ಸಿಂದಗಿ : ನನ್ನ ಮಕ್ಕಳು ಉನ್ನತ್ತ ಹುದ್ದೆಯಲ್ಲಿದ್ದಾರೆ ಎಂದರೆ ಅದು ಆರ್.ಡಿ ಕುಲಕರ್ಣಿ ಹಾಗೂ ಅವರ ಶಿಕ್ಷಕ ವೃಂದದಿಂದ ಇಂದು ದಶಮಾನೋತ್ಸವದಲ್ಲಿ ಭಾಗಿಯಾಗುತ್ತಿರುವು ಸಂತಸ ತಂದಿದೆ ಎಂದು ಪ್ರೋ.ಅರವಿಂದ ಮನಗೂಳಿ ಹೇಳಿದರು.
ರಾಂಪೂರ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಸ್ಕೂಲ್ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಾಗಿಯಾದ ಅವರು ಮಾತನಾಡಿ ನಮ್ಮ ದೇಶದಲ್ಲಿ ಮೂರು ಅಂಗಗಳು ಕಾರ್ಯಾಂಗ, ಶಾಸಕಾಂಗ, ನ್ಯಾಯಂಗ, ಮುಖ್ಯ ಅಂಗಗಳಾದರೆ ಪತ್ರಿಕಾಂಗ ನಾಲ್ಕನೇ ಅಂಗವಾಗಿದೆ ಆದರೆ ನಾಲ್ಕು ಅಂಗಗಳು ನಿಂತಿರುವುದು ಶಿಕ್ಷಣದ ಮೇಲೆ. ಆದರೆ ಶಿಕ್ಷಣ ಕ್ಷೇತ್ರವನ್ನು ಅನುತ್ಪಾದಕ ಎಂದು ಹೇಳುವುದು ಆಘಾತಕಾರಿ ಶಿಕ್ಷಣಕ್ಕೆ ಮಹತ್ವ ನೀಡಿದಾಗ ಮಾತ್ರ ನಾಲ್ಕು ಅಂಗಗಳು ಸುಭದ್ರವಾಗಿರುತ್ತವೆ ಇಲ್ಲದೆ ಇದ್ದರೆ ಪ್ರಪಂಚದ ಯಾವುದೇ ದೇಶ ವಿರಬಹುದು ದಿವಾಳಿ ಆಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಜಟ್ ನಲ್ಲಿ ಹೇಚಿನ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿಡಬೇಕು. ಯಾವುದೇ ಸರಕಾರಗಳಿರಲ್ಲಿ ಪುಕಟೆ ಯೋಜನೆ ನಿಲ್ಲಿಸುವವರೆಗು ದೇಶ ಉದ್ಧಾರವಾಗುವುದಿಲ್ಲ ಪುಕಟೆ ಯೋಜನೆ ಬದಲು ಉದ್ಯೊಗ ನೀಡುವ ನಿಟ್ಟಿನಲ್ಲಿ ಸರಕಾರಗಳು ಕೆಲಸ ಮಾಡಬೇಕು. ಪುಕಟೆ ಯೋಜನೆಯ ಘೋಷಣೆ ಮಾಡಬಾರದು ಎಂದು ರಾಜಕೀಯ ಪಕ್ಷಗಳ ವಿರುದ್ದ ಹರಿಹಾಯ್ದರು. ಮಕ್ಕಳ ಬೆಳವಣಿಗೆಯಲ್ಲಿ ಗುರುವಿನ ಪಾತ್ರಕ್ಕಿಂತ ಪಾಲಕರ ಪಾತ್ರ ಮಹತ್ವದಾಗಿದೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸುವಂತೆ ಪಾಲಕರಿಗೆ ಸಲಹೆ ನೀಡಿದರು.
