
ಹಿಂದಿನ ಸರಕಾರದಲ್ಲಿ ಕಾಮಗಾರಿಗಳು ಕುಂಠಿತಗೊAಡಿರುವುದು ಇಗ ಶಾಸಕರಾದ ಅಶೋಕ ನೇತೃತ್ವದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಪಟ್ಟಣಕ್ಕೆ ಸಂಭಂಧಿಸಿದಂತೆ ಪೌರಾಡಳಿತದಿಂದ ವಿಶೇಷ ಅನುದಾನ ನೀಡುವೆ ಎಂದು ಪೌರಾಡಳಿತ ಸಚಿವ ರಹೆಮಾನ್ ಖಾನ್ ಹೇಳಿದರು.
ಸಿಂದಗಿ : ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹತ್ತಿರ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಕಾಮಗಾರಿ ವಿಕ್ಷೀಸಿದ ಸಚಿವರು ಮಾದ್ಯಮದವರೊಡನೆ ಮಾತನಾಡಿದ ಅವರು ರಾಜ್ಯದಲ್ಲಿ ಐದು ರೂಪಾಯಿಗೆ ನಾಸ್ಟಾ ಹತ್ತು ರೂಪಾಯಿಗೆ ಊಟ ಸಿಗುವ ಯೋಜನೆ ನಮ್ಮ ಕಾಂಗ್ರೇಸ್ ಸರಕಾರದ ಸಿದ್ದರಾಮಯ್ಯ ಅವರು ನೀಡಿದ್ದು ಬಡವರ ಹಸಿವಿನ ದೂರಾದೃಷ್ಠಿ ಇಟ್ಟುಕೊಮಡು ಯೋಜನೆ ತರಲಾಗಿದೆ. ಬಡವರ ಹೋಟೆ ತುಂಬಿಸುತ್ತಿರುವುದು ಬಡ ವರ್ಗ ಸಂತಸ ವ್ಯಕ್ತ ಪಡಿಸುತ್ತಿದೆ. ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿಯೆ ಹಿಂದುಳಿದ ಅಭಿವೃದ್ಧಿ ಕಾಣದ ಕ್ಷೇತ್ರವಾಗಿ ಸಿಂದಗಿ ನಗರ ಬಿಂಬಿತವಾಗುತ್ತಿದೆ ಎಂಬ ವರದಿಗಾರರ ಪ್ರಶ್ನೇಗೆ ಉತ್ತರಿಸಿದ ಅವರು ಸಿಂದಗಿ ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿರುವುದು ಹಿಂದಿನ ಸರಕಾರದ ವೈಪಲ್ಯ ಇಗ ಕೆಲವು ಯೋಜನೆಗಳಲ್ಲಿ ಕಾಮಗಾರಿ ನಡೆಯುತ್ತಿವೆ ಪೌರಾಡಳಿತ ಇಲಾಖೆಯಿಂದ ವಿಶೇಷ ಅನುದಾನ ನೀಡುವೆ ಎಂದರು.
ಶಾಸಕ ಅಶೋಕ ಮನಗೂಳಿ ಸಚಿವರನ್ನು ಸ್ವಾಗತಿಸಿ ಮಾತನಾಡಿದ ಅವರು ಅಮೃತ2 ಯೋಜನೆ ಅಡಿಯಲ್ಲಿ ಟೆಂಡರ್ ಪೂರ್ಣಗೊಂಡಿದೆ ಆಲಮೇಲ 32 ಕೋಟಿ ಹಾಗೂ ಸಿಂದಗಿ 11 ಕೋಟಿ ರೂಗಳ ಭೂಮಿಪೂಜೆ ಮಾಡಲಾಗುವುದು. ಉಪ ಚುನಾವಣೆ ಸಂಧರ್ಭದಲ್ಲಿ ನನ್ನ ಕ್ಷೇತ್ತ ತಿರುಗಾಡಿದ ಅನುಭವ ಸಚಿವರಿಗಿದೆ ಅನುಭವದಷ್ಟು ಅನುದಾನ ಕ್ಷೇತ್ರಕ್ಕೆ ನೀಡಿದರೆ ಜನರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದAತಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ತಾಲೂಕಾ ದಂಡಾಧೀಕಾರಿ ಪ್ರದೀಪಕುಮಾರ ಹಿರೇಮಠ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷರಾದ ಸುರೇಶ ಪೂಜಾರಿ, ಸಾಧೀಕ ಸುಂಬಡ, ಪುರಸಭೆ ಸದಸ್ಯ ಸಂಧೀಪ ಚೌರ, ಹಣಮಂತ ಸುಣಗಾರ, ಭೀಮಾ ಕಲಾಲ, ಬಸವರಾಜ ಯರನಾಳ, ರಾಜಣ್ಣ ನಾರಾಯಣಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಿಕಾ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸೈಪನ ನಾಟೀಕಾರ, ಮೈಬೂಬ ಆಳಂದ, ಸೇರಿದಂತೆ ಹಲವರು ಇದ್ದರು.
ಸಂಪುಟದಿಂದ ಕೈ ಬಿಡಲಾಗುತ್ತೆ ಎಂಬುದು ಸುಳ್ಳು ಸುದ್ದಿ. ಸಚಿವ ಸಂಪುಟ ಕುರಿತು ಹೈಕಮಾಂಡ್ ನಿರ್ಧಾರ ಮಾಡಲಿದೆ – ಪೌರಾಡಳಿತ ಸಚಿವ ರಹೆಮಾನ್ ಖಾನ್


