Home News ಆರೋಗ್ಯ ಇಲಾಖೆಯ ಆಧಾರ ಸ್ಥಂಭ ಆಶಾಗಳು ; ಹೆಚ್.ಟಿ.ಮಲ್ಲಿಕಾರ್ಜುನ

ಆರೋಗ್ಯ ಇಲಾಖೆಯ ಆಧಾರ ಸ್ಥಂಭ ಆಶಾಗಳು ; ಹೆಚ್.ಟಿ.ಮಲ್ಲಿಕಾರ್ಜುನ

by vegadhut@gmail.com.
0 comments

ಆಶಾ ಕಾರ್ಯಕರ್ತೆಯರ ಸಿಂದಗಿ ತಾಲ್ಲೂಕಿನ ಪ್ರಥಮ  ಸಮ್ಮೇಳನವು ಸಿಂದಗಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿತು.

ಸಿಂದಗಿ: ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿಗಳಾದ ಎ. ಎಮ್ ಮಾಗಿ ಮಾತನಾಡಿ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಬೇಕಿದೆ. ಮತ್ತು ನಮ್ಮ ಆಶಾ ಕಾರ್ಯಕರ್ತೆಯರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು‌. ನಿಮ್ಮ ಬೇಡಿಕೆಗಳು ಇಡೇರಲಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಇನ್ನಷ್ಟು ಉತ್ತಮವಾಗಿ ಜನರಿಗೆ ತಲುಪಲು ಸಹಕಾರಿ ಯಾಗಲಿ ಎಂದು ಹಾರೈಸಿದರು. 

          ಎ.ಐ.ಯುಟಿ.ಯು.ಸಿ ಯ ಜಿಲ್ಲಾ ಅಧ್ಯಕ್ಷರಾದ ಹೆಚ್.ಟಿ.ಮಲ್ಲಿಕಾರ್ಜುನ ಮಾತನಾಡಿ ಆಶಾ ಕಾರ್ಯಕರ್ತೆಯರು ಯಾವುದೋ ಪಿ.ಎಚ್.ಸಿಯ ಆಧಾರ ಸ್ಥಂಭ ವಾಗದೇ ಅವರು ಇಡೀ ರಾಜ್ಯದ ಆರೋಗ್ಯ ಇಲಾಖೆಯ ಆಧಾರ ಸ್ತಂಭವಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ಆಶಾ ಕಾರ್ಯಕರ್ತೆಯರು ಬಂದಮೇಲೆ ಸಮಾಜದಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಸಾವು ಗಣನೀಯ ಇಳಿಕೆ ಕಂಡು ಬಂದಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ನಮ್ಮ ಸರಕಾರಗಳು ಸೂಕ್ತ ಸಂಬಳ ನೀಡುತ್ತಿಲ್ಲ. ಇದುವರೆಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷಗಳು ಕಾರ್ಮಿಕರಿಗೆ ದ್ರೋಹ ಬಗೆಯುತ್ತಲೆ ಬಂದಿವೆ ಇವಾವೂ ಕೂಡಾ ಇಂದು ಕಾರ್ಮಿಕರ ಹಿತಾಸಕ್ತಿ ಕಾಪಾಡುತ್ತಿಲ್ಲ. ಹಾಗಾಗಿ ನಮಗೆಲ್ಲಾ ಉಳಿದಿರುವುದು ಹೋರಾಟದ ದಾರಿ ಒಂದೇ ಎಂದರು. ಶ್ರೀಮಂತರು ಶ್ರೀಮಂತರಾಗುವ ಮತ್ತು ಬಡವರು ಬಡವರಾಗುವ ಈ ವ್ಯವಸ್ಥೆ ಬದಲಾಗಬೇಕು. ಬಂಡವಾಳಶಾಹಿಗಳ ಅಟ್ಟಹಾಸ ನಿಲ್ಲಿಸಬೇಕು. ನಮ್ಮ ಹೋರಾಟಗಳು ಸಾಮಾಜದಲ್ಲಿನ ಮೂಲಭೂತ ಬದಲಾವಣೆಗೆ ಪೂರಕವಾಗಲಿ, ಕಾರ್ಮಿಕರ ಹಿತ ಕಾಪಾಡುವ ರಾಜ್ಯ ಸ್ಥಾಪನೆಯಾಗಲಿ, ಕೇವಲ ಪ್ರಶಂಸೆಗೆ ಮರಳಾಗದೆ ಒಂದಾಗಿ ಹೋರಾಡಿ ಬೇಡಿಕೆ ಇಡೇರಿಸಿಕೊಳ್ಳಬೇಕಿದೆ ಎಂದರು.  