ನಂತರ ಮಾತನಾಡಿದ ಎಸ್.ಎಂ ಪಾಟೀಲ ಗಣಿಹಾರ ಇಂದಿನ ಮಕ್ಕಳನ್ನು ನೋಟು ತಯಾರಿಸುವ ಯಂತ್ರಗಳಾಗಿ ಬೆಳೆಯುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ಮೊದಲು ಹಾಗೆ ಇರಲಿಲ್ಲ ಶಿಕ್ಷಣ ಪಡೆದವರು ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುವ ಮನೋ ಬಾವನೆ ಇರುತ್ತಿತು ಇಂದು ನನ್ನ ಜೀವನ ನನ್ನ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂಬಂತೆ ಕಾಣುತ್ತದೆ. ಅಂದು ಶಿಕ್ಷಣ ಹುಡಿಕಿಕೊಂಡು ಹೋಗಬೇಕಾಗಿತ್ತು ಇಂದು ಶಿಕ್ಷಣ ಮನೆ ಬಾಗಿಲಿಗೆ ಬಂದಿದೆ ಅದರ ಸದುಪಯೋಗ ಪಡೆದುಕೋಳ್ಳುವಲ್ಲಿ ವಿಪಲರಾಗುತ್ತಿರುವುದು ಆಘಾತಕಾರಿ. ಇಗಿನ ಮಕ್ಕಳು ಟಿ.ವಿ ಮತ್ತು ಮೋಬೈಲ್ ಗಳಿಗೆ ಅಂಟಿಕೊಂಡಿದ್ದಾರೆ ಅದರಿಂದ ಹೊರ ಬರಬೇಕು ಎಂದರು. ವಾರ್ಷಿಕ ವರದಿಯನ್ನು ಸಾವಿತ್ರಿ ಅಸ್ಕಿ ಮುಖ್ಯೋಪಾದ್ಯಯರು ಪ್ರೇರಣಾ ಸ್ಕೂಲ್ ಇವರ ವಾಚಿಸಿದರು. ಲಲಿತಾ ಭುಸನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರೆ ದಿವ್ಯ ಸಾನಿದ್ಯ ವಹಿಸಿದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹಾಗೂ ಶ್ರೀ ದತ್ತಪ್ಪಯ್ಯ ಮುತ್ಯಾ ಇವರು ಆಶೀರ್ವಚನ ನೀಡಿದರು.
ಹಬ್ಬದಂತೆ ಗಣ್ಯರಿಗೆ ವೇದಿಕೆಗೆ ಸ್ವಾಗತ
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪ್ರೇರಣಾ ಪಬ್ಲಿಕ್ ಸ್ಕೂಲ್ ಮಕ್ಕಳು ದೇಶದ ಸಂಸ್ಕೃತಿ ಬಿಂಬಿಸುವಂತೆ ಡೋಳ್ಳು ಕುಣಿತ ದೇಶದ ಭದ್ರತೆಗೆ ಸ್ತ್ರೀ ಶಕ್ತಿ ಬಿಂಬಿಸುವ ಪರೇಡ್ ಹಾಗೂ ಭಾರತದ ಹೇಣ್ಣಿನ ಉಡುಗೆ ಬಿಂಬಿಸುವ ಸೀರೆ ದರಿಸಿದ ಮಕ್ಕಳು ಆರತಿ ಮತ್ತು ಕುಂಭ ಹೊತ್ತು ವೇದಿಕೆಗೆ ಸ್ವಾಗತಿಸಿವುದು ಕಣ್ಣಮನ ಸೆಳೆಯಿತು.
ಸಾಂಕ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳ ಅಲಂಕಾರವು ಜೋರಾಗಿ ಕಾಣುತ್ತುತು ಪಾಲಕರು ತಮ್ಮ ಮಕ್ಕಳ ಕಾರ್ಯಕ್ರಮ ನೋಡಲು ಕುಟುಂಬದೊಂದಿಗೆ ಆಗಮಿಸಿದ್ದರು. ಶಾಲಾ ಶಿಕ್ಷಕಿಯರಿಂದ ನಾಡಗೀತೆ ಮೊಳಗಿಸಿದರು, ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕುಮಾರಿ ಸ್ತುತಿ ಪೋದಾರ ಭಗವದ್ಗಿತೆ ಪಠಣೆಯ ಮೂಲಕ ಪ್ರಾರಂಬಿಸಿದರು ಪ್ರೇರಣಾ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಆರ್.ಡಿ ಕುಲಕರ್ಣಿ ಸ್ವಾಗತಿಸಿದರೆ ಸಂತೋಷ ಬಜಂತ್ರಿ ವಂದಿಸಿದರು.
