Home News ಆಶ್ರಯ ಮನೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ ಮನಗೂಳಿ

ಆಶ್ರಯ ಮನೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ ಮನಗೂಳಿ

by vegadhut@gmail.com.
0 comments

ಹತ್ತೊಂಬತ್ತು ಕೋಟಿ ರೂಗಳ ಅನುದಾನ ಕೆಲವೇ ದಿನಗಳಲ್ಲಿ ತಂದು ಇನ್ನಷ್ಟು ಜನರಿಗೆ ಸೂರು ವದಗಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಿಂದಗಿ: ಪಟ್ಟಣದ ಸ್ಲಂ ಬೋರ್ಡ್ ನಿಂದು ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದು, ಕಾಮಗಾರಿಯನ್ನು ನೂತನ ಶಾಸಕ ಅಶೋಕ ಮನಗೂಳಿ ವೀಕ್ಷಿಸಿದರು.

ಕಾಮಗಾರಿಯ ವೀಕ್ಷಣೆ ಸಮಯದಲ್ಲಿ ಅಧಿಕಾರಿ ಎಂ.ಎಲ್.ಲಮಾಣಿ, ನಿರ್ವಾಹಕ ಅಭಿಯಂತರರ , ಬಸವರಾಜ ಸಲಾಲಟ್ಟಿ ಸಹಾಯಕ ನಿರ್ವಾಹಕ ಅಭಿಯಂತರರು ಶಾಸಕರಿಗೆ ಮಾಹಿತಿ ನೀಡಿದರು. ಮಾಹಿತಿ  ಪಡೆದು ಅವರು ಮನೆಗಳ ಬಾಗಿಲುಗಳು ಸಿಮೆಂಟ್ ಬಾಗಿಲುಗಳು ಹಾಕಿರುವುದರಿಂದ  ಇದರ ಬಾಳ್ವಿಕೆ ಬರುತ್ತದೆಯೆ ಎಂದು ಅಧಿಕಾರಿಗಳಿಗೆ ಪ್ರಶ್ನೀಸಿದರು. ಈ ಬಾಗಿಲುಗಳಿಗೆ ಲೈಪ್ ಇಲ್ಲ  ಆದಕಾರಣದಿಂದ ವುಡ್ ಬಾಗಿಲುಗಳು ಹಾಗೂ ನೆಲ ಹಾಸಿಗೆಗೆ ಪರಸಿಗಳು ಅಳವಡಿಸುವಂತೆ ಸೂಚಿಸಿದರು.

 

banner

 

ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಯೋಜನಾ ವರದಿಯಲ್ಲಿ ಸಿಮೆಂಟ್ ಬಾಗಿಲುಗಳಿವೆ ವರದಿ ರೀತಿಯಾಗಿ ಅಳವಡಿಸಲಾಗಿದೆ ಎನ್ನುತ್ತಿದ್ದಂತೆ ಶಾಸಕ ಯೋಜನಾ ವರದಿ ಯಾರು  ಸರ್ಕಾರಕ್ಕೆ ಕಳುಹಿಸುತ್ತಾರೆ, ನೀವೆ ತಾನೆ ಯೋಜನಾ ವರದಿ ಮಾಡುವಾಗಲೆ ನೀವು ತಪ್ಪು ಮಾಡಿರುತ್ತಿರಿ ಈಗ ಸಮಜಾಯಿಸಿ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

250ಮನೆಗಳಲ್ಲಿ ಕೇವಲ 60 ಮನೆಗಳು ಈಗ ನಿರ್ಮಾಣವಾಗಿದ್ದು ಮುಂದಿನ ಮನೆಗಳಿಗೆ ವುಡ್ (ಕಟ್ಟಿಗೆಯ ಬಾಗಿಲುಗಳು) ಬಾಗಿಲುಗಳು ಅಳವಡಿಸಿ ಹೆಚ್ಚುವರಿ ಅನುದಾನ ಗುತ್ತಿಗೆದಾರರಿಗೆ ವದಗಿಸಿ ಎಂದು ಹೇಳಿದರು.

 

ಅಲ್ಲಿನ ಮೂಲ ನಿವಾಸಿಗಳೊಂದಿಗೆ ಮಾತನಾಡಿದ ಶಾಸಕರು  ಮನೆಗಳ ಮಂಜೂರಾತಿಗಿಂತಲೂ  ಕಡಿಮೆ ಜನ ಸರ್ಕಾರಕ್ಕೆ ಡಿ.ಡಿ ಕಟ್ಟಿದು ಕಂಡು ಬಂದಿದೆ. ಉಳಿದವರು ಸರ್ಕಾರಕ್ಕೆ ಹಣ‌ ಸಂದಾಯ ಮಾಡಿ  ನಿಮ್ಮಗೆ ಆದಷ್ಟು ಬೇಗ ಮನೆಗಳು ಕಾಮಗಾರಿ ಮುಗಿಸಿ ನಿಮ್ಮಗೆ ಹಸ್ತಾಂತರಿಸಲಾಗುವುದು. ಮುಂದಿನ ದಿನಮಾನಗಳಲ್ಲಿ ಹತ್ತೊಂಬತ್ತು ಕೋಟಿ ರೂಗಳ ಅನುದಾನ ತಂದು  ಅವಕಾಶ ವಂಚಿತರಿಗೆ ಸೂರು ವದಗಿಸುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುವೆ ಎಂದರು.

ಈ ಸಂದರ್ಭದಲ್ಲಿ ರಾಜು ಗುಬ್ಬೇವಾಡ, ತಿರುಪತಿ ಬಂಡಿವಡ್ಡರ, ನಾಡಿಗೆ ಪಾಟೀಲ,  ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಹಾಂತಗೌಡ ಪಾಟೀಲ, ಮಾಜಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಪುರಸಭೆ ಸದಸ್ಯ ಸಂದೀಪ ಚೌರ,  ಮಾಜಿ ಆಶ್ರಯ ಸಮಿತಿ ಸದಸ್ಯ ರಾಕೇಶ ಕಂಟಿಗೊಂಡ , ರಾಜು ಮದರಖಾನ್, ಅರವಿಂದ್ ಹಂಗರಗಿ, ಸಿದ್ದು ಮಲ್ಲೇದ,  ಹಾಗೂ ಅನೇಕ ಸ್ಲಂ ಬೋರ್ಡ್  ನಿವಾಸಿಗಳು ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news