Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಭೀಮಾ ನದಿ ಪ್ರವಾಹ ಹೆಚ್ಚುತ್ತಿದ್ದಂತೆ ಆಲಮೇಲ  ಆಡಳಿತ ಅಧಿಕಾರಿಗಳು ಬೇಟಿ.

  ಆಲಮೇಲ: ಭೀಮಾ ನದಿ ಪ್ರವಾಹ ಹೆಚ್ಚುತ್ತಿದ್ದಂತೆ ತಾಲೂಕಿನ ಬಗಲೂರ, ಶಿರಸಗಿ, ಹವಳಗಿ ಸೇರಿದಂತೆ ಹಲವು ಹಳ್ಳಿಗಳಿಗೆ ಆಲಮೇಲ ತಾಹಸೀಲ್ದಾರ್ ಸುರೇಶ ಚವಲರ ಭೇಟಿ ನೀಡಿ, ನೀರಿನ ಪ್ರವಾಹ ಪರಿಶೀಲಿಸಿ ಅಲ್ಲಿರುವ ರೈತ ಮುಖಂಡರ ಜೊತೆ ಚರ್ಚಿಸಿ ಬೆಳೆ ಹಾನಿಯಾಗಿರುವ ರೈತರು…

 

ಆಲಮೇಲ: ಭೀಮಾ ನದಿ ಪ್ರವಾಹ ಹೆಚ್ಚುತ್ತಿದ್ದಂತೆ ತಾಲೂಕಿನ ಬಗಲೂರ, ಶಿರಸಗಿ, ಹವಳಗಿ ಸೇರಿದಂತೆ ಹಲವು ಹಳ್ಳಿಗಳಿಗೆ ಆಲಮೇಲ ತಾಹಸೀಲ್ದಾರ್ ಸುರೇಶ ಚವಲರ ಭೇಟಿ ನೀಡಿ, ನೀರಿನ ಪ್ರವಾಹ ಪರಿಶೀಲಿಸಿ ಅಲ್ಲಿರುವ ರೈತ ಮುಖಂಡರ ಜೊತೆ ಚರ್ಚಿಸಿ ಬೆಳೆ ಹಾನಿಯಾಗಿರುವ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ. ಪಂಡರಾಪುರ ಹತ್ತಿರ ನೀರಿನ ಪ್ರಮಾಣ ಕಡಿಮೆಯಾಗಿರುವದು ಕಂಡು ಬಂದಿದೆ. ಆದ್ದರಿಂದ ಇಲ್ಲಿಯೂ ಕೂಡ ನೀರಿನ ಪ್ರಮಾಣ ಕಡಿಮೆಯಾಗುವ ಎಲ್ಲ ಸಾಧ್ಯತೆಗಳಿವೆ. ಪ್ರವಾಹ ಕಡಿಮೆಯಾದ ಬಳಿಕ ಬೆಳೆ ಹಾನಿ ಪರಿಶೀಲನೆ ಮಾಡುವುದಾಗಿ ಹೇಳಿದರು.
ಈ ವೇಳೆ  ಸಿಂದಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ   ಬಾಬು  ರಾಠೋಡ  ಗ್ರಾಮ ಲೆಕ್ಕಧಿಕಾರಿ ಎಸ್.ಎಸ್. ಹಳ್ಳಿ, ಪಿಡಿಓ ದೀಪಾ ಬೆನಕೋಟಗಿ, ಪೊಲೀಸ್ ಸಿಬ್ಬಂದಿ ನಿಂಗಣ್ಣ ಪೂಜಾರಿ, ಭೀಮು ಲಮಾಣಿ, ಗ್ರಾಮ ಸಹಾಯಕ ದೌಲತ್ರಾಯರ ಮಗ, ವಿಶ್ವಾನಾಥ ವಾಲಿಕಾರ ಇದ್ದರು.

ನದಿ ನೀರು ಹೆಚ್ಚಾಗಿ ಹೊಲಗದ್ದೆಗಳಿಗೆ ನುಗ್ಗಿದೆ ನದಿ ನೀರಿನ ಪ್ರಮಾಣ ಕಡಿಮೆಯಾದ ನಂತರ ಪರಿಶೀಲಿಸಿ ಬೆಳೆ ಹಾನಿಯಾಗಿರುವ ರೈತರಿಗೆ ಸರಕಾರದಿಂದ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನದಿ ನೀರು ಕಡಿಮೆಯಾಗುವವರೆಗೆ ಸಾರ್ವಜನಿಕರು ಮಕ್ಕಳು ಹಾಗೂ ವೃದ್ಧರನ್ನು ನದಿಯೆಡೆಗೆ ಸಂಚಾರ ಮಾಡಲು ಬಿಡಬೇಡಿ.  ಬಾಬು ರಾಠೋಡ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ

vegadhut@gmail.com.

Leave a comment