ಸಿಂದಗಿ: ಪುರಸಭೆ ಅಧ್ಯಕ್ಷರಾದ ಡಾ.ಶಾಂತವೀರ ಮನಗೂಳಿ ಪತ್ರಿಕಾಗೋಷ್ಠಿ ನಡೆಸಿದರು.

ಸಿಂದಗಿ ನಗರಕ್ಕೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ 3 ಕೋಟಿ ರೂ ಬಂದಿದೆ. ವಾ.ನಂ ಗಳಾದ 1,2,7,17,18,19,20,21,22,23,12,14 ಸುಮಾರು ಹತ್ತು ಲಕ್ಷ ರೂಗಳ ಹಂಚಿಕೆ ಮಾಡಲಾಗಿದೆ. ಹಂದಿಗನೂರ ಸಿದ್ರಾಮಪ್ಪನವರ ರಂಗಮಂದಿರಕ್ಕೆ 55 ಲಕ್ಷ, ಕಲ್ಯಾಣ ನಗರ ಶಾಲೆಯ ಆವರಣದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕಾಗಿ 50 ಲಕ್ಷರೂ, ಹಾಗೂ ಬಿರಾದಾರ ಲೇಔಟ್ ನಲ್ಲಿ ಈಜುಕೋಳಕ್ಕಾಗಿ 75 ಲಕ್ಷ ರೂ ವದಗಿಸಲಾಗಿದೆ. ಈಜುಕೋಳ ನಿರ್ಮಾಣಕ್ಕಾಗಿ 75 ಲಕ್ಷ ಬಿಡುಗಡೆ ಹಣ ಕಡಿಮೆ ಆಗುತ್ತದೆ ಎಂದು ಅಂದಾಜಿಸಲಾಗಿದೆ ಶಾಸಕರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೋಳ್ಳಲಾಗುವುದು ಎಂದು ಹೇಳಿದರು. ಸುಮಾರು 850 ಲಕ್ಷರೂಗಳ ಪುರಸಭೆಗೆ ಮಂಜೂರಾಗಿದ್ದು ಹಲವಾರು ಕಾರ್ಯಕ್ರಮಗಳು ಪುರಸಭೆ ಸದಸ್ಯರೊಂದಿಗೆ ಚರ್ಚಿಸಿ ತರಲಾಗಿದೆ ಆದರೆ ರಾಜಕೀಯ ಪ್ರೇರಿತಕ್ಕಾಗಿ ಆರೋಪ ಮಾಡುತ್ತಿರುವುದರಲ್ಲಿ ಯಾವುದೇ ನಿಜ ಸಂಗತಿ ಇಲ್ಲ ಎಂದು ಆರೋಪಿಸಿದವರಿಗೆ ಉತ್ತರಿಸಿದರು.
2018-19 ರಲ್ಲಿ ಪುರಸಭೆಗೆ ಬಿಡುಗಡೆ ಆದ 375 ಲಕ್ಷ ರೂ ಗಳು ಸರಕಾರ ವಾಪಸ್ ತೆಗೆದುಕೊಂಡಿದೆ. ಶಾಸಕರಾದ ರಮೇಶ ಭೂಸನೂರ ಇವರೊಂದಿಗೆ ಚರ್ಚಿಸಿ ಸರಕಾರದಿಂದ ಪುನಃ ಹಣ ವಾಪಸ್ಸ ತರುವ ಪ್ರಯತ್ನ ಮಾಡುವೆ.

ಇಂದು ಪುರಸಭೆ ಸಾಮಾನ್ಯ ಸಭೆ
ಪುರಸಭೆ ಸಾಮಾನ್ಯ ಸಭೆಗಳು ಕೆವಲ ಅಧ್ಯಕ್ಷರ ಆಸ್ಪತ್ರೆಯಲ್ಲಿ ನಡೆಯುತ್ತವೆ, ಕಾಲಕ್ಕೆ ತಕ್ಕಂತೆ ಸಾಮಾನ್ಯ ಸಭೆ ಮಾಡಿಲ್ಲ ಆದರಿಂದ ನಗರದ ಅಭಿವೃದ್ಧಿಗೆ ಕುಂಠಿತಗೊಂಡಿದೆ ಎಂದು ಆರೋಪಿಸಿ ಅವಿಶ್ವಾಸ ಗೋತ್ತುವಳಿಗೆ ಮನವಿ ನೀಡಿದ್ದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷ ಶಾಂತವೀರ ಮನಗೂಳಿ ಕೋವೀಡ್ ಹಾಗೂ ಉಪ ಚಿನಾವಣೆಯ ನೀತಿ ಸಂಹಿತೆ ಇಂದ ಸಾಮಾನ್ಯ ಸಭೆಗಳು ಆಗಿಲ್ಲ ನಿಜಾ ಆದರೆ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ದಿನಾಂಕ 30 ರಂದು ಸಾಮಾನ್ಯ ಸಭೆ ಕರೆಯಲಾಗಿದ್ದು ಎಲ್ಲ ಸದಸ್ಯರು ಪಾಲ್ಗೋಳಬೇಕು ನಗರದ ಉನ್ನತ್ತಿಕರಣಕ್ಕೆ ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸಿ ಕೆಲಸ ಮಾಡೋಣಾ ಎಂದು ಎಲ್ಲ ಸದಸ್ಯರಿಗೆ ಆಹ್ವಾನಿಸಿದರು.
