ಸಿಂದಗಿ: ವಿವೇಕಾನಂದ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ಮಂಟಪ ಮುರಿದುಬಿದ್ದ ಘಟನೆ ನಡೆದಿತ್ತು. ರಾತ್ರೋ – ರಾತ್ರಿ ಮರುಸ್ಥಾಪನೆಯು ಮಾಡಲಾಗಿತ್ತು, ಇಂದು ಬೆಳ್ಳಿಗೆ ಗಜಾನನ ಪೂಜಾ ಕಾರ್ಯಕ್ರಮ ನೇರವೇರಿಸಿದ ಗಜಾನನ ಮಂಡಳಿಯ ಮುಖಂಡರು ಪರಸ್ಪರ ಸಂತೋಷ ಹಂಚಿಕೊಂಡರು. ಗಜಾನನ ಮಂಡಳಿಯ ಮುಖಂಡರು ನಿನ್ನೆ ರಾತ್ರಿ ನಡೆದ ಘಟನೆಯಿಂದ ಎಲ್ಲ ಸದಸ್ಯರು ಆತಂಕದಲ್ಲಿದರು, ಆದರೆ ಕಾಂಗ್ರೇಸ್ ಮುಖಂಡರಾದ ಅಶೋಕ ಮನಗೂಳಿ ಸರ್ವ ಸದಸ್ಯರೊಂದಿಗೆ ಚರ್ಚಿಸಿದಾಗ ಗಣೇಶ ಮರುಸ್ಥಾಪನೆ ಮಾಡುವ ನಿರ್ಧಾರ ಮಂಡಳಿ ತಗೆದುಕೊಂಡಿತ್ತು. ಕೊರತೆಯ ವ್ಯವಸ್ಥೆಗೆ ನಾನಿದ್ದೇನೆ ಎಂದು ಹೇಳಿದ್ದ ಮನಗೂಳಿ ಇವರ ಮಾತು ನಮ್ಮಗೆ ಮತ್ತಷ್ಟು ಪ್ರೋತ್ಸಾಹ ಹೇಚಿಸಿತ್ತು. ಇಂದು ಬೆಳ್ಳಿಗಿನ ಜಾವದ ಪೂಜಾ ಕಾರ್ಯಕ್ರಮದಲ್ಲಿ ಅಶೋಕ ಮನಗೂಳಿ ಹಾಗೂ ನಮ್ಮೊಂದಿಗೆ ನಿಂತ ಊರಿನ ಗಣ್ಯಮಾನ್ಯರು ಪಾಲ್ಗೊಂಡಿದ್ದು ಖುಷಿ ತಂದಿದೆ ಎಂದು ಗಜಾನನ ಮಂಡಳಿಯ ರವಿ ಕುಂಟೋಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷರಾದ ಗಂಗಾಧರ ರುಕುಂಪುರ, ಉಪಾಧ್ಯಕ್ಷ ಶಿವಾನಂದ ನಿಗಡಿ, ಮಂಡಳಿಯ ಸದಸ್ಯರಾದ ಗುಂಡು ಹುಮನಾಬಾದ, ಸುರೇಶ ಹವಳಗಿ, ಸಂಜೀವ ನಂದಿಕೋಲ, ಹಾಗೂ ಊರಿನ ಮುಖಂಡರಾದ ಮುತ್ತು ಮುಂಡೇವಾಡಗಿ, ಕಾಂತಪ್ಪ ಹೂಗಾರ, ಮುತ್ತು ಸೊನ್ನದ, ಶರಣು ರುಕುಂಪುರ, ಚನ್ನಪ್ಪ ಪಟ್ಟಣಶೇಟ್ಟಿ ರಾಘು ಹೂಗಾರ ಸಂತೋಷ ಬಜಂತ್ರಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
