
ಸಿಂದಗಿ: ಯುವಾ ಬ್ರಿಗೇಡ್ ತಂಡದ ವತಿಯಿಂದ ಸಿಂದಗಿ ತಾಲೂಕಿನ ನಾಗಾವಿ ಬಿಕೆ ಗ್ರಾಮದ ಕುಡಿಯುವ ನೀರಿನ ಕಲ್ಯಾಣಿಯನ್ನು ಸ್ವಚ್ಛತೆ ಮಾಡಲಾಯಿತು.

ಕಲ್ಯಾಣಿಯ ತುಂಬಾ ಹಾಸು ಗಟ್ಟಿರುವ ಮತ್ತು ಕೊಳಕಾಗಿದ್ದರಿಂದ ಉಘೆ ಕಲ್ಯಾಣ ಕರ್ನಾಟಕದ ಅಡಿಯಲ್ಲಿ ಯುವಾ ಬ್ರಿಗೇಡ್ ಮೈಸೂರು ವಿಭಾಗ ಸಂಚಾಲಕರ ಚಂದ್ರಶೇಖರ ನಂಜನಗೂಡು ಅವರ ನೇತೃತ್ವದಲ್ಲಿ ಈ ಕಾರ್ಯವನ್ನು ಹಮ್ಮಿಕೊಂಡು ಕುಡಿಯುವ ನೀರಿನ ಕಲ್ಯಾಣಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ವಿಭಾಗ ಸಹ ಸಂಚಾಲಕ ರಾಜು ಪಾಟೀಲ, ತಾಲೂಕ ಸಂಚಾಲಕ ಮಡಿವಾಳ ವಾಲೀಕಾರ ಮತ್ತು ಕಾರ್ಯಕರ್ತರು ಈ ಒಂದು ಸೇವೆಯಲ್ಲಿ ಭಾಗವಹಿಸಿದ್ದರು.

