
ಸಿಂದಗಿ: ತಾಲೂಕಿನ ಗೋಲಗೇರಿ ರಥೋತ್ಸವದ ವೇಳೆ ಮೇಲಿಂದ ಆಯಾತಪ್ಪಿ ಬಿದ್ದು ವ್ಯಕ್ತಿ ಒಬ್ಬ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ನಡೆದಿದೆ.
ಗೋಲಗೇರಿಯ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ಈ ಅವಘದ ಸಂಭವಿಸಿದೆ. ಗೋಲಗೇರಿಯ ನಿವಾಸಿ ಮುದುಕಣ್ಣ ಕಾಚಾಪುರ (50) ಮೃತ ದುರ್ದೈವಿ. ಅವನು ಮೇಲುಗಡೆಯಿಂದ ಕೆಳಗೆ ಬೀಳುವ ಸಮಯದಲ್ಲಿ ರಥದ ಬಳಿ ನಿಂತಿದ್ದ ಓರ್ವನಿಗೆ ಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತ ಮುದುಕಣ್ಣ ಕಾಚಾಪುರ ಸುಮಾರು 70 ಅಡಿ ಎತ್ತರದ ರಥದ ಮೇಲೆ ಏರಿ ಕಳಶ ಕಟ್ಟುತ್ತಿದ್ದ ಸಂದರ್ಭದಲ್ಲಿ ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
