Home News ಹಿಂದಿನ ಸರ್ಕಾರ ದೇಶ ದ್ರೋಹಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಿತ್ತು; ವಾಯ್.ಸಿ.ಮಯೂರ

ಹಿಂದಿನ ಸರ್ಕಾರ ದೇಶ ದ್ರೋಹಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಿತ್ತು; ವಾಯ್.ಸಿ.ಮಯೂರ

by vegadhut@gmail.com.
0 comments

ಸಿಂದಗಿ: ರಾಜ್ಯದ ನೂತನ ಮುಖ್ಯ ಮಂತ್ರಿಗಳು ಪ್ರಜಾ ಪ್ರಭುತ್ವವಾದಿ ಅಪ್ಪಟ ಅಂಬೇಡ್ಕರವಾದಿ ಸಿದ್ದರಾಮಯ್ಯನವರ ನೇತೃತ್ವದ ಈ ಸರಕಾರ ಪಠ್ಯಕ್ರಮ ಪರಿಷ್ಕರಣೆ ಮಾಡಿ ಆದೇಶ ಮಾಡಿರುವ ಕ್ರಮ ತುಂಬಾ ಸ್ವಾಗತಾರ್ಹ ಸಂಗತಿಯಾಗಿದೆ ಎಂದು ವಾಯ್.ಸಿ.ಮಯೂರ ಅಭಿಪ್ರಾಯಪಟ್ಟರು.

ಹಿಂದಿನ ಸರಕಾರದ ಪಠ್ಯಕ್ರಮದಲ್ಲಿ, ಬಾಡಿಗೆ ಭಾಷಣಕಾರರನ್ನು, ಚಿಂತಕರೆಂದು ಬಿಂಬಿಸಿ, ಅವರ ಬರಹಗಳನ್ನು ಪಠ್ಯಕ್ರಮದಲ್ಲಿ ಸೇರಿಸಿತ್ತು, ಅಲ್ಲದೆ ಕೋಮುವಾದ ಪ್ರಚೋದನೆಯನ್ನು, ದೇಶ ದ್ರೋಹಿಗಳನ್ನು ಪಠ್ಯದಲ್ಲಿ ಸೇರಿಸಿತ್ತು. ಅನೇಕ ಪ್ರತಿರೋಧದ ನಡುವೆಯಲ್ಲಿ ಹಿಂದಿನ ಸರಕಾರ ಸರ್ವಾಧಿಕಾರಿ ದೋರಣೆ ಪ್ರದರ್ಶಿಸಿತ್ತು.

ಆದರೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯವನರ ನೇತೃತ್ವದ ಕಾಂಗ್ರೇಸ್ ಸರಕಾರ ಈ ಎಲ್ಲ ಸಲಹೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವುಗಳನ್ನು ಪಠ್ಯದಿಂದ ಕೈಬಿಡುವುದರ ಜೊತೆಗೆ ಈ ದೇಶದ ಮೊದಲ ಶಿಕ್ಷಕಿ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರವರ ಬಗ್ಗೆ ಅಲ್ಲದೆ ದೇಶದ ಮೊದಲ ಪ್ರಧಾನಿ ನೆಹರುರವರ ಬಗ್ಗೆ ಪಠ್ಯಕ್ರಮದಲ್ಲಿ ಸೇರಿಸಿರುವ ಸಂಗತಿ ಮತ್ತು ಎಲ್ಲಾ ಶಾಲಾ, ಕಾಲೇಜುಗಳಲ್ಲಿ ರಾಷ್ಟ್ರಗೀತೆ, ನಾಡಗೀತೆ ಜೊತೆಗೆ ಸಂವಿಧಾನ ಪ್ರಸ್ತಾವನೆಯನ್ನು ಓದಿಸುವ ಕ್ರಮ ತುಂಬಾ ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿಯ ವಿಜಯಪುರ ಜಿಲ್ಲಾ ಸಂಚಾಲಕರಾದ ಶ್ರೀ ವಾಯ್.ಸಿ.ಮಯೂರ ರವರು  ಪ್ರಕಟಣೆ ಮೂಲಕ ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news