Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
Uncategorized

ನಡ್ಡಾ ಆಗಮನಕ್ಕೆ ಕೇಸರಿ ಹೊತ್ತು ನಿಂತ ಸಿಂದಗಿ

ಸಿಂದಗಿ : ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆಗೊಂಡ ಸಿಂದಗಿ ಮತಕ್ಷೇತ್ರದಿಂದ 2023-ರ ಚುನಾವಣೆಗೆ ಅಧಿಕೃತ ರಣಕಹಳೆ ಬಿಜೆಪಿ ಮೂಡಿಸುತ್ತಿದೆ.   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಾಳೆ ಬೆಳಿಗ್ಗೆ 10:೦೦ ಗಂಟೆಗೆ ಆಗಮಿಸಲಿದ್ದು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ತೆರಳಿ ಲಿಂಗೈಕ್ಯ…

ಸಿಂದಗಿ : ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆಗೊಂಡ ಸಿಂದಗಿ ಮತಕ್ಷೇತ್ರದಿಂದ 2023-ರ ಚುನಾವಣೆಗೆ ಅಧಿಕೃತ ರಣಕಹಳೆ ಬಿಜೆಪಿ ಮೂಡಿಸುತ್ತಿದೆ.

 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಾಳೆ ಬೆಳಿಗ್ಗೆ 10:೦೦ ಗಂಟೆಗೆ ಆಗಮಿಸಲಿದ್ದು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ತೆರಳಿ ಲಿಂಗೈಕ್ಯ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಜಿಗಳಿಗೆ ಗೌರವ ನಮನಗಳು ಸಲ್ಲಿಸಿ ಸಿಂದಗಿ ಮತಕ್ಷೇತ್ರಕ್ಕೆ ಆಗಮಿಸುವರು. 

ಸಿಂದಗಿ ಕೇಸರಿಕರಣಗೊಂಡಿದ್ದು ಎಲ್ಲ ಬೀದಿ ದೀಪದ ಕಂಬಗಳಿಗೆ ಬಿಜೆಪಿ ಬಾವುಟ, ಜೆ.ಪಿ.ನಡ್ಡಾ ಆಗಮಿಸುವ ರಸ್ತೆಯಲ್ಲಿ ಕೇಸರಿಯಿಂದ ಶೃಂಗಾರ ಗೋಳಿಸಲಾಗುತ್ತಿದೆ. ಬ್ಯಾನರ್ ಬಂಟಿಂಗ್ ಗಳಿಂದ ಸಿಂದಗಿ ಮತಕ್ಷೇತ್ರ ಸಂಪೂರ್ಣ ಕೇಸರಿ ಮಯವಾಗಿದೆ. 

ಒಟ್ಟು 50,000 ಜನರು ಸೇರುವ ನಿರೀಕ್ಷೆಯಿದೆ  40,000ಆಸನದ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಕರಪತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಕರಪತ್ರ ನೀಡುವ ಅಭಿಯಾನ ಈಗಾಗಲೆ ಮಾಡಲಾಗಿದೆ ನಾಳಿನ ಕಾರ್ಯಕ್ರಮಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಾದ ಸಿ.ಎನ್. ಅಶ್ವತ್ ನಾರಾಯಣ, ಗೋವಿಂದ ಕಾರಜೋಳ, ಹಾಗೂ ಶಾಸಕರು, ಮಾಜಿ ಶಾಸಕರು ರಾಜ್ಯ ಪದಾಧಿಕಾರಿಗಳು ಆಗಮಿಸುವರೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ ಬಿದರಿ ತಿಳಿಸಿದ್ದಾರೆ.

ಪೋಲೀಸ್ ಬಿಗಿ ಭದ್ರತೆ

ಕಾರ್ಯಕ್ರಮಕ್ಕೆ  3 ಡಿ.ವಾಯ್.ಎಸ್.ಪಿ 7ಸಿ.ಪಿ.ಆಯ್, 24 ಪಿ.ಎಸ್‌ಆಯ್, 39ಎ.ಎಸ್.ಆಯ್, 24 ಡಬ್ಲು.ಎಚ್.ಸಿ/ಡಬ್ಲು.ಪಿ.ಸಿ  ಹಾಗೂ 277ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ಆಗಮಿಸದ್ದಾರೆಂದು ಸಿಂದಗಿ ಪಿ.ಎಸ್.ಆಯ್ ಸೊಮೇಶ ಗೇಜ್ಜಿ ತಿಳಿಸಿದ್ದಾರೆ.

vegadhut@gmail.com.

Leave a comment