Home News ಸಂಚಾರಿಗಳಿಗೆ ಕಂಟಕವಾದ ರಸ್ತೆ | ಜನ ಪ್ರತಿನಿಧಿಗಳ ನಿರ್ಲಕ್ಷ್ಯ | ಆಕ್ರೋಶ ವ್ಯಕ್ತಪಡಿಸಿದ ಸ್ಥಳಿಯರು

ಸಂಚಾರಿಗಳಿಗೆ ಕಂಟಕವಾದ ರಸ್ತೆ | ಜನ ಪ್ರತಿನಿಧಿಗಳ ನಿರ್ಲಕ್ಷ್ಯ | ಆಕ್ರೋಶ ವ್ಯಕ್ತಪಡಿಸಿದ ಸ್ಥಳಿಯರು

by vegadhut@gmail.com.
0 comments

ಸಿಂದಗಿ : ನಗರದ ಪ್ರತಿಷ್ಠಿತ ನಗರಗಳಲ್ಲೊಂದಾದ  ಕಲ್ಯಾಣ ನಗರ ವಾರ್ಡ ನಂ 20 ಮತ್ತು 19 ರ ಮದ್ಯದಲ್ಲಿರುವ ರಸ್ತೆಯಲ್ಲಿ ಪ್ರತಿನಿತ್ಯ ಚರಂಡಿ ನೀರು ಹರಿದು ಹೋಗುವುದು ಸರ್ವೆ ಸಾಮಾನ್ಯವಾಗಿದೆ.  ಪ್ರಮುಖ ರಸ್ತೆಯಾದ ಸೊಂಪುರು ರಸ್ತೆಯಿಂದ  ಹಳೆಯ ಚಾಂದಕವಠೆ ರಸ್ತೆಗೆ ಕೂಡುವ ರಸ್ತೆ ಸಂಪೂರ್ಣ ಹಾಳಾಗಿದ್ದು ಅಲ್ಲಿನ ಸಂಚಾರಿಗಳಿಗೆ ಕಂಟಕವಾಗಿ ನಿಂತಿದೆ. ಮುಖ್ಯವಾಗಿ ಶಾಲಾ ಮಕ್ಕಳು ಸಂಚರಿಸುವ ರಸ್ತೆ ಇದಾಗಿದ್ದು ಪಾಲಕರು, ಶಾಲಾ ವಾಹನ ಚಾಲಕರು  ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ.

22,23ನೇ ವಾರ್ಡಿನ ಜನರಿಗೆ ನೀರು ವದಗಿಸಿದರೆ  ಪೋಲಾದ ನೀರು ಚರಂಡಿಗೆ ಸೇರಿ ಮುಂದಿನ ವಾರ್ಡಗಳಾದ 19,20,18, ಹಾಗೂ 17ನೇ ವಾರ್ಡ ಮುಖಾಂತರ ದೊಡ್ಡ ಚರಂಡಿಗೆ ಸೇರಬೇಕು. ಆದರೆ ಅತ್ಯಂತ ಹಳೆಯ ಚರಂಡಿ ವ್ಯವಸ್ಥೆ ಇಲ್ಲಿ ಇರುವುದರಿಂದ ನೀರಿನ ರಬಸಕ್ಕೆ ಚರಂಡಿ ಪೂರ್ಣವಾಗಿ ರಸ್ತೆಮೆಲೆ ಬರುತ್ತವೆ ಚರಂಡಿ ಇಂದ ಹಾದ ಹೋಗಬೇಕಾದ ಕಲುಶಿತ ನೀರು ರಸ್ತೆ ಮೇಲೆ ಬಂದು ಸಾರ್ವಜಿನಿಕರಿಗೆ ಸಂಚರಿಸಲು ತೊಡಕಾಗುತ್ತಿದೆ.

