
ಸಿಂದಗಿ: ಬೆಲೆ ಏರಿಕೆ ನಿಯಂತ್ರಣ ಕನಿಷ್ಠ ಕೂಲಿ ನೀಡದ ಸರಕಾರ ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವೈಪಲ್ಯ ಮುಚ್ಚಿಡಲು ಪ್ರಚಾರ ತಂತ್ರವನ್ನು ಬಳಸಿ ಜನರಿಗೆ ಮೊಸ ಮಾಡುತ್ತಿವೆ. ಧರ್ಮದ ಹೆಸರಿನಲ್ಲಿ ಜನರ ನಡುವೆ ಜಗಳ ತಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸಿಐಟಿಯು 4ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರ ಸಮಸ್ಯೆಗಳು ಹೆಚ್ಚುತ್ತಿವೆ. ಸರಕಾರಗಳು ಶ್ರೀಮಂತರ ಆದಾಯ ಹೆಚ್ಚಿಸಿ ಬಡವರ ಕೂಲಿ ಕಸಿಯಲು ಮುಂದಾಗಿವೆ. ಉದ್ಯೋಗ ನಾಶವಾಗುತ್ತಿದೆ, ಕೂಲಿ ಕಡಿಮೆಯಾಗುತ್ತಿದೆ. ಬಡಜನರ ಸಂಕಷ್ಟ ಏರಿಕೆಯಾಗುತ್ತಿರುವಾಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರೀಮಂತರ ಆದಾಯ ಹೆಚ್ಚಿಸಲು ಬಡವರ ಕೂಲಿ ಕಸಿಯಲು ಮುಂದಾಗಿವೆ ಸರಕಾರದ ನೀತಿಯನ್ನು ಖಂಡಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಕುರಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಮಠ ಅಧ್ಯಕ್ಷತೆ ವಹಿಸಿದರು. ಎಮ್. ಕೆ. ಚಳ್ಳಗಿ & ಪಿ. ಎಸ್. ಕೊಂಡಗೂಳಿ, ಬಿಸ್ಮಿಲ್ಲಾ ಇನಾಮದಾರ ಮತ್ತು ಎಲ್. ಎಮ್. ಕುಂಬಾರ ವೇದಿಕೆ ಮೇಲಿದ್ದರು.
ಈ ವೇಳೆ ನಾಲ್ಕನೆಯ ಸಿಐಟಿಯು ಸಮ್ಮೇಳನದಲ್ಲಿ ಅಂಗನವಾಡಿ, ಬಿಸಿ ಊಟ ಮತ್ತು ಗ್ರಾಮ ಪಂಚಾಯತಿ ನೌಕರ ಮುರುಗೇಂದ್ರ ಹುಣಶ್ಯಾಳ, ಬಿ.ಎಮ್. ಸುರುಪುರ, ಅಂಬಾಜಿ ಬಾವುರ, ಮಲಕಣ್ಣ ಸುಂಗಠಾಣ, ಶರಣಪ್ಪ ಹರಿಜನ, ಭಿಮಬಾಯಿ ಬಾಣಿ, ಈರಮ್ಮ ಬಾಣಿ, ಧರೆಪ್ಪ ಕಕ್ಕಳಮೇಲಿ, ಶಿವಪ್ಪ ಭಾಸಗಿ, ರೇಣುಕಾ ಸುಣಗಾರ, ಯಾಸೀನ ಕೊರಬು, ಎಸ್.ಎಸ್.ತಳವಾರ, ಸವಿತಾ ಕೊಕಟನೂರ, ಸೈನಾಜ್ ಮುಲ್ಲಾ, ಕೆ.ಬಿ.ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

