Home News ಸೋಮೇಶ ಗೆ ಪುಷ್ಪಾರ್ಚನೆಯ ಬಿಳ್ಕೋಡುಗೆ | ಅಧಿಕಾರ ವಹಿಸಿಕೊಂಡ ಭೀಮಪ್ಪ ರಬಕವಿ

ಸೋಮೇಶ ಗೆ ಪುಷ್ಪಾರ್ಚನೆಯ ಬಿಳ್ಕೋಡುಗೆ | ಅಧಿಕಾರ ವಹಿಸಿಕೊಂಡ ಭೀಮಪ್ಪ ರಬಕವಿ

by vegadhut@gmail.com.
0 comments

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಧೀಕಾರದಲ್ಲಿದ್ದ ಪಿ.ಎಸ್.ಆಯ್. ಸೋಮೇಶ ಗೇಜ್ಜಿ ಬಿಳ್ಕೋಡುಗೆ ಹಾಗೂ ಭಿಮಪ್ಪ ರಬಕವಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಿ.ಪಿ.ಆಯ್. ಡಿ. ಹುಲುಗಪ್ಪ ಇವರ ನೇತೃತ್ವದಲ್ಲಿ ಜರುಗಿತು.  

ವೇಗದೂತ ಜನದನಿ 

ಸಿಂದಗಿ : ಸಮಾರಂಭದ ಕುರಿತು ಮಾತನಾಡಿದ  ಸಿ‌.ಪಿ.ಆಯ್. ಡಿ.ಹುಲುಗಪ್ಪ  ಎಷ್ಟು ದಿನ ಕೆಲಸ ಮಾಡಿದ್ದಿವಿ ಎಂಬುದು ಮುಖ್ಯವಲ್ಲ, ನಾವು ಬಿಟ್ಟು ಹೋಗುವಾಗ ಇಲ್ಲಿ ಏನಿರುತ್ತೆ, ನಮ್ಮೊಂದಿಗೆ ಬರುವ ಪ್ರೀತಿ, ವಿಶ್ವಾಸ ಎಷ್ಟು ಎಂಬುದು ಮುಖ್ಯವಾಗಿದೆ. ಸಾರ್ವಜನಿಕರ ಕಷ್ಟಗಳನ್ನು ಆಲಿಸಿದಾಗ ನಾವು ಜನಸ್ನೇಹಿ ಪೊಲೀಸರಾಗುವೆವು. ರಾಜಕೀಯ, ಜಾತಿಗಳಿಗೆ ಹೊಂದುಕೋಳ್ಳದೆ ಕಾನೂನಿನ ತಳಹದಿಯಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಇಬ್ಬರು ಅಧಿಕಾರಿಗಳಿಗೆ ಒಳ್ಳೆಯದಾಗಲಿ ಎಂದು ಶುಭಕೋರಿದರು

      ಹಿರಿಯ ಅಧಿಕಾರಿಯಾದ ಎ.ಎಸ್.ಆಯ್ ಎಂ.ಜಿ.ಬಿರಾದಾರ ಮಾತನಾಡಿ  ಠಾಣಾ ಸಿಬ್ಬಂದಿಗಳಿಗೆ ಸ್ಪಂದನೆ ಯಾಗಿ ನಿಂತು ನಮ್ಮಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸೊಮೇಶ ಗೇಜ್ಜಿ ಅವರು ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿ ವರ್ಗಾವಣೆ ನಿರಂತರ ಪ್ರಕ್ರೀಯೆ ಅವರು ಸಿಂದಗಿಯಿಂದ ವರ್ಗಾವಣೆ ಆಗಿರೋದು ದುಃಖದ ವಿಷಯ, ಆದರೆ ನಮ್ಮ ಉಪ ವಿಭಾಗದಲ್ಲಿ ಇರೋದು ನಮ್ಮಗೆ ಸಂತಸ ತಂದಿದೆ ಎಂದರು.

