರವಸೆ ನೀಡುತ್ತೆನೆ ನಿಮ್ಮ ಸಹಕಾರ ನಮ್ಮಗೆ ಅತಿ ಅವಶ್ಯಕವೆಂದು ಸಹಕಾರ ಕೋರಿದರು.

ನಂತರ ಮಾತನಾಡಿದ ವೃತ್ತ ನೀರಿಕ್ಷಕ ರವಿ ವಕ್ಕುಂದ ಪೊಲೀಸ ಠಾಣೆಯಲ್ಲಿ ದಲಿತ ಸಭೆ ಕರೆದರೆ ೫೦ ಜನರು ಸೇರುವುದು ಕಷ್ಟ ಅದರೆ ಇಂದು ನಾವು ನಿಮ್ಮ ಮನೆಬಾಗಿಲಿಗೆ ಬಂದಂತಾಗಿರುವುದರಿಂದ ನೂರಾರು ಜನರು ಪಾಲ್ಗೊಂಡಿರುವುದು ಖುಷಿಯ ವಿಚಾರ. ಹಿರಿಯರು ಮುಖಂಡರು ಹೇಳಿದ ಹಾಗೆ ಮುಂದಿನ ದಿನಮಾನಗಳಲ್ಲಿ ಎಲ್ಲ ಸಮುದಾಯದವರನ್ನು ಕರೆಸುವ ಪ್ರಯತ್ನ ಮಾಡುತ್ತೇವೆ ಮತ್ತು ಜಿಲ್ಲೆಯಲ್ಲಿಯೆ ಪ್ರಥಮ ಬಾರಿಗೆ ದಲಿತ ಕೇರಿಗೆ ಆಗಮಿಸಿ ಸಭೆ ನಡೆಸುತ್ತಿರುವುದು ಅತ್ಯಂತ ಯಶಸ್ವಿಯಾಗಿ ಸಭೆ ನಡೆಯುತ್ತಿರುವುದು ಸಂತಸ ತಂದಿದೆ. ಸಿಂದಗಿ ವ್ಯಾಪ್ತಿಯಲ್ಲಿ ಹಲವು ಸೂಕ್ಷ್ಮ ವಿಚಾರಗಳು ನಡೆಯುತ್ತಿದ್ದು ಅದು ನನ್ನ ಗಮನಕ್ಕು ಬಂದಿದೆ ಆದರೆ ಅದನ್ನು ಬುಡಸಮೇತ ತೆಗೆದು ಹಾಕಬೇಕು ಎಂಬುದು ನಿಮ್ಮ ಆಶಯವಾಗಿದೆ, ಆದರೆ ನಿಮ್ಮಗೆ ಗೊತ್ತಿರಲ್ಲಿ ಪೊಲೀಸ್ ಇಲಾಖೆಯಲ್ಲಿ ಒಂದು ಪ್ರಕರಣ ದಾಖಲಾದರೆ ಅದರ ಬುಡಕ್ಕೆ ಹೋಗುತ್ತೆವೆ ಇಂದು ಆಲಮೇಲ ಬಾಗದಲ್ಲಿ ಗಾಂಜಾ 1ಕೆ.ಜಿ ಹಾಗೂ ದೇ.ಹೀಪ್ಪರಗಿ ಯಲ್ಲಿ 8ಕೆ.ಜಿ ಗಾಂಜಾ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಅಕ್ಕಲಕೋಟ, ಸೋಲ್ಲಾಪುರ ಭಾಗ ಗಳಿಂದ ಗಾಂಜಾ ಬರುತ್ತಿದ್ದ ಮಾಹಿತಿ ಇದೆ ಹಲವಾರು ಬಾಗಗಳಲ್ಲಿ ಪ್ರಕರಣ ಬೇದಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ತೆರಳಿದ ಪೊಲೀಸ ಇಲಾಖೆಯವರ ವಿರುದ್ದವೇ ಹಲ್ಲೆಯಾಗಿ ವೃತ್ತ ನೀರಿಕ್ಷಕ ಶ್ರೀಮಂತ ಇಲ್ಲಾಳ ಹಾಗೂ ಹಲವು ಸಿಬ್ಬಂದಿಗಳು ಜೀವನ್ಮರಣದಲ್ಲಿ ಹೋರಾಡುತ್ತಿದ್ದಾರೆ. ಆದರಿಂದ ನಿಮ್ಮಗೆ ಯಾವುದೇ ಸಂಶಯ ಬೇಡ ನಿರ್ಧಾಕ್ಷೀಣ್ಯ ಕ್ರಮ ಜರುಗಿಸುವೆವು ಎಂದು ಹೇಳಿದರು. ಸಮಾಜದ ಹಿರಿಯರಾದ ಸಂಗಪ್ಪ ಕೂಚಬಾಳ, ವಿಠ್ಠಲ ಹೊಸಮನಿ, ಮಾನಿಂಗಪ್ಪ ಪೂಜಾರಿ ವೇದಿಕೆ ಮೇಲಿದ್ದರು.

