Saturday, 24 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಕ್ಷೇತ್ರದ ಜನರೊಂದಿಗೆ ಬನ್ನಿ ವಿನಮಯ : ಸಂಭಂಧಗಳ ಬೆಸೆಯುವ ಬನ್ನಿ ಹಬ್ಬ

ಸಿಂದಗಿ :  ಕ್ಷೇತ್ರದ ಶಾಸಕ ರಮೇಶ ಭೂಸನೂರ  ತಮ್ಮ ಸ್ವಗೃಹದಲ್ಲಿ ಪ್ರತಿ ವರ್ಷದಂತೆ ನಾಡ ದಸರಾ ಹಬ್ಬದ ನಿಮಿತ್ಯವಾಗಿ  ಬನ್ನಿ  ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ವಿಶ್ವಕ್ಕೆ ಅಂಟಿದ ಕೋವೀಡ್ ಮಹಾಮಾರಿಯಿಂದ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಇ ಭಾರಿ…

ಸಿಂದಗಿ :  ಕ್ಷೇತ್ರದ ಶಾಸಕ ರಮೇಶ ಭೂಸನೂರ  ತಮ್ಮ ಸ್ವಗೃಹದಲ್ಲಿ ಪ್ರತಿ ವರ್ಷದಂತೆ ನಾಡ ದಸರಾ ಹಬ್ಬದ ನಿಮಿತ್ಯವಾಗಿ  ಬನ್ನಿ  ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಳೆದ ಎರಡು ವರ್ಷಗಳಿಂದ ವಿಶ್ವಕ್ಕೆ ಅಂಟಿದ ಕೋವೀಡ್ ಮಹಾಮಾರಿಯಿಂದ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಇ ಭಾರಿ ಯಾವುದೇ  ಅಡೆ-ತಡೆ ಇಲ್ಲದೆ   ದೇಶಾದ್ಯಂತ ದಸರಾ ಹಬ್ಬ ಆಚರಿಸುತ್ತಿದೆ.  ಪ್ರತಿ ವರ್ಷದಂತೆ ಈ ವರ್ಷ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರು ಸೌಹಾರ್ದತೆಯಿಂದ, ಪಾಲ್ಗೊಂಡಿದ್ದಾರೆ ಬನ್ನಿ ವಿನಿಮಯ ದಿಂದ ಸಂಭಂಧಗಳು ಬೆಸೆಯುತ್ತದೆ. ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುವ, ನಮನ್ನು ಸಶಕ್ತರನ್ನಾಗಿ ಮಾಡುವ  ಶಕ್ತಿ  ಬನ್ನಿ ಹಬ್ಬಕ್ಕೆ ಇದೆ. ದಸರಾ ನಿಮಿತ್ಯವಾಗಿ ನಾಡ ದೇವತೆ ಚಾಮುಂಡೇಶ್ವರಿಗೆ, ಆಯುಧಗಳ ಪೂಜೆ  ಸಲ್ಲಿಸಿದ ನಂತರ  ಪರಸ್ಪರ ಬನ್ನಿ ಹಂಚುವ  ಪದ್ದತಿಯು ಬಹಳ ಪುರಾತನವಾದದೆಂದು ಶಾಸಕ ಭೂಸನೂರ ಹೇಳಿದರು.

ಶಾಸಕರು ಅತ್ಯಂತ ಸರಳತೆ ಹಾಗೂ ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರುವ ವ್ಯಕ್ತಿ ಇಂದು ಬೆಳ್ಳಿಗೆಯಿಂದ ಬರತ್ತಿರುವ ಜನರ ಮಾತು ಕೇಳಿದರೆ ಅವರೊಂದಿಗೆ ಭೂಸನೂರ ಇಟ್ಟುಕೊಂಡಿರುವ  ಅವಿನಾಭಾವ ಸಂಬಂಧಗಳು  ಎಷ್ಟು ಎಂಬುದು ಕಾಣಬಹುದು ಎಂದು  ಹಿರಿಯಜೀವಿ ಯೊಬ್ಬರು ಶಾಸಕ ಭೂಸನೂರ ಕುರಿತು ಅಭಿಪ್ರಾಯ ಹಂಚಿಕೊಂಡರು.

ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ  ಶಾಸಕ ಭೂಸನೂರ ಅವರ ತಂದೆಯವರಾದ  ಬಾಳಪ್ಪ ಭೂಸನೂರ  ಇದ್ದರು ಅವರಿಗೆ ಬನ್ನಿ ನೀಡಿ ಶಾಸಕ ರಮೇಶ ಭೂಸನೂರ ಆರ್ಶಿವಾದ ಪಡೆದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀಶೈಲಗೌಡ ಮಾಗಣಗೇರಿ, ಪ್ರವೀಣ ಕಂಟಿಗೊಂಡ, ಅಶೋಕ ಸುಲ್ಪಿ, ಸಂತೋಷ ಪಾಟೀಲ ಡಂಬಳ, ಸಿದ್ದನಗೌಡ ಪಾಟೀಲ,  ಶಂಕರ ಬಗಲಿ, ಬಾಷಾಸಾಬ ತಾಂಬೋಳಿ, ಗೋಲ್ಲಾಳ ಬಂಕಲಗಿ, ರಾಜಣ್ಣ ನಾರಾಯಣಕರ,  ಹಾಗೂ ತಾಲೂಕಿನ ಅಧಿಕಾರಿಗಳು, ಕಾನಿಪ ಸದಸ್ಯರು,  ಮಹಿಳಾ ಕಾರ್ಯಕರ್ತೆಯರು,  ಯುವಕರು, ಹಿರಿಯ ಜೀವಿಗಳು ಬನ್ನಿ ವಿನಿಮಯ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

vegadhut@gmail.com.

Leave a comment