Home News ಇಂದು ಪತ್ರಕರ್ತರ ಸಮ್ಮೇಳನ ಲಾಂಛನ ಸಿದ್ದೇಶ್ವರ ಶ್ರೀ, ಸಿಎಂ ಬೊಮ್ಮಾಯಿ ಅವರಿಂದ  ಅನಾವರಣ

ಇಂದು ಪತ್ರಕರ್ತರ ಸಮ್ಮೇಳನ ಲಾಂಛನ ಸಿದ್ದೇಶ್ವರ ಶ್ರೀ, ಸಿಎಂ ಬೊಮ್ಮಾಯಿ ಅವರಿಂದ  ಅನಾವರಣ

by vegadhut@gmail.com.
0 comments


ಜಿಲ್ಲೆಗೆ ನಿಗದಿಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಸೆ. 30 ರಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಲಿದ್ದಾರೆ.
ನಗರದ ಎಸ್-ಹೈಪರ್ ಮಾರ್ಟ್ ಬಳಿ ತಲೆಎತ್ತಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆವರಣದಲ್ಲಿ ತಲೆಎತ್ತಿರುವ ಬೃಹತ್ ವೇದಿಕೆಯಲ್ಲಿ ಲಾಂಛನ ಬಿಡುಗಡೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ಮತ್ತಿತರೆ ಸಚಿವರು, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


ಪ್ರಥಮ ಸಮ್ಮೇಳನ : ವಿಜಯಪುರ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಪತ್ರಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.
ಆಲಮಟ್ಟಿ ಜಲಾಶಯ ಹೊಂದಿರುವ, ದ್ರಾಕ್ಷಿ ಬೀಡು, ಜಗತ್ಪ್ರಸಿದ್ಧ ಗೋಳಗುಮ್ಮಟ ಖ್ಯಾತಿಯ ವಿಜಯಪುರ ನೆಲದ ಸೊಗಡನ್ನು ಒಳಗೊಂಡಂತೆ ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನವನ್ನು ಚಿತ್ರಕಲಾವಿದ ಮಂಜುನಾಥ ಮಾನೆ ಅವರು ರೂಪಿಸಿದ್ದು ವಿಶೇಷ.


ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಸಾರಥ್ಯ ವಹಿಸಿಕೊಂಡ ಮೇಲೆ ಪ್ರತಿ ಸಮ್ಮೇಳನದಲ್ಲಿ ಆತಿಥ್ಯ ವಹಿಸಿಕೊಂಡ ಜಿಲ್ಲೆಯ ಸೊಗಡಿನ ಲಾಂಛನವನ್ನು ರೂಪಿಸುವ ಪರಿಪಾಠ ಪ್ರಾರಂಭವಾಗಿದೆ. ನವೆಂಬರ್ ಅಂತ್ಯದಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು ಸಮ್ಮೇಳನಕ್ಕೆ ಬಿರುಸಿನ ಸಿದ್ಧತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news