ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದ ತಾಲೂಕಾ ಚಾಲನಾ ಸಮಿತಿ ಸಭೆಯನ್ನು ಆಲಮೇಲ ದಂಡಾಧಿಕಾರಿ ಸುರೇಶ ಚಾವಲಾರ ಹಾಗೂ ಆಯ್.ಜೆ.ಬಳಗಾನೂರ ಗ್ರೇಡ2 ತಹಶೀಲ್ದಾರರು ಸಿಂದಗಿ ಇವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರರ ಕಾರ್ಯಲಯದಲ್ಲಿ ಜರುಗಿತು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಆರೋಗ್ಯ ಅಧಿಕಾರಿ ಡಾ||.ಎ.ಎ.ಮಾಗಿ ಇವರು ಮಾತನಾಡಿ ಸಿಂದಗಿ ತಾಲೂಕಿನ ಮಲಘಾಣ, ಮೋರಟಗಿ, ಬಳಗಾನೂರ, ಚಾಂದಕವಟೆ, ಆಲಮೇಲ ಪ್ರಾ. ಆ. ಕೇಂದ್ರಗಳು ಹಾಗೂ ಸಿಂದಗಿ ನಗರದಲ್ಲಿ ದಿನಾಂಕ-18/01/2024 ರಿಂದ ಸಾಮೂಹಿಕ ಜೌಷಧಿ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಟ್ಟು 2,45,471 ಜನಸಂಖ್ಯೆಯಿದ್ದು. ಒಟ್ಟು ಮನೆಗಳ ಸಂಖ್ಯೆ 49,094 ಇರುತ್ತದೆ. ಒಟ್ಟು ಮಾತ್ರೆ ನುಂಗಿಸಲು ಅರ್ಹ ಜನಸಂಖ್ಯೆ 2,25,833 ಇರುತ್ತದೆ. ಇದಕ್ಕೆ ಒಟ್ಟು ಬೇಕಾಗುವ ಡಿ.ಈ.ಸಿ ಮಾತ್ರೆಗಳು 6,13,678 ಹಾಗೂ 2,45,471 ಅಲ್ಬೆಂಡಾಝೋಲ ಮಾತ್ರೆಗಳು ಬೇಕು. ಒಟ್ಟು ಮಾತ್ರೆ ನುಂಗಿಸುವವರು 246 ಜನ, ಮೇಲ್ವೀಚಾರಕರು 49 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ, ಆದ ಕಾರಣ ಈ ಕಾರ್ಯಕ್ರಮಕ್ಕೆ ತಾಲೂಕಿನ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಹಕರಿಸಿ ದಿನಾಂಕ:18/01/2024 ರಿಂದ 28/02/2024 ರವರೆಗೆ ನಡೆಯುವ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಾಮೂಹಿಕ ಡಿ.ಈ.ಸಿ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಆನೆಕಾಲು ರೋಗ ಮುಕ್ತ ಸಮಾಜವನ್ನಾಗಿಸೂಣ.
ಪುರಸಭೆಯವರು ರೋಗದ ಬಗ್ಗೆ ಮಾಹಿತಿ ಪ್ರಚಾರ ಮಾಡುವದು ಅಲ್ಲಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸುವದು, ಶಿಶು ಅಭಿವೃಧಿ ಅಧಿಕಾರಿಗಳು ಅಂಗನವಾಡಿಯಲ್ಲಿ 2 ವರ್ಷ ದಿಂದ 6 ವರ್ಷದೂಳಗಿನ ಮಕ್ಕಳಿಗೆ ಅಂಗನವಾಡಿಯಲ್ಲಿ ಮಕ್ಕಳು ಊಟ ಮಾಡಿದ ನಂತರ ಡಿ.ಈ.ಸಿ ಹಾಗೂ ಅಲ್ಬೆಂಡಾಝೋಲ ಮಾತ್ರೆಯನ್ನು ನುಂಗಿಸಬೇಕು ಅಲ್ಲದೆ ಪಟ್ಟಣದ ಸ್ವಚ್ಚತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳು ಗ್ರಾಮದಲ್ಲಿ ಆನೆಕಾಲೂ ರೋಗದ ಜೌಷಧಿ ನುಂಗಿಸುವಕುರಿತು ವ್ಯಾಪಕ ಪ್ರಚಾರ ಮಾಡುವುದು ಅಲ್ಲದೆ ಗ್ರಾಮ ಪಂಚಾಯತಿ ಸದಸ್ಯರ ಸಹಕಾರದೊಂದಿಗೆ ಜೌಷಧಿ ನುಂಗಿಸುವ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಾಸ್ತಾವಿಕ ನುಡಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಲಮೇಲ ದಂಡಾಧಿಕಾರಿ ಸುರೇಶ ಚಾವಲಾರ ಮಾತನಾಡಿ ಆನೆಕಾಲೂ ರೋಗ ನಿರ್ಮೂಲನೆ ಮಾಡಲು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದ್ದು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ನಮ್ಮ ತಾಲೂಕನ್ನು ಆನೆಕಾಲೂ ರೋಗ ಮುಕ್ತ ತಾಲೂಕವನ್ನಾಗಿ ಮಾಡಬೇಕು. ಶಾಲೆಯ ಎಲ್ಲಾ ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆಯನ್ನು ನಿಡುವುದು ಎಲ್ಲಾ ಮಕ್ಕಳು ಮಾತ್ರೆಯನ್ನು ನುಂಗುವಂತೆ ಕ್ರಮ ಕೈಗೂಳ್ಳಬೇಕು ಎಂದು ಸೂಚಿಸಿದರು. ಹಾಗೂ ಶಿಶು ಅಭಿವೃದ್ದಿ ಯೋಜನೆ ಇಲಾಖೆ, ಗ್ರಾಮ ಪಂಚಾಯತ ಹಾಗೂ ಪುರಸಭೆ ಅಧಿಕಾರಿಗಳು ಡಂಗುರ ಸಾರಿ ಕಸವಿಲೇವಾರಿ ವಾಹನಗಳ ಮುಖಾಂತರ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಿದರು.
ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿಗಳಾದ ಪ್ರಭು ಜಂಗಿನಮಠ, ಮಹಾಲಿಂಗ ಫಕೀರಪೂರ, ವಿರೇಂದ್ರ ಪವಾಡೆ ಸೇರಿದಂತೆ ಹಲವು ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಎಸ್.ಡಿ ಕುಲಕರ್ಣಿ ಸ್ವಾಗತಿಸಿದರು ಸಂತೋಷ ಕಾಳಶೆಟ್ಟಿ ವಂದಿಸಿದರು.


