Home News ಆಹೇರಿ ನೂತನ 220 ವಿದ್ಯುತ್ ಸಂಸ್ಕರಣಾ ಘಟಕ ಉದ್ಘಾಟನೆ | ಜಿಲ್ಲೆಗೆ ವಿಶೇಷವಾದ ಕೊಡುಗೆ ಬಿಜೆಪಿ ಸರಕಾರ ನೀಡಿದೆ ; ಸಚಿವ ವಿ.ಸುನೀಲಕುಮಾರ

ಆಹೇರಿ ನೂತನ 220 ವಿದ್ಯುತ್ ಸಂಸ್ಕರಣಾ ಘಟಕ ಉದ್ಘಾಟನೆ | ಜಿಲ್ಲೆಗೆ ವಿಶೇಷವಾದ ಕೊಡುಗೆ ಬಿಜೆಪಿ ಸರಕಾರ ನೀಡಿದೆ ; ಸಚಿವ ವಿ.ಸುನೀಲಕುಮಾರ

by vegadhut@gmail.com.
0 comments

ಸಿಂದಗಿ: 2013 ರಿಂದ 2019 ರವರೆಗೆ ಕಾಂಗ್ರೇಸ್ ಸರಕಾರದ ಅವದಿಯಲ್ಲಿ   ವಿಜಯಪುರದಲ್ಲಿ 220 ಕೆವಿ ಹಾಗೂ 110ಕೆವಿ ಸ್ಟೇಶನ್ ಕೇವಲ 7 ಕಡೆ ನಿರ್ಮಾಣವಾದರೆ 8 ಉನ್ನತ್ತಿಕರಣ ವಾಗಿತ್ತು ಆದರೆ ವಿಜಯಪುರ ಜಿಲ್ಲೆಗೆ ಬಿಜೆಪಿ ಸರಕಾರದ ಇ 4 ವರ್ಷದ ಅವದಿಯಲ್ಲಿ  12 ನೂತನ ಸ್ಟೇಷನ್ ಗಳು ಹಾಗೂ 16 ಉನ್ನತ್ತಿಕರಣ ಮಾಡಲಾಗಿದೆ ಒಟ್ಟು 28  ಸ್ಟೇಷನ್ಗಳನ್ನು ನಿರ್ಮಾಣಮಾಡಲಾಗಿದೆ ಎಂದರು.

 

ಬುಧವಾರದಂದು ತಾಲೂಕಿನ ಆಹೇರಿ ಗ್ರಾಮದಲ್ಲಿ ನಿರ್ಮಾಣವಾದ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರವನ್ನು ಉಧ್ಘಾಟಿಸಿ ಮಾತನಾಡಿದ ಅವರು ಇಂಧನ ಇಲಾಖೆ ಸಾರ್ವಜನಿಕ, ರೈತ, ಉದ್ಯಮ ಸ್ನೇಹಿ ಇಲಾಖೆ ರೈತರ ಬಹುದಿನದ ಬೇಡಿಕೆಯಾಗಿದ್ದ ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆ ಬೇಕೆಂಬ ಕೂಗಿಗೆ ಇದೀಗ ಸಕಾಲ ಒದಗಿ ಬಂದಿದೆ. ಈ ಕುರಿತಾಗಿ ಈಗಾಗಲೇ ಇಂಧನ ಇಲಾಖೆಯಿಂದ ಸರ್ವೇ ನಡೆಯುತ್ತಿದೆ. ಶೀಘ್ರದಲ್ಲೇ ಈ ಕೆಲಸ ಕಾರ್ಯ ರೂಪಕ್ಕೆ ಬರಲಿದೆ . ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ವಿಜಯಪುರ ಜಿಲ್ಲೆಗೆ 4 ವರ್ಷ ಅವಧಿಯಲ್ಲಿ 348 ಕೋಟಿ ವೆಚ್ಚ ಮಾಡಿ 78 ವಿದ್ಯುತ್ ಪ್ರಸರಣ ಕೇಂದ್ರಗಳನ್ನು ಮಂಜೂರು ಮಾಡಿದೆ. ಇನ್ನೂ 62 ಉಪ ಕೇಂದ್ರಗಳ ಸ್ಥಾಪನೆಗೆ 1663 ಕೋಟಿ ರೂ ಮೀಸಲಿಟ್ಟಿದ್ದೇವೆ. ಒಂದೇ ವರ್ಷದಲ್ಲಿ 12  ಹೊಸ ಕೇಂದ್ರಗಳು, 16 ಉನ್ನತೀಕರಣ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ರೈತರಿಗೆ ಅನೂಕೂಲವಾಗುವಂತೆ ಹಲವಾರು ಯೋಜನೆಗಳನ್ನು ನಮ್ಮ ಸರ್ಕಾರ ಮಾಡಿದೆ. ಬೆಳಕಿಲ್ಲದ ಮನೆಗಳಿಗೆ ಬೆಳಕು ಯೋಜನೆಯಡಿಯಲ್ಲಿ ಜಿಲ್ಲಾದ್ಯಾಂತ 10448 ಮನೆಗಳಿಗೆ ಉಚಿತವಾಗಿ ವಿದ್ಯುತ್ ಅಳವಡಿಕೆ ಮಾಡಲಾಗಿದೆ. ಹಸಿರು ವಿದ್ಯುತ್‌ಗೆ ಒತ್ತು ಕೊಟ್ಟು ವಿಂಡ್ ಪವರ್, ಸೋಲಾರ್ ಪ್ಲಾಂಟ್‌ಗಳ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಗುಣ ಮಟ್ಟದ ವಿದ್ಯುತ್ ಪೂರೈಕೆ ಮಾಡುವ ಮೂಲಕ ಕೃಷಿ ಕೆಲಸಗಳಿಗೆ ಉತ್ತೇಜನ ನೀಡಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ.ಸುನೀಲಕುಮಾರ ಹೇಳಿದರು.

