ಸಿಂದಗಿ : ಪಟ್ಟಣದಲ್ಲಿ ಕೆಲ ದಿನಗಳ ಹಿಂದೆನಡೆದ ಸಾರ್ವಜನಿಕರಿಗೆ ಸಂಚಲನ ಮೂಡಿಸಿದ ದರೋಡೆಕೊರರು ಜನರ ಮದ್ಯದಲ್ಲಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಬಂದಿಸಿದ್ದಾರೆ.
ದಿನಾಂಕ: 13/02/2023 ರಂದು 18:05 ಗಂಟೆಗೆ ಸಿಂದಗಿ ಪಟ್ಟಣದ ಶಾಂತೇಶ್ವರ ಮಠದ ಹತ್ತಿರ ಇರುವ ಅಶೋಕ ಕಾಂಬಳೆ ಇವರ ಕಾಂಪ್ಲೆಕ್ಷದ ನೆಲಮಾಡಿಗೆಯಲ್ಲಿ ಬಾಡಿಗೆ ಇರುವ ಜ್ಯೂವೇಲರ್ನ ಅಂಗಡಿಯಲ್ಲಿ, ಯಾರೋ ನಾಲ್ಕು ಜನ ಅಪರಿಚಿತರು ಮುಖಕ್ಕೆ ಕರಿ ಬಣ್ಣದ ಮಾಸ್ಕ್ ಹಾಕಿಕೊಂಡು ತಮ್ಮ ಕೈಯಲ್ಲಿ ಕಂಟ್ರಿ ಪಿಸ್ತೂಲ್, ಮಚ್ಚುಗಳನ್ನು, ಹಿಡಿದುಕೊಂಡು, ಸುಚಿತವಾಗಿ ಸುಲಗೆ ಮಾಡುವ ಉದ್ದೇಶದಿಂದ ಅಂಗಡಿಯ ಒಳಗೆ ಬಂದು ನಾಗರಾಜ ಈರಣ್ಣ ಪತ್ತಾರ ಇವರಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸುಲಗೆ ಮಾಡಲು ಪ್ರಯತ್ನಿಸಿ ಓಡಿ ಹೋಗಿರುತ್ತಾರೆ ಎಂದು ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಅಂದು ಸಾರ್ವಜನಿಕರ ದೈರ್ಯದಿಂದ ಸಿಂದಗಿ ಪೊಲೀಸ ಸಿಬ್ಬಂದಿಗಳಿಗೆ ಇಬ್ಬರು ಆರೋಪಿಗಳನ್ನು ಹಿಡಿದುಕೊಟ್ಟಿರುವ ಬಗ್ಗೆ ವರದಿ ಮಾಡಲಾಗಿತ್ತು.
ತನಿಖೆ ಪ್ರಾರಂಬಿಸಿದ ಪೊಲೀಸ್ ಇಲಾಖೆ
ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ ಪೊಲೀಸ್ ಇಲಾಖೆ ಆರೋಪಿತರನ್ನು ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದಕುಮಾರ ಜಿಲ್ಲಾ ಪೊಲೀಸ ಉಪ ಅಧೀಕ್ಷಕ ಶಂಕರ ಮಾರಿಹಾಳ ಸಿಬ್ಬಂದಿಗಳಿಗೆ ಒಂದು ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದರು. ಅದರಂತೆ ಚಂದ್ರಕಾಂತ ನಂದರಡ್ಡಿ ಡಿ.ವಾಯ್.ಎಸ್.ಪಿ ಇಂಡಿ ಉಪವಿಭಾಗ ರವರ ನೇತೃತ್ವದಲ್ಲಿ, ಹುಲುಗಪ್ಪ ಸಿಪಿಐ ಸಿಂದಗಿ ವೃತ್ತ, ರವರು, ಶಿವರಾಜ ನಾಯಕವಾಡಿ, ಪಿ.ಎಸ್.ಐ (ಕಾಸು), ಸಿಂದಗಿ ಪಿ.ಎಸ್. ಸಿಂದಗಿ ಠಾಣೆಯ ಸಿಬ್ಬಂದಿ ಜನರಾದ ಎಮ್.ಜಿ. ಬಿರಾದಾರ ಎ.ಎಸ್.ಐ, ಬಿ.ಎಲ್. ಪಟೇದ , ಎಸ್.ಕೆ. ಯಳಸಂಗಿ, ಬಿ.ಜೆ. ಮುಳಸಾವಳಗಿ , ಎಸ್.ಎಸ್. ನಾಟೀಕಾರ, ಆರ್.ಎಲ್.ಕಟ್ಟಮನಿ , ಪಿ.ಕೆ. ನಾಗರಾಳ, ಎಸ್.ಎಸ್ ಕೊಂಡಿ , ಎಸ್.ಡಿ.ದೊಡಮನಿ, ಇವರ ತಂಡ ರಚನೆ ಮಾಡಿದ್ದರು.
