
ವರದಿ: ಎಸ್.ಜಿ.ಬಾಬಿಕಟ್ಟಿ
ಬಾಗೇವಾಡಿ : ತಾಲೂಕಿನ ಡೋಣುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ನಿನ್ನೆ ಕೆಲಸಮುಗಿಸಿ ಸಿಬ್ಬಂದಿ ಮನೆಗೆ ತೆರಳಿದಾಗ ರಾತ್ರಿ ಸುಮಾರು ಏಳು ಮೂವತ್ತರ ಸುಮಾರಿಗೆ ನಡೆದಿರಬಹುದು ಎನ್ನಲಾಗಿದೆ. ಸಿಪಾಯಿ ಸಿಬ್ಬಂದಿ ಜಟ್ಟೇಪ್ಪ ಮೊದಲು ನೋಡಿರುವ ಬಗ್ಗೆ ತಿಳಿಸಿದ್ದಾನೆ.
ಕಂಪ್ಯೂಟರ್, ಪ್ಯಾನ್ ಗಳು, ಕೌಂಟರ್ , ಪಿ.ಒ.ಪಿ. ಮತ್ತು ಲೈಟ್ ಗಳು ಹಾಗೂ ಕೆಲವು ದಾಖಲಾತಿಗಳು ಸುಟ್ಟು ಹೋಗಿವೆ ಎಂದು ಸಿಬ್ಬಂದಿ ಮಲ್ಲನಗೌಡ ಪಾಟೀಲ ತಿಳಿಸಿದರು.
