Home News ನವೆಂಬರ್ 6 ಜಾನಪದ ವಿದ್ವಾಂಸ ಡಾ.ವೀರಣ್ಣ ದಂಡಿಯವರಿಗೆ ದೇಸಿ ಸನ್ಮಾನ ಪ್ರಶಸ್ತಿ

ನವೆಂಬರ್ 6 ಜಾನಪದ ವಿದ್ವಾಂಸ ಡಾ.ವೀರಣ್ಣ ದಂಡಿಯವರಿಗೆ ದೇಸಿ ಸನ್ಮಾನ ಪ್ರಶಸ್ತಿ

by vegadhut@gmail.com.
0 comments

ಸಿಂದಗಿ: ನೆಲೆ ಪ್ರಕಾಶನ ಸಂಸ್ಥೆ ವತಿಯಿಂದ ನವೆಂಬರ್ 6 ರವಿವಾರದಂದು ಜಾನಪದ ವಿದ್ವಾಂಸ ಡಾ.ವೀರಣ್ಣ ದಂಡಿಯವರಿಗೆ ದೇಸಿ ಸನ್ಮಾನ ಪ್ರಶಸ್ತಿ ಮತ್ತು ನೆಲೆ ಸಿನಿ ಕ್ರಿಯೇಷನ್ ಅರ್ಪಿಸುವ ಊಧ್ವರೇತ ಕಿರುಚಿತ್ರ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಮಾಂಗಲ್ಯ ಭವನದಲ್ಲಿ ನಡೆಯುವ ಈ ಕಾರ್ಯಕ್ರಮದ ಸಾನಿಧ್ಯ ಮತ್ತು ಕಿರುಚಿತ್ರ ಬಿಡುಗಡೆಯನ್ನು ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಗಣ್ಯರಾದ ಅಶೋಕ ವಾರದ ವಹಿಸಲಿದ್ದಾರೆ, ಡಾ.ವೀರಣ್ಣ ದಂಡೆ ಬದುಕು ಬರಹ ಎಂಬ ಕೃತಿಯನ್ನು ಪ್ರಗತಿಪರ ರೈತರಾದ ಎಸ್.ಎಸ್.ಪಾಟೀಲ ಬಿಡುಗಡೆ ಮಾಡಲಿದ್ದಾರೆ. ಲೇಖಕರ ಮಾತನ್ನು ಶರಣ ಮಾರ್ಗ ಪತ್ರಿಕೆಯ ಸಂಪಾದಕರಾದ ಶಿವರಂಜನ್ ಸತ್ಯಂಪೇಟ ಮಾತನಾಡಲಿದ್ದಾರೆ. ಅಭಿನಂದನೆ ನುಡಿ ಮತ್ತು ಪ್ರಶಸ್ತಿ ಪ್ರಧಾನವನ್ನು ಡಾ.ಎಮ್.ಎಸ್.ಮಧಬಾವಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಚಿಂತಕ ಡಾ.ಆರ್.ಕೆ.ಕುಲಕರ್ಣಿ, ಎನ್.ಎಮ್.ಬಿರಾದಾರ, ಚಲನಚಿತ್ರ ನಿರ್ದೇಶಕ ಸುನೀಲಕುಮಾರ ಸುಧಾಕರ ಆಗಮಿಸಲಿದ್ದಾರೆ. ಎಂದು ನೆಲೆ ಪ್ರಕಾಶನದ ಮುಖ್ಯಸ್ಥರಾದ ಡಾ.ಚನ್ನಪ್ಪ ಕಟ್ಟಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news