ಪಟ್ಟಣದ ಪ್ರತಿಷ್ಠಿತ ಶಾಲಾ ವಾಹನಗಳು ಸಂಚರಿಸುವ ರಸ್ತೆಯಾಗಿದ್ದು  ಸುಮಾರು 200ಕ್ಕು ಹೇಚ್ಚು ದ್ವೀಚಕ್ರ ವಾಹನಗಳು ಶಾಲಾ ಮಕ್ಕಳಿಗೆ ಬಿಡಲು ಮತ್ತು ತರಲು ಸಂಚರಿಸುತ್ತವೆ. ಮತ್ತು ರಸ್ತೆ ಮದ್ಯದಲ್ಲಿ ಒಡೆದಿರುವ ನಳದ ಪೈಪುಗಳಿಂದಾಗಿಯು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ಇದರಿಂದ ಜನರು ರೋಷಿ ಹೋಗಿದ್ದಾರೆ.

ಇದರಬಗ್ಗೆ ಸ್ಥಳಿಯರಾದ ಜೆ.ಎಮ್.ಗೋಳಸಾರ ಅವರು ಮಾತನಾಡಿ ಈ ರಸ್ತೆಯಲ್ಲಿ ವಾಹನ ತಿರುಗಾಡಿದರೆ ರಸ್ತೆನೀರು ಮನೆಯಲ್ಲಿ ಬರುತ್ತವೆ, ಶಾಲಾ ಮಕ್ಕಳು ಪಕ್ಕದಲ್ಲಿ ಹಾದು ಹೋಗಬೇಕಾಗಿದೆ, ಪುರಸಭೆ ಅವರಿಗೆ ಹೇಳಿದರೆ ಬಂದು ದೂರು ಸಲ್ಲಿಸಿ ಎಂದು ಹೇಳುತ್ತಾರೆ ಸುಮಾರು ಏಳ ರಿಂದ ಎಂಟು ವರ್ಷವಾಯಿತ್ತು ಸಮಸ್ಯೆ ಇಂದಾನೆ ಜೀವನ ಮಾಡಲಾಗುತ್ತಿದೆ ಎಂದು  ವೇಗದೂತ ಜನದನಿಯ ಎದುರು ಆಕ್ರೋಶ ವ್ಯಕ್ತಪಡಿಸಿದರು.

banner

ಚುನಾವಣೆ ಸಂದರ್ಭದಲ್ಲಿ ಕೇವಲ ಓಟ್ ಕೇಳಲ್ಲು ಬರುತ್ತಾರೆ ಆಮೇಲೆ ಅವರು ಬರುವುದೇ ಇಲ್ಲಾ ಚರಂಡಿ ತುಂಬಿ ರಸ್ತೆಗೆ ಬರುತ್ತಿದ್ದು ಚುನಾಯಿತ ಪ್ರತಿನಿಧಿಗಳು  ಬರುತ್ತಿಲ್ಲ ಎಂದು 20ನೇ ವಾರ್ಡಿನ ಮಹಿಳೆ ನಸೀಮಾ ಬಾನು ಹೇಳಿದರು. ಸ್ಥಳಿಯ ಸಂಚಾರಿಗಳು ಹೀಡಿ ಶಾಪ ಹಾಕಿದರು ಪುರಸಭೆ ವಿರುದ್ಧ  ಆಕ್ರೋಶ  ಕೇಳಿಬಂತು.

ಇಂಡಿ ಉಪವಿಭಾಗ ಅಧಿಕಾರಿಗಳು ಪುರಸಭೆಗೆ ಆಡಳಿತ ಅಧಿಕಾರಿಗಳಿದ್ದಾರೆ ಅವರ ಗಮನಕ್ಕು ತರುವೆ, ಬರುವ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಲಾಗುವುದು. ಮೋಹನ ಜಾದವ ಮುಖ್ಯಾಧಿಕಾರಿ ಪುರಸಭೆ ಸಿಂದಗಿ. 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news