ಸಿಂದಗಿ : ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಮೇಲೆ ಲವ್ ಜಿಹಾದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ ಕಾರಣ ಪೋಷಕರು ತಮ್ಮ ಹೆಣ್ಣು ಮಕ್ಕಳಡೆಗೆ ಗಮನ ಹರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶೇಖರಗೌಡ ಹರನಾಳ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಪ್ರಸ್ತುತ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಲವ್ ಜಿಹಾದ್ ಪ್ರಕರಣ ನಡೆಯುತ್ತಲಿವೆ . ಎಲ್ಲಾ ನಮ್ಮ ಹಿಂದೂ ಭಾಂದವರು ಎಚ್ಚರ ವಹಿಸಬೇಕು. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಾರಣ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಹಿಂದೂ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿದ್ದಾರೆ ಏಕೆಂದರೆ ದ್ವಿತೀಯ ಪಿಯುಸಿ ಮುಗಿದ ಮೇಲೆ ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ 18ರ ಪ್ರಾಯ ತುಂಬುತ್ತದೆ. ಮದುವೆ ವಿಚಾರವಾಗಿ ಸ್ವತಂತ್ರ ನಿರ್ಧಾರ ಅವರ ಕೈಯಲ್ಲಿ ಇರುತ್ತದೆ. ಕಾರಣ 12ನೆಯ ತರಗತಿ ಮುಗಿಸಿದ ವಿಧ್ಯಾರ್ಥಿನಿಯರೇ ಇವರ ಟಾರ್ಗೆಟ್ ಎಂಬುದು ಬಲ್ಲ ಮೂಲಗಳ ಮಾಹಿತಿಯಾಗಿದೆ. ಈ ಕುರಿತು ಪೋಷಕರು ಎಚ್ಚರವಹಿಸಬೇಕಿದೆ ಇಂತಹ ಮತಾಂತರ ಹೆಸರಿನಲ್ಲಿ ಮಾಡುವ “ಲವ್ ಜಿಹಾದ್” ಪ್ರಕರಣದಲ್ಲಿ ಸಿಲುಕಿಕೊಂಡರೆ ಅಂತಹ ಹೆಣ್ಣು ಮಕ್ಕಳನ್ನು ಹೊರಗೆ ತರುವುದು ಅಸಾಧ್ಯ ಎಂದು ಹೇಳಿದರು. .