ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ಬಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲ ಪ್ರತಿಕ್ರಿಯೆ.
ನಗುತ್ತಲೆ ಕಾರಿನಿಂದ ಇಳಿದು ಮಾಧ್ಯಮದವರೊಂದಿಗೆ ಎರಡೆ ಎರಡು ಮಾತುಗಳನ್ನಾಡಿದ ಡಿ.ಕೆ.ಶಿವಕುಮಾರ್ ಅವರು ಮಾದ್ಯಮಗಳು ಬಿತ್ತರಿಸುತ್ತಿದ ಸುದ್ದಿ ಮುಂದಿನ ಸಿ.ಎಂ ಸಿದ್ದರಾಮಯ್ಯ ಎಂಬುವುದರ ವಿರುದ್ಧ ಅಸಮಾಧಾನ ಹೊರಹಾಕಿದಂತೆ ಗೋಚರಿಸಿತ್ತು.
ಮಾದ್ಯಮದವರು ತಮ್ಮ ಗೌರವ, ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ, ನೀವು ಸತ್ಯ ಬರೆಯುತ್ತಿಲ್ಲ ಫ್ರಾಡ್ ಗಳು ಹೇಳಿದ ಸುಳ್ಳನ್ನು ಬರೆಯುತ್ತಿದ್ದಾರೆ ನಾನೇನು ಮಾತಾಡಲ್ಲ ಎಲ್ಲಾ ಬೋಗಸ್ ಸುದ್ದಿಗಳು ಬಿತ್ತರಿಸಲಾಗುತ್ತಿದೆ ಎಂದು ಗುಡುಗಿದರು.
