ಸಿಂದಗಿ : ಪಟ್ಟಣದ ಪ್ರತಿಷ್ಠಿತ ಮೊಬೈಲ್ ಸೆಂಟರ್ ಗಳಲೊಂದಾದ ಅನಿಲ ಕೆಂಬಾವಿ ಮಾಲಿಕತ್ವದ ಓಂಕಾರ ಮೊಬೈಲ್ ಸೆಂಟರ್ ನಲ್ಲಿ ಖದೀಮರ ಕರಾಮತ್ತು.
ಮೇಲ್ಛಾವಣಿಯ ಪತ್ರಾಸ ಕೊರೆದು ಪಿ.ಓ.ಪಿ ಕತ್ತರಿಸಿ ಅಂದಾಜು ಇಪ್ಪತ್ತೈದು ಲಕ್ಷ ಮೌಲ್ಯದ ಒಟ್ಟು ಓಪೋ, ವೀವೊ, ಸ್ಯಾಮ್ಸಂಗ್, ಐಫೋನ್, ಸೇರಿ 42ಮೋಬೈಲ್ ಹಾಗೂ ಬ್ರಾಂಡೆಡ್ ವಾಚ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ, ಹಲವು ಮೊಬೈಲ್ ನಾಶಗೋಳಿಸಿದ್ದಾರೆ.
ಅಂಗಡಿ ಒಳಗಡೆ ಇಳಿದ ತಕ್ಷಣ ಖದೀಮ ಮೋದಲು ಸಿ.ಸಿ.ಕ್ಯಾಮರಾ ಬಂದ್ ಮಾಡಿದ್ದಾನೆ. ಹಲವು ದಿನಗಳಿಂದ ಹೊಂಚುಹಾಕಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಸಿಸಿ ಕ್ಯಾಮರಾ ದಲ್ಲಿ ಸೆರೆಸಿಕ್ಕ ದೃಶ್ಯ.
ಸಿಂದಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವು ದಿನಗಳ ಹಿಂದೆ ಹಗಲಿನಲ್ಲಿ ಯೋಗಾ ಯೋಗ ಮೆಡಿಕಲ್ ನಲ್ಲಿ ಹಗಲ್ಲೋತ್ತಲೆ ಹಣ ದೋಚಿದ ದೃಶ್ಯ ಸೆರೆಯಾಗಿತ್ತು. ಈ ರೀತಿಯ ಘಟನೆಗಳಿಂದ ಪೊಲೀಸ್ ಇಲಾಖೆಯ ಮೇಲಿನ ಭರವಸೆ ಜನಸಾಮಾನ್ಯರು ಕಳೆದುಕೊಂಡಂತ್ತಾಗಿದೆ.

ಅಂಗಡಿ ಮಾಲೀಕ ಅನೀಲ ಕೆಂಬಾವಿ ಪೊಲೀಸ್ ಠಾಣೆಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
