
ಸಿಂದಗಿ : ರಾಜ್ಯ ಶಿಕ್ಷಣ ಇಲಾಖೆ ಮುಖ್ಯಸ್ಥರು ಧಾರವಾಡ ವಿಶ್ವವಿಧ್ಯಾಲಯದ ಕಮಿಷನರ್ ಸೇರಿದಂತೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಇಲ್ಲದೆ ಇದ್ದರೆ ನಾಯಕಲ್ ಅವರ ಆತ್ಮಹತ್ಯೆ ಯಂತಹ ಘಟನೆಗಳು ಶಿಕ್ಷಕರ ವಲಯದಲ್ಲಿ ಇನ್ನಷ್ಟು ಇವೆ ಎನ್ನಲಾಗುತ್ತಿದೆ, ಕ್ರಮ ತೆಗೆದುಕೋಳ್ಳದೆ ಇದ್ದರೆ ಇನ್ನಷ್ಟು ಶಿಕ್ಷಕರನ್ನು ಕಳೆದುಕೋಳ್ಳಬೇಕಾಗುತ್ತದೆ ಎಂದು ಮಾಜಿ ವಿಧಾನ ಪರಿಷತ್ತ ಸದಸ್ಯ ಅರುಣ ಶಹಾಪುರ ಹೇಳಿದರು.
ಮೃತ್ತ ಶಿಕ್ಷಕ ಬಸವರಾಜ ನಾಯಕಲ್ ಅವರ ಮನೆಗೆ ಬೇಟಿ ನೀಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಒಂದು ಇಲಾಖೆಯ ಜವಾಬ್ದಾರಿಯುತ ಶಿಕ್ಷಕರು ಮೂರು-ಮೂರು ಮುಖ್ಯ ಗುರುಗಳು ವರ್ಗಾವಣೆ ಆದರು ಸಹಿತ ಮೂಲ ದಾಖಲಾತಿಗಳು ಸರಿ ಇರುವುದಿಲ್ಲ ಎಂಬುದು ಆಘಾತಕಾರಿ ವಿಷಯ. ಇಂತಹ ಹಲವಾರು ದೂರುಗಳು ಇನ್ನು ಇವೆ ಎಂಬ ಚರ್ಚೆಗಳು ಶಿಕ್ಷಕರ ವಲಯದಲ್ಲಿ ಪ್ರಾರಂಭವಾಗಿದ್ದು ನಾಯಕಲ್ ಅವರ ಡೇತ್ ನೋಟ್ ನಲ್ಲಿ ಬರೆದಿರುವ ಬರಹಗಳು ಕೇವಲ ಅವರ ಸಮಸ್ಯೆಗಳಲ್ಲ ಶಿಕ್ಷಕರ ಕ್ಷೇತ್ರದ ಹಲವಾರು ಶಿಕ್ಷಕರ ಎದುರಿಸುವ ಸವಾಲುಗಳ ಸಮಸ್ಯೆ ಇದ್ದಾಗಿದ್ದೆ ಎಂಬುದು ಇಂದು ಪ್ರಚಲಿತವಾಗಿದೆ.
ಮೇಲಾಧಿಕಾರಿಗಳ ಕಿರುಕುಳಕ್ಕೆ ಬಲಿಯಾದ ಶಿಕ್ಷಕ | ದಂಡಾಧಿಕಾರಿಗಳ ಕಛೇರಿ ಮುಂದೆ ಶವವಿಟ್ಟು ಹೋರಾಟ
ಒಬ್ಬ ಶಿಕ್ಷಕನನ್ನು ಶಿಕ್ಷಕ ಸಮುದಾಯ , ಕುಟುಂಬ ಕಳೆದುಕೊಂಡಿದೆ ಸರ್ಕಾರ ಮಧ್ಯ ಪ್ರವೇಶಿಸಿ ರಾಜ್ಯಾದ್ಯಂತ ಇರುವ ಶಾಲೆಗಳ ಒಂದು ವರದಿಯನ್ನು ತರಿಸಿಕೊಂಡು ಕ್ರಮವಹಿಸಬೇಕು. ಸಂಬಂಧಪಟ್ಟ ದಾಖಲಾತಿಗಳು ಸರಿಮಾಡಿಸುವ ಮಹತ್ತರ ಜವಾಬ್ದಾರಿ ಸರಕಾರದ ಮೇಲಿದೆ. ಶಿಕ್ಷಕರ ಇನ್ನೇಷ್ಟು ಬಲಿಯಾಗಬೇಕು ಎಂಬ ಚರ್ಚೆಗಳು ನಡೆಯುತ್ತಿರುವುದು ಆಘಾತಕಾರಿ. ಆದರಿಂದ ಒಂದು ದೊಡ್ಡ ಅಭಿಯಾನದೊಂದಿಗೆ ಸರ್ಕಾರ ದಾಖಲಾತಿ ಕೊರತೆಯನ್ನ ಸರಿಪಡಿಸಬೇಕು ಬೇಕೆಂದು ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಆಗ್ರಹಿಸಿದರು.
