ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿ ನಿರ್ಮಾಣವಾದ 220 ವಿದ್ಯುತ್ ಸ್ವೀಕರಣಾ ಕೇಂದ್ರದ ಉಧ್ಘಾಟನೆ ಮಾಡಲು ಇಂದು ಬೆಳಿಗ್ಗೆ 10 ಗಂಟೆಗೆ ಇಂಧನ ಸಚಿವ ವಿ ಸುನೀಲಕುಮಾರ ಆಗಮಿಸಲಿದ್ದಾರೆ.
ಈ ಕುರಿತು ಮಂಗಳವಾರದಂದು ಬೆಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರಮೇಶ ಭೂಸನೂರ ಕಳೆದ ಬಾರಿ ಈ ವಿದ್ಯುತ್ ಸ್ವೀಕರಣಾ ಕೇಂದ್ರದ ಉಧ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತು ಮಳೆಗಾಲ ಇದ್ದ ಕಾರಣ ಕಾರ್ಯಕ್ರಮ ರದ್ದಾದ ಹಿನ್ನಲೆ ಇದೇ ಡಿ 28 ರಂದು 10 ಗಂಟೆಗೆ ಆಹೇರಿ ಗ್ರಾಮದಲ್ಲಿ ವಿದ್ಯುತ್ ಸ್ವೀಕರಣಾ ಕೇಂದ್ರದ ಉದ್ಘಾಟನೆಯನ್ನು ಇಂದನ ಸಚಿವ ವಿ.ಸುನೀಲಕುಮಾರ ಮಾಡಲಿದ್ದಾರೆ ಎಂದು ಹೇಳಿದರು.
ಸಿಂದಗಿ ನಗರ, ಆಲಮೇಲ, ಕೇಂದ್ರಗಳಲ್ಲಿ 110 ಕೆವಿ ಸ್ಟೇಷನ್‌ಗಳಿಗೆ 10 ರಿಂದ 20 ಮೆಗಾವ್ಯಾಟ್‌ಗೆ ಗೋಲಗೇರಿ, ಗುಬ್ಬೆವಾಡ ಬಾಗದ 33ಕೆವಿ ಸ್ಟೇಷನ್‌ಗಳಿಗೆ 3 ರಿಂದ 5 ಮೆಗಾವ್ಯಾಟ್‌ಗೆ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಟಿಸಿಗಳನ್ನು ಅಳವಡಿಕೆ ಮಾಡಲಾಗುತ್ತಿದೆ ಎಂದರು.
ಉಪ ಚುನಾವಣೆಯ ನಂತರ ಒಂದು ವರ್ಷದಲ್ಲಿ 5 ಹೊಸ ವಿದ್ಯುತ್ ಪ್ರಸರಣ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. ಈ ಭಾಗದ ರೈತರಿಗೆ ಸಂಪೂರ್ಣ ವಿದ್ಯುತ್ ಪೂರೈಕೆಯಾದರೆ ಸಮಗ್ರ ಕೃಷಿಗೆ ಒಳಿತಾಗಲಿದೆ. ಈ ಬೇಸಿಗೆ ಅಷ್ಟರಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದರು.
ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ 41 ಗ್ರಾಮಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ೩ ಕೋಟಿ 75 ಲಕ್ಷ ರೂಪಾಯಿ ಅನದಾನ ಮಂಜೂರು ಮಾಡಲಾಗಿದೆ ಎಂದರು.
ಈ ವೇಳೆ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಶ್ರೀಶೈಲ ಪಾರಗೊಂಡ, ಕೆಡಿಪಿ ಸದಸ್ಯ ಶಿವಕುಮಾರ ಬಿರಾದಾರ ಇದ್ದರು.
