
ಸಿಂದಗಿ: ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಮೀನಾಮೇಶ ಎದುರಿಸುತ್ತಿದೆ ತದನಿಮಿತ್ಯ ಎನ್ಪಿಎಸ್ ವಿರುದ್ದ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಎನ್ಪಿಎಸ್ ಸಂಘದ ರಾಜ್ಯಾಧ್ಯಕ್ಷ ಶಾಂತಾರಮ್ ತೇಜ್ ಹೇಳಿದರು.
ತಾಲೂಕಿನ ಸಮಸ್ತ ಎನ್ಪಿಎಸ್ ನೌಕರ ಸಂಘದ ಪದಾಧಿಕಾರಿ ಬಂಧುಗಳು ಮತ್ತು ಎಲ್ಲಾ ಇಲಾಖೆಗಳ ಎನ್ಪಿಎಸ್ ನೌಕರ ಸ್ನೇಹಿತರು, ಶುಕ್ರವಾರದಂದು ಸಿಂದಗಿ ನಗರಕ್ಕೆ ಆಗಮಿಸಿದ್ದ ಓಪಿಎಸ್ ಸಂಕಲ್ಪ ಯಾತ್ರೆಯನ್ನು ಅಭೂತಪೂರ್ವವಾಗಿ ಸ್ವಾಗತಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಅವರ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪಾದಯಾತ್ರೆಯೊಂದಿಗೆ ಪ್ರಾರಂಭವಾಗಿ ಅಂಬಿಗೇರ ಚೌಡಯ್ಯ ಮತ್ತು ಸಂಗೋಳ್ಳಿ ರಾಯಣ್ಣ ಹಾಗೂ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಛೇರಿಗೆ ಹೋರಾಟದ ಘೋಷಗಳೊಂದಿಗೆ ಸಂಕಲ್ಪ ಯಾತ್ರೆಯು ತಲುಪಿತು. ನಂತರ ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಡಿಸೆಂಬರ 19 ರಿಂದ ಬೆಂಗಳೂರಿನಲ್ಲಿ ನಡೆಯುವ ಎನ್ಪಿಎಸ್ ವಿರುಧ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು. ಪ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ದರಣಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಎನ್ಪಿಎಸ್ ನೌಕರರ ಸಂಘಕ್ಕೆ ಬೆಂಬಲ ನೀಡಬೇಕಾಗಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎನ್ಪಿಎಸ್ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ಮಲ್ಲನಗೌಡ ಹಡಲಗೇರಿ ಆನಂದ ಭೂಸನೂರ, ಆರ್ ಎಚ್ ಬಿರಾದಾರ, ಶಿವಕುಮಾರ ಕಲ್ಲೂರ, ರಮೇಶ ಚಟ್ಟರಕಿ, ಎ ಎಚ್ ವಾಲಿಕಾರ, ಅರುಣ ನಾಯ್ಕೋಡಿ, ಅಲ್ತಾಪ್ ಎಮ್ ಸಾಲೋಟಗಿ, ಎಮ್ ಎಮ್ ಕೆಂಭಾವಿ, ಸುಭಾಸ ಸುಂಬಡ, ರಾಯಪ್ಪ ಇವಣಗಿ, ಶಿವು ಉಮ್ಮರಗಿ, ಸೋಮೇಶ ಪಾಟೀಲ, ಮಹಾಂತೇಶ ಬಾಗೇವಾಡಿ, ಪಿ ಎಸ್ ಅಗ್ನಿ, ಸಿದ್ದರಾಮ ಜೋಗುರ, ವಿಜಯಲಕ್ಷ್ಮೀ ರೆಬಿನಾಳ, ಸುನೀಲ ಸೇರಿದಂತೆ ಸಮಸ್ತ ಸಿಂದಗಿ ತಾಲೂಕಿನ ಎಲ್ಲ ನೌಕರರು ಉಪಸ್ಥಿತರಿದ್ದರು.