banner

ಶಾಸಕ ರಮೇಶ ಭೂಸನೂರ ಮಾತನಾಡಿ 124 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ವಿದ್ಯುತ್ ಕೇಂದ್ರದ ಸ್ಥಾಪನೆಗೆ ಆಹೇರಿ ಗ್ರಾಮದ ಜನತೆಯ ಸಹಕಾರ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 13 ಕಡೆ ಟಿಸಿ ಬ್ಯಾಂಕ್ 8 ಕಡೆ ರಿಪೇರಿ ಕೆಂದ್ರಗಳ ಸ್ಥಾಪನೆ ಮಾಡಲಾಗಿದ್ದು 24 ಗಂಟೆಯೊಳಗೆ ಟಿಸಿಗಳನ್ನು ಸ್ಥಳಕ್ಕೆ ಬಂದು ರಿಪೇರಿ ಮಾಡಿಕೊಡುತ್ತಾರೆ. ನನ್ನ ಅಧಿಕಾರ ಅವಧಿಯಲ್ಲೇ ಭೂಮಿ ಪೂಜೆಯಾಗಿದ್ದ ಈ ವಿದ್ಯುತ್ ಸ್ವೀಕರಣ ಕೇಂದ್ರ ಮತ್ತೆ ನನ್ನ ಅವಧಿಯಲ್ಲೇ ಉಧ್ಘಾಟನೆಯಾಗುತ್ತಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಹಿರಿಯ ಕಲಾವಿದ ಹಂದಿಗನೂರು ಸಿದ್ರಾಮಪ್ಪ ನವರ ರಂಗಮಂದಿರಕ್ಕಾಗಿ ಇನ್ನು 2 ಕೋಟಿ ರೂ ಬಿಡುಗಡೆಗೊಳಿಸುವಂತೆ ಸಚಿವ ವಿ.ಸುನೀಲಕುಮಾರ ಅವರಿಗೆ ಮನವಿ ಮಾಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.

ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆರ್ಶೀವಚನ ನೀಡಿದರು.
ಲಿಂಬೆ ನಿಗಮ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಕವಟಗಿ, ಹೆಸ್ಕಾಂ ವ್ಯ.ನಿರ್ದೇಶಕಿ ಡಿ.ಭಾರತಿ, ಕೆಪಿಟಿಸಿಎಲ್ ಪ್ರಸರಣಾ ನಿರ್ದೇಶಕ ಜಿ.ಆರ್.ಚಂದ್ರಶೇಖರಯ್ಯ, ಮುಖ್ಯ ಅಭಿಯಂತರ ಎಸ್.ವಿ.ಮಂಜುನಾಥ, ನಾಗರಾಜ ಜೆ.ಪಿ., ಬಿ.ಎಸ್.ಹೆಬ್ಬಾಳ, ಕೆ.ಜಿ.ಹಿರೇಮಠ, ವೇದಿಕೆ ಮೇಲಿದ್ದರು. ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಶೇಖರಗೌಡ ಹರನಾಳ, ಸುನಂದಾ ಯಂಪೂರೆ, ಶ್ರೀಶೈಲಗೌಡ ಬಿರಾದಾರ, ರವಿ ನೈಕೋಡಿ, ಅನಸೂಯಾ ಪರಗೊಂಡ, ಅರವಿಂದ ಹಡಗಲಿ ಮತ್ತಿತ್ತರಿದ್ದರು.

@sunilkumarkarkal  

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news