Friday, 23 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಭಿಕ್ಷಾಟನೆ ನಿರ್ಮೂಲನೆ ಜನಜಾಗೃತಿಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಚಾಲನೆ

ವಿಜಯಪುರ : ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಸೆಪ್ಟೆಂಬರ್ 20ರಂದು, ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಹಸಿರು ನಿಶಾನೆ ತೋರಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಬಿಕ್ಷಾಟನೆ ನಿಷೇಧ ಅಧಿನಿಯಮ 1975ರ ಸೆಕ್ಷನ್ 3ರನ್ವಯ…
ವಿಜಯಪುರ : ಬಿಕ್ಷಾಟನೆ ನಿರ್ಮೂಲನೆಯ ಜನಜಾಗೃತಿ ವಾಹನಕ್ಕೆ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಸೆಪ್ಟೆಂಬರ್ 20ರಂದು, ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಹಸಿರು ನಿಶಾನೆ ತೋರಿದರು.
ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಬಿಕ್ಷಾಟನೆ ನಿಷೇಧ ಅಧಿನಿಯಮ 1975ರ ಸೆಕ್ಷನ್ 3ರನ್ವಯ ಭೀಕ್ಷೆ ಬೇಡುವುದನ್ನು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ಮತ್ತು ನೀಡುವುದು ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕರು ಅರಿಯಬೇಕು ಎಂದು ತಿಳಿಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರು ಮಾತನಾಡಿ, ವಿಜಯಪುರ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಕೇಂದ್ರ ಪರಿಹಾರ ಸಮಿತಿ ಮತ್ತು ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ವಿಜಯಪುರ ಹಾಗೂ ಬಾಗಲಕೋಟೆ ಅವರಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ವಿಜಯಪುರ ನಗರದಲ್ಲಿ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆ ಬೇಡುವುದು ಮತ್ತು ನೀಡುವುದು ಅಪರಾಧ ಕುರಿತು ಪ್ರಚಾರ ಮಾಡಲಾಗುತ್ತದೆ. ಭಿಕ್ಷುಕರ ಸಹಾಯವಾಣಿ ಸಂಖ್ಯೆ:10581ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಬಸವರಾಜ್ ಎಸ್ ನಾಟಿಕರ್., ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ವಿಜಯಪುರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

vegadhut@gmail.com.

Leave a comment