ಸಿಂದಗಿ : ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆಗೊಂಡ ಸಿಂದಗಿ ಮತಕ್ಷೇತ್ರದಿಂದ 2023-ರ ಚುನಾವಣೆಗೆ ಅಧಿಕೃತ ರಣಕಹಳೆ ಬಿಜೆಪಿ ಮೂಡಿಸುತ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಾಳೆ ಬೆಳಿಗ್ಗೆ 10:೦೦ ಗಂಟೆಗೆ ಆಗಮಿಸಲಿದ್ದು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ತೆರಳಿ ಲಿಂಗೈಕ್ಯ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಜಿಗಳಿಗೆ ಗೌರವ ನಮನಗಳು ಸಲ್ಲಿಸಿ ಸಿಂದಗಿ ಮತಕ್ಷೇತ್ರಕ್ಕೆ ಆಗಮಿಸುವರು.
ಸಿಂದಗಿ ಕೇಸರಿಕರಣಗೊಂಡಿದ್ದು ಎಲ್ಲ ಬೀದಿ ದೀಪದ ಕಂಬಗಳಿಗೆ ಬಿಜೆಪಿ ಬಾವುಟ, ಜೆ.ಪಿ.ನಡ್ಡಾ ಆಗಮಿಸುವ ರಸ್ತೆಯಲ್ಲಿ ಕೇಸರಿಯಿಂದ ಶೃಂಗಾರ ಗೋಳಿಸಲಾಗುತ್ತಿದೆ. ಬ್ಯಾನರ್ ಬಂಟಿಂಗ್ ಗಳಿಂದ ಸಿಂದಗಿ ಮತಕ್ಷೇತ್ರ ಸಂಪೂರ್ಣ ಕೇಸರಿ ಮಯವಾಗಿದೆ.
ಒಟ್ಟು 50,000 ಜನರು ಸೇರುವ ನಿರೀಕ್ಷೆಯಿದೆ 40,000ಆಸನದ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಕರಪತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಕರಪತ್ರ ನೀಡುವ ಅಭಿಯಾನ ಈಗಾಗಲೆ ಮಾಡಲಾಗಿದೆ ನಾಳಿನ ಕಾರ್ಯಕ್ರಮಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಾದ ಸಿ.ಎನ್. ಅಶ್ವತ್ ನಾರಾಯಣ, ಗೋವಿಂದ ಕಾರಜೋಳ, ಹಾಗೂ ಶಾಸಕರು, ಮಾಜಿ ಶಾಸಕರು ರಾಜ್ಯ ಪದಾಧಿಕಾರಿಗಳು ಆಗಮಿಸುವರೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ ಬಿದರಿ ತಿಳಿಸಿದ್ದಾರೆ.
ಪೋಲೀಸ್ ಬಿಗಿ ಭದ್ರತೆ
ಕಾರ್ಯಕ್ರಮಕ್ಕೆ 3 ಡಿ.ವಾಯ್.ಎಸ್.ಪಿ 7ಸಿ.ಪಿ.ಆಯ್, 24 ಪಿ.ಎಸ್‌ಆಯ್, 39ಎ.ಎಸ್.ಆಯ್, 24 ಡಬ್ಲು.ಎಚ್.ಸಿ/ಡಬ್ಲು.ಪಿ.ಸಿ ಹಾಗೂ 277ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ಆಗಮಿಸದ್ದಾರೆಂದು ಸಿಂದಗಿ ಪಿ.ಎಸ್.ಆಯ್ ಸೊಮೇಶ ಗೇಜ್ಜಿ ತಿಳಿಸಿದ್ದಾರೆ.