banner

ವರ್ಗಾವಣೆಯಾದ ಸೋಮೇಶ ಗೇಜ್ಜಿ  ಮಾತನಾಡಿ ವರ್ಗಾವಣೆ ಸಂದಂರ್ಭದಲ್ಲಿ ನಮ್ಮ ನಮ್ಮಲ್ಲಿ ತಿಕ್ಕಾಟಗಳಿರುತ್ತವೆ. ಆದರೆ ವರ್ಗಾವಣೆ ಪ್ರಕ್ರೀಯೆ ಮುಗಿಯುತ್ತಿದ್ದಂತೆ ನಾವೆಲ್ಲರು ಒಂದೆ  ಪೊಲೀಸ್ ಸಿಬ್ಬಂದಿ ಎಂದು ಅರಿತು ನಾವು ಸೇವೆ ಮಾಡಬೇಕು. ಸಿ.ಪಿ.ಆಯ್. ಅವರು ನನ್ನೊಂದಿಗೆ ಕೇವಲ ಎರಡು ತಿಂಗಳು ಕಾರ್ಯನಿರ್ವಹಿಸಿದರು ತುಂಬಾ ಅವಿನಾಭಾವ ಸಂಭಂಧ ಬೆಳದಿದೆ. ಅವರು ನಮಗೆ ಬೆಂಬಲವಾಗಿ ನಿಂತರು‌. ಅವರೊಂದಿಗೆ ಮುಂದಿನ ದಿನಮಾನಗಳಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆಯಲಿ. ಸಿಬ್ಬಂದಿಗಳು ನನಗೆ ನೀಡಿದ ಬೆಂಬಲಕ್ಕಿಂತಲು ಹೇಚ್ಚಿನ ಬೆಂಬಲ ಸ್ನೇಹಿತ ಭೀಮಪ್ಪ ರಬಕವಿ ಅವರಿಗೆ ನೀಡಿ ಎಂದು ಹೇಳಿದರು.

ನೂತನ ಪಿ.ಎಸ್.ಆಯ್ ಭೀಮಪ್ಪ ರಬಕವಿ ಮಾತನಾಡಿ  ಹತ್ತು ತಿಂಗಳಲ್ಲಿ ಸಹೋದರ ಸೋಮೇಶ ಗೇಜ್ಜಿ ಮೂಡಿಸಿರುವ ಹೆಜ್ಜೆ ಅತ್ಯುತ್ತಮವಾದದ್ದು, ಅವರಿಗೆ ನೀಡಿದ ಬೆಂಬಲದಂತೆ ನನಗೂ ಬೆಂಬಲಿಸಿ ಎಂದು ಮನವಿ ಮಾಡಿದರು. ಜಿ.ಆಯ್.ಇಜೇರಿ, ರಾಜಶೇಖರ ಸಾಸಟ್ಟಿ,   ರಜತ್ ತಾಂಬೆ, ಮಹಾವೀರ ಸುಲ್ಪಿ, ಗುಂಡು ಕುಲಕರ್ಣಿ ಮಾತನಾಡಿದರು ಎಸ್.ಎನ್.ದೊಡಮನಿ ಕಾರ್ಯಕ್ರಮ ನಡೆಸಿಕೊಟ್ಟರು.  ತದನಂತರ ಅಧಿಕಾರ ಹಸ್ತಾಂತರಿಸಿದ ಸೊಮೇಶ ಗೇಜ್ಜಿ ಅವರಿಗೆ ಪುಷ್ಪಾರ್ಚನೆ ಮುಖಾಂತರ ಠಾಣಾ ಸಿಬ್ಬಂದಿಗಳು ಬಿಳ್ಕೋಟರು.

ರವಿ ಉಕ್ಕುಂದ ಅವರು ನಮ್ಮನಗಲಿದ್ದು ದುಃಖದ ಸಂಗತಿ ಅವರ ಕುಟುಂಬಕ್ಕೆ ದೇವರು ಕಾಪಾಡಲಿ ಎಂದು  ಪ್ರಾರ್ಥಿಸುವೆ ಸೋಮೇಶ ಗೇಜ್ಜಿ ಪಿ.ಎಸ್.ಆಯ್

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news