banner

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಶ

ಆಶಾ ಕಾರ್ಯಕರ್ತೆಯರ ಸಂವಾದ 

ಕಾರ್ಯಕ್ರಮದ ಎರಡನೇ ಅವಧಿಯಲ್ಲಿ  ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡಿದ ಕನ್ನೋಳಿಯ  ಆಶಾ ಕಾರ್ಯಕರ್ತೆ ರೇಣುಕಾ ಉಪ್ಪಾರ ಹೆರಿಗೆಗೆ ಹೋಗುವವರೆಗೆ ಮಾತ್ರ ನಮ್ಮಗೆ ಗೌರವ ಸಿಗುತ್ತದೆ ಆದರೆ ಆಸ್ಪತ್ರೆಗೆ ಹೋದಾಗ ನಮ್ಮಗೆ ಕಿಂಚಿತ್ತೂ ಗೌರವ ಸಿಗುವುದಿಲ್ಲ.  ಅಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ದುರ್ನಡತೆ ಮೀತಿ ಮೀರಿದೆ ಎಂದರೆ ಹೂವಿನಳ್ಳಿ‌ಯ ಆಶಾ ಕಾರ್ಯಕರ್ತೆ ಸುನಂದಾ ಮಾತನಾಡಿ ಮೀಟಿಂಗ್ ತಡವಾಗಿ ಹೋದರು ಮೇಮೊ ನೀಡಲಾಗುತ್ತಿದೆ ಪ್ರಶ್ನೀಸಿದರೆ ಆಶಾಗಳೆ ನಮ್ಮೋಂದಿಗೆ ನಿಲ್ಲಲು ಹಿಂಜರಿಯುತ್ತಾರೆ ಎಂದು ಅಳಲು ತೋಡಿಕೊಂಡರು. 

ಜಿಲ್ಲಾ ಅಧ್ಯಕ್ಷ ಹೆಚ್.ಟಿ.ಮಲ್ಲಿಕಾರ್ಜುನ  ಸಮಸ್ಯೆಗಳ ಕುರಿತು  ಅಧಿಕಾರಿಗಳ ಗಮನಕ್ಕೆ ತರಲಾಗುವುದು ಶಾಲೆಗಳು ಒಂದಾಗಿ ಹೋರಾಡಿದರೆ ಮಾತ್ರ  ಜಯ ಸಿಗುತ್ತದೆ ಎಂದರು. 

ಸಮ್ಮೇಳನದಲ್ಲಿ  ನೂತನ ತಾಲ್ಲೂಕು ಸಮಿತಿಯ ರಚನೆಯಾಯಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ಜ್ಯೋತಿ ಶಾಬಾದಿ ಉಪಾದ್ಯಕ್ಷರಾಗಿ ಮಹಾನಂದ, ನಾಗಮ್ಮ ,ಜಗದೇವಿ, ರೇಣುಕಾ‌ ಹೊಸಮನಿ, ಯಮನವ್ವ. ಕಾರ್ಯದರ್ಶಿಯಾಗಿ ಮೈರುನ್ನಿಸಾ ಜಂಟಿ ಕಾರ್ಯದರ್ಶಿಗಳಾಗಿ ರೂಪಾ ಅಲಮೇಲ ಅಂಬುಬಾಯಿ, ಅನಸುಬಾಯಿ ರೇಣುಕಾ ಕನ್ನೋಳ್ಳಿ ಹಾಗು ಸಮಿತಿಯ ಸದಸ್ಯರುಗಳಾಗಿ ತುಳಸಿ, ಕವಿತಾ, ಲಕ್ಮೀ, ವಿಜಯಲಕ್ಷ್ಮೀ, ಮಹಾದೇವಿ, ಸರಸ್ವತಿ‌, ಕನ್ಯಾಕುಮಾರಿ ಫಾತಿಮಾ ಶೆಖ್ , ಶೋಭಾ,ಬಸಮ್ಮ, ಸುನಂದ, ಬೋರಮ್ಮ, ರೇಣುಕಾ, ಭಾರತಿ, ನಾಗರತ್ನ, ಮಲ್ಲಮ್ಮ, ಶಂಕ್ರಮ್ಮ  ಇವರಿಗೆ ಜವಾಬ್ದಾರಿ ನೀಡಲಾಯಿತು.

ಆಶಾ ಕಾರ್ಯಕರ್ತೆಯರ ಮುಖ್ಯ ಗೋತ್ತುವಳಿಗಳನ್ನು ನಾಗಮ್ಮ ಎಮ್ಮಿ  ಓದಿದರು. 

ಸಂಘಟನೆಯ ಜಿಲ್ಲಾ ಮುಖಂಡ ಭರತ್ ಕುಮಾರ್ ಆರೋಗ್ಯ ಸಹಾಯಕ  ಅಧಿಕಾರಿ ವಿರೇಂದ್ರ ಪವಾಡೆ, ಶೈಲಜಾ ಸ್ಥಾವರಮಠ ,  ಸೇರಿದಂತೆ ವಿವಿಧ ಆರೋಗ್ಯ ಕೇಂದ್ರದ  ಆಶಾ ಸುಗಮಕಾರರು ಹಾಗೂ ಕಾರ್ಯಕರ್ತೆಯರು ಉಪಸ್ಥಿತರಿದ್ದರು ನಿರ್ಮಲಾ ಬಿರನೂರ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news