Monday, 26 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ಬಿ.ವೈ. ವಿಜಯೇಂದ್ರ ಹಾಗೂ ಆರ್.ಎಸ್.ಪಾಟೀಲ ಕೂಚಬಾಳ ಜನ್ಮದಿನದ ಅಂಗವಾಗಿ ಹಣ್ಣು-ಹಂಪಲು ವಿತರಣೆ

ಸಿಂದಗಿ: ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರ ಹುಟ್ಟು ಹಬ್ಬದ ತದನಿಮಿತ್ಯ ಭಾಜಪ ಸಿಂದಗಿ ಮಂಡಲದ ಹಾಗೂ ಬಿ.ವೈ ವಿಜಯೇಂದ್ರ ಅವರ ಅಭಿಮಾನಿಗಳು ಕಾರ್ಯಕರ್ತರು ಶನಿವಾರದಂದು ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು…

ಸಿಂದಗಿ: ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರ ಹುಟ್ಟು ಹಬ್ಬದ ತದನಿಮಿತ್ಯ ಭಾಜಪ ಸಿಂದಗಿ ಮಂಡಲದ ಹಾಗೂ ಬಿ.ವೈ ವಿಜಯೇಂದ್ರ ಅವರ ಅಭಿಮಾನಿಗಳು ಕಾರ್ಯಕರ್ತರು ಶನಿವಾರದಂದು ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಿಸಿ ಆಚರಿಸಿದರು.

ಬಿಜೆಪಿ ಮುಖಂಡ ಮಹಾಂತೇಶ ಸಾತಿಹಾಳ ಮಾತನಾಡಿ ಇಬ್ಬರು ನಾಯಕರು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದು ಬಿ.ವೈ ವಿಜಯೇಂದ್ರ ಮುಂದಿನ ದಿನಮಾನಗಳಲ್ಲಿ ರಾಜ್ಯದ ಅತ್ಯುನತ್ತ  ಹುದ್ದೆಗೆ  ತಲುಪಲಿ,  ಅವರು ಅತ್ಯಂತ ಸರಳ ಸ್ವಭಾವದ ವ್ಯಕ್ತಿಯಾಗಿದ್ದು ಅವರ ಯುವಕರೊಂದಿಗಿನ ಸ್ನೇಹತ್ವದಿಂದ ಕಾರ್ಯಕರ್ತರ ನಾಡಿ ಮಿಡಿತವಾಗಿ ಕೆಲಸಮಾಡುವ ಶಕ್ತಿ ಅವರಿಗೆ ಭಗವಂತ ಕರುಣಿಸಲಿ ಎಂದರು.

ನಂತರ ಮಾತನಾಡಿದ ಮಂಡಲ  ಅಧ್ಯಕ್ಷ   ಈರಣ್ಣ ರಾವೂರ  ಒಬ್ಬರು  ರಾಜ್ಯ ನಾಯಕರು ಇನ್ನೋಬರು ಜಿಲ್ಲಾ ನಾಯಕರು  ರಾಜ್ಯ ನಾಯಕರಾದ ಬಿ.ವೈ ವಿಜಯೇಂದ್ರ ಅವರು ಇದುವರೆಗು ಅವರಿಗೆ ಪಕ್ಷ  ನೀಡಿದ  ಕೆಲಸಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕರ್ತರ ಹೃದಯ ಗೆದ್ದರೆ, ಜಿಲ್ಲಾ ನಾಯಕರಾದ ಆರ್.ಎಸ್.ಪಾಟೀಲ ಕೂಚಬಾಳ ಜಿಲ್ಲೆಯ ಮಗನಾಗಿ ಬೆಳೆಯುತ್ತಿದ್ದಾರೆ ನಮ್ಮಂತಹ ಎಷ್ಟೊ ರಾಜ್ಯದ  ಕಾರ್ಯಕರ್ತರಿಗೆ ಸ್ಪೂರ್ತಿಯಾಗಿದ್ದಾರೆ ಅವರು ಇನ್ನಷ್ಟು ಉತ್ತಂಗಕ್ಕೆ ಏರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ. ಅನಿಲ ನಾಯಕ್, ಸುದರ್ಶನ ಜಂಗಣ್ಣಿ, ಸಂಗನಗೌಡ ಬಿರಾದಾರ, ಶಿವಪ್ರಸಾದ ಮಂಗಲಗಿ, ಶೇಖರ ವಾಲಿ, ನವೀನಕುಮಾರ ಮಂಗಲಗಿ, ಶಂಕರಗೌಡ ಪಾಟೀಲ (ರಾಜನಾಳ), ಸಂಗಮೇಶ ಬಿರಾದಾರ, ಸೋಮನಗೌಡ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು

vegadhut@gmail.com.

Leave a comment