Home News ಸಂವಿಧಾನದಿಂದಲೇ ಭಾರತವು ಸದೃಢ ರಾಷ್ಟ್ರವಾಗಿದೆ: ಡಾ.ಕೆ.ಜಿ.ಪೂಜಾರಿ

ಸಂವಿಧಾನದಿಂದಲೇ ಭಾರತವು ಸದೃಢ ರಾಷ್ಟ್ರವಾಗಿದೆ: ಡಾ.ಕೆ.ಜಿ.ಪೂಜಾರಿ

by vegadhut@gmail.com.
0 comments

 

ವಿಜಯಪುರ : ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿಯೇ ಭಾರತ ದೇಶವು ಸದೃಢ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಬಿ.ಎಲ್.ಡಿ.ಇ ಅಸೋಸಿಯೇಷನ್ ಪದವಿ ವಿಭಾಗದ ಡಾ.ಕೆ.ಜಿ.ಪೂಜಾರಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಜಯಪುರ ನಗರದ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೆಪ್ಟೆಂಬರ್ 14ರಂದು ಏರ್ಪಡಿಸಿದ್ದ ಡಾ.ಅಂಬೇಡ್ಕರ ಓದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

banner

 

ಇಂದಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಓದಿ ಅವರ ವಿಚಾರಧಾರೆಗಳನ್ನು ಅರಿಯಬೇಕು. ಅವರು ಹೇಳಿದ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ಮಾಡಿದರು.

ಚಿಂತಕರಾದ ಡಾ.ಶ್ರೀನಿವಾಸ ದೊಡ್ಡಮನಿ ಅವರು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು-ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಯು.ಎಸ್.ಪೂಜೇರಿ ಅವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಪ ಪ್ರಾಚಾರ್ಯರಾದ ಬಗಲಿಯವರು ಆಗಮಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಬಿ.ನಾಗರಾಜ ಅವರು ಪ್ರಾಸ್ತಾವಿಕ ಮಾತನಾಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಕುಮಾರಿ ಶೋಭಾ ಮ್ಯಾಗೇರಿ ಅವರು ಪ್ರಥಮ ಸ್ಥಾನವನ್ನು, ಕುಮಾರ ಅಂಬರೀಷ ನಾಯ್ಕೋಡಿ  ದ್ವೀತಿಯ ಸ್ಥಾನವನ್ನು, ನೀತಿನ್ ಬ. ಪಾಟೀಲ  ತೃತಿಯ ಸ್ಥಾನ ಮತ್ತು ಅಬ್ದುಲ್ ಯಾದಗಿರಿ  ಹಾಗೂ ಮಾನಸಿ ಎಸ್ ದ್ರವೆ  ಸಮಾಧನಕರ ಬಹುಮಾನ ಪಡೆದು ವಿಜೇತರಾಗಿರುವುದಕ್ಕೆ ಕ್ರಮವಾಗಿ 3000 ರೂ., 2000 ರೂ.,1500 ರೂ., ಸಮಾಧನಕರ 1000 ರೂ.ಗಳ ಮೌಲ್ಯದ ಪುಸ್ತಕಗಳನ್ನು ಬಹುಮಾನದ ರೂಪದಲ್ಲಿ ವಿತರಣೆ ಮಾಡಲಾಯಿತು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news