ಪೌರಕಾರ್ಮಿಕರ ಇ.ಎಪ್. ಮತ್ತು ಪಿ.ಎಪ್ ಹಣ ಭರಣಾ ಮಾಡಿಲ್ಲಾ ಕಾರ್ಯನಿರ್ವಹಿಸದೆ ಪ್ರತಿಭಟನೆ ಮಾಡಿದ್ದಾರೆ?
ಪೌರ ಕಾರ್ಮಿಕರ ಸಮಸ್ಯೆ ಮೊದಲು ಹೇಮ್ಮರವಾಗಿತ್ತು ನಾವು ಆಡಳಿತ ಮಾಡುವಾಗಿನಿಂದ ಕೆಲವು ಸುಧಾರಣೆಗಳು ಆಗಿವೆ. ಇ.ಎಪ್ ಮತ್ತು ಪಿ.ಎಪ್. ಹಣದ ಬಗ್ಗೆ ಮುಖ್ಯಾಧಿಕಾರಿಗಳು ವಿವರಣೆ ನೀಡಿ ಹಲವರ ಬ್ಯಾಂಕ್ ಖಾತೆಗಳ ಸಮಸ್ಯಗಳಾಗಿದ್ದವು ಸರಿಪಡಿಸಲಾಗಿದೆ ಎಂದು ಹೇಳಿದರು. ಅವರ ತಿಂಗಳ ವೇತನದೊಂದಿಗೆ ಅವರ ಇ.ಎಪ್ ಮತ್ತು ಪಿ.ಎಪ್. ಹಣ ಭರಣಾ ಮಾಡಲು ಅಧ್ಯಕ್ಷರು ಸೂಚಿಸಿದರು. ಮಾನ್ಯ ಜಿಲ್ಲಾಅಧಿಕಾರಿಗಳಿಗೆ ಸಿಬ್ಬಂದಿ ಕೊರತೆ ಕುರಿತು ಮನವಿ ಮಾಡಲಾಗಿತ್ತು ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರನ್ನು ನೇಮಿಸಲು ಅನುಮತಿ ನೀಡಿದ್ದಾರೆ ಈ ಮೊದಲು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದವರಿಗೆ ಪ್ರಥಮಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ ಪುರಸಭೆ ಸದಸ್ಯರಾದ ಬಾಗವ್ವ ಡೋಣುರ ಹಾಗೂ ಖೈರುನಬಿ ನಾಟೀಕಾರ ಅವರ ಪುತ್ರರಾದ ಆನಂದ ಡೋಣುರ ಹಾಗೂ ಸೈಪನ್ ನಾಟೀಕಾರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದು ಅವಿಶ್ವಾಸ ಸುಮ್ಮನೆ ನೆಪ ಮಾತ್ರಕ್ಕೆ ರಾಜಕೀಯದಲ್ಲಿ ತಿರುವು ಕಾಣುವ ಸಾದ್ಯತೆ ಕಾಣುತ್ತಿವೆ. ಮತ್ತು ಮೊದಲಿನಿಂದಲು ಅಧ್ಯಕ್ಷರ ಪರವಾಗಿ ನಿಂತ ಶ್ರೀಶೈಲ ಭೀರಗೊಂಡ, ಪ್ರತಿಭಾ ಕಲ್ಲೂರ, ಸದಸ್ಯರ ಪ್ರತಿನಿಧಿ ಬಸವರಾಜ ಸಜ್ಜನ ಇದ್ದರು.