ಸಜ್ಜನರು ತಮ್ಮಗೆ ತಾವು ಹಾನಿ ಮಾಡಿಕೋಳ್ಳುವುದರಿಂದ ದುರ್ಜನರ ಅಟ್ಟಹಾಸಕ್ಕೆ ಕ್ರಮವಹಿಸುವ ಕೆಲಸ ಇಗಾಗಲೇ ಪೊಲೀಸರು ಉತ್ತಮವಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ ನ್ಯಾಯ ಕೊಡಿಸುವ ಕೆಲಸ ಆಗಬೇಕು. ರಾಜ್ಯದಲ್ಲಿಯೆ ಒಳ್ಳೆಯ ಆಯುಕ್ತರ ಕಛೇರಿ ಎಂಬ ಹೇಗಳಿಕೆ ದಾರವಾಡ ಆಯುಕ್ತರಿಗೆ ಇದೆ. ಅಪರ ಆಯುಕ್ತರು ಡೇತ್ ನೋಟ್ ನಲ್ಲಿ ಬರೆದಿರುವ ಅಂಶಗಳನ್ನು ಗಂಬೀರವಾಗಿ ತೆಗೆದುಕೊಂಡು ಈರೀತಿಯ ವಾತವರಣ ಸರಿಪಡಿಸಬೇಕು. ಇದರಿಂದ ತೊಂದರೆಗೋಳಗಾದ ಕುಟುಂಬಕ್ಕೆ ಸರ್ಕಾರದ ಸೌಲಭ್ಯಗಳು ವದಗಿಸಲು ಅಪರ ಆಯುಕ್ತರಿಗೆ ಹಾಗೂ ಸರ್ಕಾರದ ಶಿಕ್ಷಣ ಮುಖ್ಯಸ್ಥರಿಗೆ ಆಗ್ರಹಿಸಿದರು.
ಕುಟುಂಬದ ರೋದನೆ.
ನನ್ನ ಗಂಡನಿಗೆ ಚಾರ್ಜ್ ಬೇಡವೆಂದು ಜಿ.ಎನ್. ಪಾಟೀಲ ಸರ್ ಗೆ ನಾನು ತಿಳಿಸಿದೆ ಆದರೆ ಅವರು ಪ್ರಮೋಷನ್ ಮುಖ್ಯಗುರುಗಳಾಗಿ ಇವರಿಗೆ ಬೇಡವೆಂದರು ಚಾರ್ಜ್ ವದಗಿಸಿ ಸಿ.ಆರ್.ಸಿ ಜವಾಬ್ದಾರಿ ತೆಗೆದು ಕೊಂಡಿರುವುದು ಸರಿಯಾದ್ದದಲ್ಲ ಎಂದು ಮೃತ್ತ ಶಿಕ್ಷಕ ಬಸವರಾಜ ನಾಯಕಲ್ ಧರ್ಮಪತ್ನಿ ಅಳಲು ತೊಡಿಕೊಂಡರು. ಶಾಸಕರು, ಸಚಿವರು, ಲಂಚಕ್ಕೆ ಕೈ ಒಡ್ಡದಿದ್ದರೆ ಅಧಿಕಾರಿಗಳೆಕ್ಕೆ ಲಂಚಬಾಕರಾಗುತ್ತಾರೆ ಮೊದಲು ರಾಜಕೀಯ ಅಧಿಕಾರದಲ್ಲಿರುವವರು ಬದಲಾಗಬೇಕು ಪ್ರಮಾಣಿಕತೆಯಿಂದ ಅವರು ಕೆಲಸ ಮಾಡಿದಾಗ ಮಾತ್ರ ಇಂತಹ ಘಟನೆಗಳು ತಪ್ಪಿಸಲು ಸಾದ್ಯವೆಂದು ನಿವೃತ್ತ ಶಿಕ್ಷಕ ಕುಟುಂಬದ ರುದ್ರಗೌಡ ಬಿರಾದಾರ ಹೇಳಿದರು.
ಭೀಮಾಶಂಕರ ತಾರಾಪೂರ, ಶಿವಾನಂದ ಶಾಹಪೂರ, ಅರವಿಂದ ತೇಲಿ, ಡಾ.ಅಂಬ್ರೀಷ ಬಿರಾದಾರ,ವಿಶ್ವನಾಥ ಕುರಡೆ, ಶಾಂತಗೌಡ ಪಾಟೀಲ, ಮಲ್ಲು ಅಲ್ಲಾಪುರ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಸೇರಿದಂತೆ ಕುಟುಂಬಸ್ಥರು ಶಿಕ್ಷಕರು ಉಪಸ್ಥಿತರಿದ್ದರು.
ಎಸ್.ಡಿ.ಎಮ್.ಸಿ ಹಾಗೂ ಗ್ರಾಮಸ್ಥರ ಹೊಣೆಗಾರಿಕೆ ಮಹತ್ವವಾದದ್ದು. ಅಮೂಲಗ್ರಹವಾದಂತ ಆತ್ಮವಲೋಕನ ಆಗಬೇಕು. ಜಿಲ್ಲಾ ಪಂಚಾಯತ ವಿಜಯಪುರ, ಅಪರ ಆಯುಕ್ತರು, ಕರ್ನಾಟಕ ಸರ್ಕಾರ, ಎಸ್.ಡಿ.ಎಮ್.ಸಿ ಎಲ್ಲರಿಗು ಕಣ್ಣತೇರಿಸುವ ಘಟನೆ ಇದು. -ಅರುಣ ಶಹಾಪುರ ಮಾಜಿ ವಿ.ಪ.ಸದಸ್ಯರು
