Sunday, 25 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ನನ್ನ ವಿಜಯ ಸಂಕಲ್ಪಕ್ಕೆ ಸಿಕ್ಕ ದೇವಿ ಆಶೀರ್ವಾದ ; ಭೂಸನೂರ

ಸಿಂದಗಿ: ಉಪಚುನಾವಣೆ ವೇಳೆ ನನ್ನ ವಿಜಯ ಸಂಕಲ್ಪಕ್ಕೆ ಶ್ರೀದೇವಿ ಆಶೀರ್ವಾದ ಸಿಕ್ಕಿತು ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಪಟ್ಟಣದ ಜೈಹನುಮಾನ ಚೌಕ್‌ನಲ್ಲಿ ಶನಿವಾರ ನೂತನ ದೇವಸ್ಥಾನದ ಭೂಮಿಪೂಜಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು. ಇಲ್ಲಿನ ಹಿರಿಯರ ಒತ್ತಾಯಕ್ಕೆ ಮಣಿದು ದೇವಸ್ಥಾನದ ಬೇಡಿಕೆಗೆ…

ಸಿಂದಗಿ: ಉಪಚುನಾವಣೆ ವೇಳೆ ನನ್ನ ವಿಜಯ ಸಂಕಲ್ಪಕ್ಕೆ ಶ್ರೀದೇವಿ ಆಶೀರ್ವಾದ ಸಿಕ್ಕಿತು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಜೈಹನುಮಾನ ಚೌಕ್‌ನಲ್ಲಿ ಶನಿವಾರ ನೂತನ ದೇವಸ್ಥಾನದ ಭೂಮಿಪೂಜಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಇಲ್ಲಿನ ಹಿರಿಯರ ಒತ್ತಾಯಕ್ಕೆ ಮಣಿದು ದೇವಸ್ಥಾನದ ಬೇಡಿಕೆಗೆ ಸ್ಪಂದಿಸಿ, ಚುನಾವಣೆಯಲ್ಲಿ ಗೆಲುವು ಸಾದಿಸಿದ ತಕ್ಷಣವೇ ಈ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ರೂ.10 ಲಕ್ಷ ಅನುದಾನವನ್ನು ಒದಗಿಸುವ ಮೊದಲ ಕೆಲಸ ಮಾಡಿದೆ. ಈ ಅನುದಾನವನ್ನು ಸದ್ಬಳಕೆ ಮೂಲಕ ದೇವಸ್ಥಾನದ ನಿರ್ಮಾಣ ಆರಂಭಿಸಬೇಕು ಎಂದರು.  ಈ ಭಾಗದಲ್ಲಿನ ತಳವಾರ ಸಮುದಾಯದ ಎಸ್ಟಿ ಮಾನ್ಯತೆ, ದಿ.ವಿಠ್ಠಲ ಹೆರೂರ ಅವರ ಹೋರಾಟದ ಪಲದಿಂದ ರಾಜ್ಯ ಸರ್ಕಾರ ಎಸ್ಟಿ ಪ್ರಮಾಣಪತ್ರ ನೀಡಲು ಆದೇಶಿಸಿದೆ. ಭವಿಷ್ಯದಲ್ಲಿ ಈ ಮೀಸಲಾತಿ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ದೇವಸ್ಥಾನದ ಮುಂದಿನ ಅಭಿವೃದ್ಧಿಯ ಯಾವುದೇ ಕೆಲಸವಿದ್ದರೂ ಅದನ್ನು ಪೂರೈಸಿಕೊಡುವುದಾಗಿ ಭರವಸೆ ನೀಡಿದರು.
ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಈ ವೇಳೆ ನೂತನ ಕಟ್ಟಡದ ಸ್ಥಳ ಶುದ್ಧೀಕರಣದ ಹೋಮ, ಹವನದ ಕಾರ್ಯಕ್ರಮ ನಡೆಯಿತು.
ಹಿರಿಯ ಶಿವರಾಯ ಕುರಿ ಮಾಜಿ ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಈರಣ್ಣ ರಾವೂರ, ಗುರು ತಳವಾರ, ಪುರಸಭೆ ಸದಸ್ಯರಾದ ಬಸವರಾಜ ಯರನಾಳ, ಹಣಮಂತ ಸುಣಗಾರ, ಶ್ರೀಶೈಲ ಬೀರಗೊಂಡ ಸೇರಿದಂತೆ ಅನೀಲಗೌಡ ಬಿರಾದಾರ ಮತ್ತಿತರರಿದ್ದರು.

vegadhut@gmail.com.

Leave a comment