
ಸಿಂದಗಿ : ಪುರಸಭೆಯಲ್ಲಿ ಇಂದು ನಡೆಯಬೇಕಿರುವ ಅವಿಶ್ವಾಸ ಗೋತ್ತುವಳಿ ಸಭೆಗೆ ಪುರಸಭೆ ಅಧ್ಯಕ್ಷರಾದ ಶಾಂತವೀರ ಮನಗೂಳಿ ವಿರುದ್ದ ೧೫ ಜನ ಪುರಸಭೆ ಸದಸ್ಯರು ಅವಿಶ್ವಾಸ ನಿರ್ಣಯ ಗೋತ್ತವಳಿಗೆ ಮನವಿ ಮಾಡಿಕೊಂಡಿದ್ದರು.
24 ಜನೇವರಿ 2022 ರಂದು ನಡೆದ ವಿಶ್ವಾಸ ನಿರ್ಣಯ ಗೋತ್ತುವಳಿ ನಿಯಮಾನುಸಾರ ಪಾಲಿಸಿಲ್ಲವೆಂದು ಸದಸ್ಯರ ತಂಡವು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಹಾಗೂ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ನೀಡಿದ ಹಿನ್ನಲ್ಲೆ 24ರಂದು ನಡೆದ ಅವಿಶ್ವಾಸ ಗೋತ್ತುವಳಿ ಸಭೆಯನ್ನು ರದ್ದು ಪಡಿಸಿ ಉಪ ವಿಭಾಗ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಅವರ ಆದೇಶದನ್ವಯ ಪುರಸಭೆ ಮುಖ್ಯಾಧಿಕಾರಿಯು 11 ಅಕ್ಟೋಬರ್ 2022 ರಂದು ಅವಿಶ್ವಾಸ ನಿರ್ಣಯ ಗೋತ್ತುವಳಿಗೆ 23 ಚುನಾಯಿತ ಸದಸ್ಯರು ಹಾಗೂ ಶಾಸಕರು, ಸಂಸದರಿಗೆ 21 ಅಕ್ಟೋಬರ್ 2022 ರಂದು ಸಭೆಯ ಅವಿಶ್ವಾಸ ಗೋತ್ತವಳಿ ಸಭೆಯ ಬಗ್ಗೆ ನೋಟಿಸ್ ನೀಡಿದ್ದರು.
ಅವಿಶ್ವಾಸ ನಿರ್ಣಯ ಗೋತ್ತುವಳಿ ಸಭೆಯ ಬಗ್ಗೆ ಕಾನೂನು ಹೋರಾಟಕ್ಕಿಳಿದ ಪುರಸಭೆ ಅಧ್ಯಕ್ಷರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಮನವಿ ನಿಡಿದ್ದರು. ಅಧ್ಯಕ್ಷರ ಪರ ವಾದಮಾಡಿದ ವಕೀಲರ ತಂಡವು “ಸೆಕ್ಷನ್ 42ರ ಉಪವಿಭಾಗ (9)” ಹಿಂದಿನ ನಿರ್ಣಯದ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಯಾವುದೇ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದಿಲ್ಲ ಎಂದು ವಾದಿಸಿದರು.
ವಾದವನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಾದೀಶರು ಹಿಂದಿನ ದಿನಾಂಕದಿಂದ ಅವಿಶ್ವಾಸ ನಿರ್ಣಯದ ಒಂದು ವರ್ಷದ ಅವಧಿಯೊಳಗೆ 2 ಅವಿಶ್ವಾಸದ ನಿರ್ಣಯಗಳನ್ನು ಅಂಗಿಕರಿಸಲಾಗುವುದಿಲ್ಲ ಎಂದು ಇದು ಸ್ಪಷ್ಟವಾಗುತ್ತದೆ. 2022 ಅ.11 ರ ಅವಿಶ್ವಾಸ ಸಭೆಯ ಸೂಚನೆಯನ್ನು ನೀಡಲು ಮುಖ್ಯಧಿಕಾರಿಗೆ ಅಧಿಕಾರವಿಲ್ಲ. ಹಾಗೂ ಉಪ ವಿಭಾಗಧಿಕಾರಿಗಳು 2022 ಅ.7 ರಂದು ಅಂಗೀಕರಿಸಿದ ಹಿಂದಿನ ಆದೇಶವು ಕಾನೂನು, ಪ್ರಾಥಮಿಕ ಅಧಿಕಾರವನ್ನು ಹೊಂದಿಲ್ಲ. ಪರಿಣಾಮವಾಗಿ, ಮುಂದಿನ ಆದೇಶದವರೆಗೆ 07 ಅ. 2022 ಮತ್ತು 11 ಅ. 2022 ರ ನೀಡಲಾದ ಅವಿಶ್ವಾಸ ಗೋತ್ತುವಳಿ ನಿರ್ಣಯ ಸಭೆಗೆ ತಡೆಹಿಡಿದು ಕಲಬುರಗಿ ಹೈಕೋರ್ಟ್ ಪೀಠ ಮದ್ಯಂತರ ಆದೇಶ ನೀಡಿದೆ.

