ಸಿಂದಗಿ : ಪುರಸಭೆ ವ್ಯಾಪ್ತಿಗೆ ಬರುವ ವಾರ್ಡ್ ನಂ 6ರ ಮಹಿಳೆಯರಿಂದ ಶೌಚಾಲಯ ಸಮಸ್ಯೆ ಕುರಿತು ನೂತನ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಅಲ್ಲಿನ ಪರಿಸ್ಥಿತಿ ಕುರಿತು ಅಳಲು ತೋಡಿಕೊಂಡರು.
ಶೌಚಾಲಯ ಇಲ್ಲದಕ್ಕ ವಯಸ್ಸಾದವರಿಗೆ ಬಾಳೆ ಹೈರಾಣ ಆಗಲಾಕತ್ತಾದರೀ ವಯಸ್ಕರರು ಹೆಂಗ್ಯಾರೆ ಹೋಗಬಹುದುರೀ ಹಿರಿಯರು ಜೀವ ಕೈಯಾಗ ಇಟ್ಟುಕೊಂಡು ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಬಂದಾದರೀ ಎಂದು ಸಮಸ್ಯೆ ಕುರಿತು ಮಹಿಳೆಯರು ವಿವರಿಸಿದರು.
ಮಹಿಳೆಯರ ಸಮಸ್ಯೆ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮೋದಲ ಹಂತದಲ್ಲಿ ಅಲ್ಲಿ ಸ್ವಚ್ಛತೆ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳಿಗೆ ಸೂಚಿಸುವಂತೆ ಶಾಶ್ವತ ಪರಿಹಾರಕ್ಕಾಗಿ ಪುರಸಭೆಗೆ ಜಾಗದ ವ್ಯವಸ್ಥೆ ಬೇಕಾಗುತ್ತದೆ ಅದರ ಸಂಪೂರ್ಣ ಮಾಹಿತಿ ನೋಡಿ ಅಲ್ಲಿನ ಜನತೆಗೆ ಅನುಕೂಲ ವಾಗುವ ರೀತಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು. ಪುರಸಭೆ ಸದಸ್ಯರಾದ ಸಂದೀಪ ಚೌರ, ಹಾಸೀಂ ಆಳಂದ, ಗೋಲ್ಲಾಳ ಬಂಕಲಗಿ, ಜೊತೆಗಿದ್ದರು.
ಜಯಶ್ರೀ ಹದನೂರ, ನಿರ್ಮಲಾ ರಜಪೂತ, ಶೋಭಾ ಹಂಚಿನಾಳ, ಸಾವಿತ್ರಿ ಕುರಿ, ಗಂಗೂಬಾಯಿ ಮೂಲಿ, ಬೋರಮ್ಮ ಹಿರೇಕುರುಬರ, ಕಸ್ತೂರಿ ಲಾಳಸಂಗಿ, ಮಹಾದೇವಿ ಪಡಗಾನೂರ, ಸೀತಾಬಾಯಿ ಕೊಂಡಗೂಳಿ ಹಾಗೂ ಹಲವು ಮಹಿಳೆಯರು ಉಪಸ್ಥಿತರಿದ್ದರು.