ಆರೋಪಿತರ ಪತ್ತೆ ಕಾರ್ಯ ಮಾಡುತ್ತಿದ್ದಾಗ ದಿನಾಂಕ:- 21.02.2023 ರಂದು ಬೆಳಗಿನ ಜಾವ 04:30ರ ಸುಮಾರಿಗೆ ಆರೋಪಿತರಾದ 1) ರಾಜಾ ತಂದೆ ನೂರದ್ದಿನಸಾಬ ಸೌದಾಗಾರ ವಯಾ 23 ವರ್ಷ, ಉದ್ಯೋಗ ಕುರಿ ವ್ಯಾಪಾರ, ಜಾತಿ-ಮುಸ್ಲಿಂ ಸಾ, ಆಲಮೇಲ, 2) ಪ್ರದೀಪ ತಂ, ಸೂರ್ಯಕಾಂತ ಕಾಳಬುರ, ವಯಾ-31 ವರ್ಷ,ಜಾತಿ-ಮರಾಠ, ಉದ್ಯೋಗ- ರಿಯಲ್ ಎಸ್ಟೇಟ್, ಸಾ.ಲೋಣಿ ಕಾಳಬೂರ ತಾ. ಹವೇಲಿ, ಜಿ.ಪೂನಾ ರಾಜ್ಯ ಮಾಹಾರಾಷ್ಟ್ರ, 3] ರಾಹುಲ ತಂದೆ ಮೋಹನ ಬಾಗುಲ ವಯಾ-22 ವರ್ಷ, ಜಾತಿ ಹಿಂದೂ ಹರಿಜನ, ಉದ್ಯೋಗ- ಆಟೋ ಚಾಲಕ ಸಾ. ಸಿಂಹಗಡ ರೋಡ ಡೈರಿ ತಾ. ಹವೇಲಿ ಜಿಲ್ಲಾ, ಪುಣೆ, 4) ಮುದಕಪ್ಪ ತಂದೆ ಅಂಬಣ್ಣ ಕಟ್ಟಮನಿ ವಯಾ-23 ವರ್ಷ, ಜಾತಿ-ಹಿಂದೂ ವಡ್ಡರ, ಉದ್ಯೋಗ, ಒಕ್ಕಲುತನ ಸಾ. ಆಲಮೇಲ ಕಡಣಿ ಆಗಸಿ ಹತ್ತಿರ, ತಾ. ಆಲಮೇಲ, 5) ಬಜರಂಗಿ ತಂದೆ ರಾಮರಾವ ಪಾಟೀಲ ವಯಾ-54 ವರ್ಷ, ಜಾತಿ ಹಿಂದೂ ಮರಾಠ, ಉದ್ಯೋಗ- ಅಕ್ಕಸಾಲಿಗ, ಸಾ. ಕವಲಾಪೂರ ತಾ. ಮಿರಜ ಜಿ. ಸಾಂಗ್ಲಿ, ಹಾಲವಸ್ತಿ, ಅರ್ಜುಣಗಿ ಕೆ.ಡಿ. ತಾ.ಇಂಡಿ, ಇವರಿಗೆ ಸಿಂದಗಿಯ ಮೋರಟಗಿ ಬೈಪಾಸ್ ಹತ್ತಿರ ವಶಕ್ಕೆ ಪಡೆದುಕೊಂಡು ಆರೋಪಿತರಿಂದ ಎರಡು ಕಂಟ್ರಿ ಪಿಸ್ತೂಲ್, ಎಂಟು ಜೀವಂತ ಗುಂಡುಗಳು, ಕಬ್ಬಿಣದ ಮಚ್ಚುಗಳು, ಮೊಟಾರ ಸೈಕಲಗಳು ಎರಡು ಹಾಗೂ ಆರೋಪಿತರು ಕೃತ್ಯಕ್ಕೆ ಬಳಸಿದ ಕಪ್ಪು ಬಣ್ಣದ ಐದು ಮಾಸ್ಕಗಳು.

ಹೀಗೆ ಒಟ್ಟು ಕಿಮ್ಮತ್ತು 1,06,000/- ರೂಗಳು ಕೀಮ್ಮತ್ತಿನವುಗಳನ್ನು ವಶಪಡಿಸಿಕೊಂಡು ಐದು ಜನಾ ಆರೋಪಿತರಿಗೆ ನ್ಯಾಯಾಂಗ ಬಂಧನ ಕುರಿತು ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಿಜಯಪೂರ ರವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
