
ಸಿಂದಗಿ: ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಬ್ರಾಹ್ಮಣ ಶಕ್ತಿ ಸಂಗಮ ಕಾರ್ಯಕ್ರಮವನ್ನು ಫೆಬ್ರವರಿ 25ರಂದು ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ಆರ್ಗನೈಜೆರಷನ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಂತೋಷಕುಮಾರ ದೇಶಪಾಂಡೆ ಹೇಳಿದರು.
ನಗರದ ರಾಘವೇಂದ್ರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.25ರಂದು ನಗರದ ಕಂದಗಲ್ ಹಣಮಂತರಾಯ್ ರಂಗಮAದಿರದಲ್ಲಿ ಬೆಳಗ್ಗೆ 9 ಕ್ಕೆ ಶೋಭಾಯಾತ್ರೆಗೆ ವೇ.ಮೂ. ಶ್ರೀ ಕೃಷ್ಣಭಟ್ಟ ಗಲಗಲಿ, ವೇ.ಮೂ. ಶ್ರೀ ಶಂಕರಭಟ್ಟ ಅಗ್ನಿಹೋತ್ರಿ ಚಾಲನೆ ನೀಡಲಿದ್ದಾರೆ ಎಂದರು. ತದನಂತರ ಬೆಳಗ್ಗೆ 11:30ಕ್ಕೆ ಕಾರ್ಯಕ್ರಮ ಮಾಜಿ ಸಚಿವ ದಿನೇಶ ಗುಂಡುರಾವ್ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ಟ ಆಪ್ ಮುಖಂಡ ಭಾಸ್ಕರರಾವ್, ಸಿಂದಗಿಯ ಭೀಮಾಶಂಕರ ಮಠದ ದತ್ತಪಯ್ಯ ಸ್ವಾಮಿಗಳು ಸೇರಿದಂತೆ ಗಣ್ಯರು ಭಾಗವಹಿಸುತ್ತಾರೆ. ಹಾಗಾಗಿ ಸಿಂದಗಿ ತಾಲೂಕಿನ ಬ್ರಾಹ್ಮಣ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜನಿಕಾಂತ ಕುಲಕರ್ಣಿ, ಅರ್ಚಕರಾದ ಪಂಡಿತ್ ವಿಠಲಾಚಾರ್ಯ ಗುಂಡು ಕುಲಕರ್ಣಿ, ಶ್ರೀಧರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಅನೇಕರು ಇದ್ದರು.
