Home Uncategorized ಸಿಂದಗಿ ಪುರಸಭೆ ಅಧ್ಯಕ್ಷಗಾದಿಗೆ ಅವಿಶ್ವಾಸಕ್ಕೆ ಮನವಿ, ರಾಜಕೀಯ ದಾಳ ಉರುಳಿಸಿದವರಾರು ?

ಸಿಂದಗಿ ಪುರಸಭೆ ಅಧ್ಯಕ್ಷಗಾದಿಗೆ ಅವಿಶ್ವಾಸಕ್ಕೆ ಮನವಿ, ರಾಜಕೀಯ ದಾಳ ಉರುಳಿಸಿದವರಾರು ?

by vegadhut@gmail.com.
0 comments

ಸಿಂದಗಿ: ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಭೆ ಕರೆಯಲು ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರಿಗೆ ಶುಕ್ರವಾರದಂದು ಪುರಸಭೆ ಸದಸ್ಯರು ಮನವಿ ಸಲ್ಲಿಸಿದರು.
ಅಧ್ಯಕ್ಷ ಡಾ.ಶಾಂತವೀರ ಮನಗೂಳಿವರು 21 ತಿಂಗಳ ಅಧಿಕಾರದ ಅವಧಿಯಲ್ಲಿ ಕೇವಲ ಎರಡು ಸಾಮಾನ್ಯ ಸಭೆ ನಡೆಸಿದ್ದು ನಗರದಲ್ಲಿ ಅಭಿವೃದ್ದಿ ಕುಂಠಿತವಾಗಿದೆ. ಕಾರಣ ಅಧ್ಯಕ್ಷ ಶಾಂತವೀರ ಮನಗೂಳಿಯವರ ಕಾರ್ಯ ವೈಖರಿ ನಮಗೆ ತೃಪ್ತಿಕರವೆನಿಸಿಲ್ಲ ನಗರದ ಅಭಿವೃದ್ದಿ ಮಾಡುತ್ತಾರೆಂಬ ವಿಶ್ವಾಸವನ್ನು ಅವರು ಕಳೆದುಕೊಂಡಿದ್ದಾರೆ. ಈ ಕುರಿತು ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಶೇಷ ಸಾಮನ್ಯ ಸಭೆ ಕರೆಯಲು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ನಗರದ ಅಭಿವೃದ್ದಿ ಕಡೆ ಗಮನ ಹರಿಸಿಲ್ಲ ಪುರಸಭೆಯಲ್ಲಿ ನಡೆಯಬೇಕಾದ ಸಭೆಗಳು ಅವರ ಆಸ್ಪತ್ರೆಯಲ್ಲಿ ನಡೆದಿವೆ ಕಾರಣ ನಾವೆಲ್ಲ ಅವರ ಕುಂಠಿತ ಆಡಳಿತ ಖಂಡಿಸಿ ಈಗಾಗಲೇ ೨ ಬಾರಿ ಅವಿಶ್ವಾಸ ಮನವಿ ಸಲ್ಲಿಸಿದ್ದೇವು ಕುತಂತ್ರದ ಮುಖೇನ ಎರಡು ಬಾರಿ ಗೆದ್ದಿದ್ದು ಈ ಬಾರಿ ಗೆಲುವು ನಮ್ಮದಾಗಲಿದೆ ಎಂದು ಹೇಳಿದರು.

banner

ರಾಜಣ್ಣ ನಾರಾಯಣಕರ, ಉಮಾದೇವಿ ಸುಲ್ಪಿ, ಬಾದಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಬಸವರಾಜ ಯರನಾಳ, ಕಲಾವತಿ ಕಡಕೋಳ, ಗೊಲ್ಲಾಳಪ್ಪ ಬಂಕಲಗಿ, ಶರಣಗೌಡ ಪಾಟೀಲ, ಬಾಗವ್ವ ಡೋಣೂರ, ಖೈರುನಬಿ ನಾಟೀಕಾರ, ಸಂದೀಪ ಚೌರ, ಮಹಾಂತೇಶ ಬಿರಾದಾರ, ಮಹಾದೇವಿ ನಾಯ್ಕೋಡಿ, ಹಾಸಿಂಪೀರ ಆಳಂದ, ತಹಸೀನ್ ಮುಲ್ಲಾ ಅವರುಗಳ ಸಹಿಯುಳ್ಳ ಅವಿಶ್ವಾಸ ಗೊತ್ತುವಳಿಗೆ ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ. ನಂತರ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೂ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಶರಣಗೌಡ ಪಾಟೀಲ, ಹಣಮಂತ ಸುಣಗಾರ, ಗೊಲ್ಲಾಳ ಬಂಕಲಗಿ ಅವರು ಅವಿಶ್ವಾಸ ಗೊತ್ತುವಳಿ ಕುರಿತು ವಿಶೇಷ ಸಾಮಾನ್ಯ ಸಭೆಯನ್ನು ನಡೆಸುವಂತೆ ಆಗ್ರಹಿಸಿ ಸದಸ್ಯರ ಸಹಿಯುಳ್ಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಇಗಾಗಲೇ ಎರಡು ಬಾರಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ವಿರುದ್ದ  ಅವಿಶ್ವಾಸ ಗೋತ್ತುವಳಿ ಮಾಡಿದ ಸದಸ್ಯರು ವಿಫಲಗೊಂಡು ಮಖಬಂಗ ಅನುಭವಿಸಿದ್ದರು. ಆದರೆ ಇಗ ಮತ್ತೆ ಮೂರನೇ ಬಾರಿಯ ಅವಿಶ್ವಾಸ ಗೋತ್ತುವಳಿಗೆ  ರೋಚಕ ತೀರುವು ಪಡೆದಿದ್ದು ಶಾಂತವೀರ ಮನಗೂಳಿ ಅವರೊಂದಿಗೆ ಇದ್ದ ಉಪಾಧ್ಯಕ್ಷ  ಹಾಸಿಂ  ಆಳಂದ ಅವಿಶ್ವಾಸ  ಗೋತ್ತುವಳಿಗೆ ಸಹಿ ಹಾಕಿದ್ದು ಚರ್ಚೆಗೆ  ಕಾರಣವಾಗಿದೆ. ಜೊತೆಗಿದ್ದು ರಾಜಕೀಯ ದಾಳ ಉರುಳಿಸಿದ್ದಾರೆ, ಮನಗೂಳಿ ಅವರೊಂದಿಗೆ ಇರುವಾಗ ಅವರಿಗೆ ಉಪಾಧ್ಯಕ್ಷ ನೀಡಿದ್ದಾರೆ ಇದುವರೆಗು  ಅವರ ವಾರ್ಡಿಗೆ ಹೇಚ್ಚಿನ ಕೆಲಸಗಳು ಆಗಿವೆ ಎಂದು  ಮನಗೂಳಿ ಬೆಂಬಲಿಗರು ಮಾತನಾಡುತ್ತಿರುವುದು ಕಂಡುಬರುತ್ತಿದೆ. ಈ ಹಿಂದೆಯು ಮಾಜಿ ಶಾಸಕ ಶರಣಪ್ಪ  ಸುಣಗಾರ ಅವರ ಆಪ್ತರಲ್ಲೊಬರಾಗಿದ್ದ ಹಾಸೀಂ ಆಳಂದ  ಮನಗೂಳಿ ಅವರಿಗೆ ಬೆಂಬಲಿಸಿ ರಾಜಕೀಯ ದಾಳ ಉರುಳಿಸಿ  ಯಶಸ್ವಿಯಾಗಿದ್ದರು, ಈ ಬಾರಿ ಮನಗೂಳಿ ಅವರ ವಿರುದ್ದವಾಗಿ ಅವಿಶ್ವಾಸ ಗೋತ್ತುವಳಿಗೆ ಸಹಿ ಹಾಕಿದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಕಾದುನೋಡಬೇಕು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news